ಆ್ಯಪ್ನಗರ

ದೀಪಿಕಾ ಪಡುಕೋಣೆ ಧೈರ್ಯ ಮೆಚ್ಚಿ ಕೊಂಡಾಡಿತು ಭಾರತೀಯ ಚಿತ್ರರಂಗ

ದೀಪಿಕಾ ಪಡುಕೋಣೆ ಅಭಿನಯದ ಛಪಕ್‌ ಸಿನಿಮಾದ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಒಂದು ನಿಮಿಷದ ಈ ಟ್ರೇಲರ್‌ನಲ್ಲಿಆ್ಯಸಿಡ್‌ ದಾಳಿ ಸಂತ್ರಸ್ತೆಯಾಗಿ ದೀಪಿಕಾ ಪಡುಕೋಣೆಯವರ ಮನೋಜ್ಞ ಅಭಿನಯ ಮತ್ತು ಮೇಕ್‌ಓವರ್‌ ನೋಡಿ ಜನಸಾಮಾನ್ಯರು ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗವೇ ಬೆರಗಾಗಿದೆ. ಆ್ಯಸಿಡ್‌ ದಾಳಿ ಸಂತ್ರಸ್ತೆಯೊಬ್ಬಳು ಸಮಾಜದಲ್ಲಿಎದುರಿಸುವ ಟೀಕೆಗಳು, ಕೋರ್ಟ್‌ ನಲ್ಲಿಎದುರಿಸುವ ವಿಚಾರಣೆಗಳು, ಆಕೆಯ ಮನಸ್ಸಿನ ತವಕ ತಲ್ಲಣಗಳನ್ನು ಈ ಟ್ರೇಲರ್‌ನಲ್ಲಿಅತ್ಯಂತ ಭಾವಪೂರ್ವಕವಾಗಿ ತೋರಿಸಲಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿಜನರು ಪ್ರತಿಕ್ರಿಯಿಸುತ್ತಿದ್ದಾರೆ. ಮೂಲತಃ ಆ್ಯಸಿಡ್‌ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್‌ ಕಥೆಯಿರುವ ಛಪಕ್‌ ಸಿನಿಮಾದಲ್ಲಿದೀಪಿಕಾ ಪಡುಕೋಣೆಯವರ ಫಸ್ಟ್‌ ಲುಕ್‌ ಬಿಡುಗಡೆಯಾದಾಗಲೇ ಇಂಥ ಪಾತ್ರ ಮಾಡಲು ಧೈರ್ಯ ತೋರಿದ ದೀಪಿಕಾರ ವೃತ್ತಿಪರತೆಯನ್ನು ಜನರು ಕೊಂಡಾಡಿದ್ದರು. ಈಗ ಟ್ರೇಲರ್‌ ನೋಡಿದ ಮೇಲೆ ಈ ಸಿನಿಮಾ ಮೂಲಕ ದೀಪಿಕಾ ವೃತ್ತಿಜೀವನದ ಮತ್ತೊಂದು ಮಜಲನ್ನು ತಲುಪಲಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮೇಘನಾ ಗುಲ್ಜಾರ್‌ ನಿರ್ಮಾಣದ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

Vijaya Karnataka Web 11 Dec 2019, 2:29 pm

Vijaya Karnataka Web chhapaak movie trailer
ದೀಪಿಕಾ ಪಡುಕೋಣೆ ಧೈರ್ಯ ಮೆಚ್ಚಿ ಕೊಂಡಾಡಿತು ಭಾರತೀಯ ಚಿತ್ರರಂಗ

Twitter-"He changed my face, not my heart. He threw acid o...

Twitter-DEEPIKA PADUKONE AS MALTI. THAT'S IT. THAT'S THE T...

Twitter-Chhapaak is all of that and more for me... Present...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌