ಆ್ಯಪ್ನಗರ

ಆಲಿಯಾ ಭಟ್‌ಗೆ ತಲೆನೋವು ತಂದ ವೇಶ್ಯಾವಾಟಿಕೆ ಕುರಿತ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ!

ಬಾಲಿವುಡ್ ನಟಿ ಆಲಿಯಾ ಭಟ್ ಅವರು 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಆ ಸಿನಿಮಾವೇ ಆಲಿಯಾ ಹಾಗೂ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಗೆ ತಲೆನೋವು ತಂದಿದೆ.

Authored byಟೀನಾ | THE TIMES OF INDIA NEWS SERVICE 28 Dec 2020, 12:21 pm
'ಮಾಫಿಯಾ ಕ್ವೀನ್‌ ಆಫ್‌ ಮುಂಬೈ' ಕೃತಿ ಆಧರಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ಗಳು ಬಿಡುಗಡೆ ಆಗಿದ್ದಾಗ, ಅದರಲ್ಲಿ ಆಲಿಯಾ ಗೆಟಪ್‌ ಗಮನ ಸೆಳೆದಿತ್ತು. ಈಗ ಇದೇ ಸಿನಿಮಾ ಆಲಿಯಾಗೆ ತಲೆನೋವಾಗಿದೆ.
Vijaya Karnataka Web complaint against alia bhatt starrer sanjay leela bhansali gangubai kathiawadi film
ಆಲಿಯಾ ಭಟ್‌ಗೆ ತಲೆನೋವು ತಂದ ವೇಶ್ಯಾವಾಟಿಕೆ ಕುರಿತ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ!


ಜನವರಿ 7ರ ಒಳಗೆ ಉತ್ತರ ನೀಡಬೇಕು!
ಗಂಗೂಬಾಯಿ ಕಾಠಿಯಾವಾಡಿ ಅವರ ಮಗ ಈಗ ಎಫ್‌ಐಆರ್‌ ಫೈಲ್ ಮಾಡಿದ್ದಾನೆ. ಗಂಗೂಬಾಯಿ ಅವರ 4 ದತ್ತು ಪುತ್ರರಲ್ಲಿ ಒಬ್ಬರಾದ ಬಾಬುಜಿ ರಾವ್‌ಜೀ ಶಾ ಅವರು 'ಮಾಫಿಯಾ ಕ್ವೀನ್‌ ಆಫ್‌ ಮುಂಬೈ' ಕೃತಿ ಬರೆದ ಹುಸೇನ್ ಝೈದಿ ಮೇಲೆ ದೂರು ದಾಖಲಿಸಿದ್ದಾರೆ. ಸ್ವಾತಂತ್ರ್ಯದ ಹಕ್ಕು, ಗೌಪ್ಯತೆ, ಸ್ವಗೌರವಕ್ಕೆ ಚ್ಯುತಿ ತಂದ ಆರೋಪ ಹೊರಿಸಲಾಗಿದೆ. ಸಿನಿಮಾ ನಿಲ್ಲಿಸಬೇಕು, ಪುಸ್ತಕದಲ್ಲಿನ ಕೆಲ ಅಂಶಗಳನ್ನು ತೆಗೆಯಬೇಕು, ಪ್ರಸರಣ, ಪ್ರಿಂಟಿಂಗ್ ಕೂಡ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಂಬೈ ಸಿವಿಲ್ ಕೋರ್ಟ್‌ನಲ್ಲಿ ಜನವರಿ 7ರ ಒಳಗೆ ಈ ದೂರಿಗೆ ಉತ್ತರ ನೀಡಲು ಅವಕಾಶ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರ ಸೆಪ್ಟೆಂಬರ್ ತಿಂಗಳಲ್ಲಿಯೇ ಈ ಸಿನಿಮಾ ರಿಲೀಸ್ ಆಗಬೇಕಾಗಿತ್ತು. ಆದರೆ ಕೊರೊನಾದಿಂದ ಮುಂದಕ್ಕೆ ಹೋಯ್ತು.

ಶಾ ದೂರಿನಲ್ಲಿ ಏನಿದೆ?
ಈ ಸಿನಿಮಾದ ಪೋಸ್ಟರ್, ಪ್ರೋಮೋ ರಿಲೀಸ್ ಆದಾಗಿನಿಂದ ಶಾ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರಂತೆ. ಇನ್ನೂ ಸಂಬಂಧಿಕರಿಗೂ ಕೂಡ ಇರಿಸುಮುರಿಸಾಗುತ್ತಿದೆಯಂತೆ. ವೇಶ್ಯಾವಾಟಿಕೆ ಕುಟುಂಬದಿಂದ ಬಂದಿದ್ದೇವೆ ಎನ್ನುವ ಕಾರಣಕ್ಕೆ ಇತರರು ಕೂಡ ಕೆಟ್ಟದಾಗಿ ನೋಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಸಿನಿಮಾದ ಕಲಾವಿದರು, ನಿರ್ದೇಶಕ, ನಿರ್ಮಾಪಕ, ಬರಹಗಾರರ ಮೇಲೂ ಕೂಡ ಕೇಸ್ ದಾಖಲು ಮಾಡಬಹುದು ಎಂದು ಶಾ ವಕೀಲರು ಹೇಳಿದ್ದಾರೆ.
ಗಂಗೂಬಾಯಿ
Also Read-'ಗಂಗೂಬಾಯಿ' ಪಾತ್ರದಲ್ಲಿ ಆಲಿಯಾ ಭಟ್; ಇಲ್ಲೇ ಇದೆ ರೋಚಕ ಟ್ವಿಸ್ಟ್

ಗಂಗೂಬಾಯಿ ಕಾಠಿಯಾವಾಡಿ ಯಾರು?

ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರ ಮಹಿಳಾ ಪ್ರಧಾನ ಚಿತ್ರವಂತೆ. ರೆಡ್ ಲೈಟ್ ಪ್ರದೇಶದ ಕಾಮಾಟೀಪುರವನ್ನು ಒಂದುಕಾಲದಲ್ಲಿ ಗಡಗಡನೆ ನಡುಗಿಸಿದ, ವೇಶ್ಯಾವಾಟಿಕೆಯನ್ನು ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದ ಗಂಗೂಬಾಯಿ ಕಾಠಿಯಾವಾಡಿ ಅವರ ಕುರಿತ ಸಿನಿಮಾ ಇದಾಗಿದೆ. ಗಂಗೂಬಾಯಿ ಪಾತ್ರವನ್ನು ಆಲಿಯಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಮೊದಲು 'ಹೀರಾಮಂಡಿ' ಎಂಬ ಶೀರ್ಷಿಕೆ ಇಡಲಾಗಿತ್ತು. ಆನಂತರದಲ್ಲಿ ಗಂಗೂಬಾಯಿ ಎಂಬ ಹೆಸರಿಡಲಾಗಿದೆ. ಸಂಜಯ್ ಲೀಲಾ ಭನ್ಸಾಲಿ ಇದರ ನಿರ್ದೇಶಕರು.

1960ರ ಕಾಲದ ಮುಂಬೈನ ಕಾಮಾಟಿಪುರ ನೆಲಸಮ; ಇದಕ್ಕೂ ಆಲಿಯಾ ಭಟ್‌ಗೂ ಇದೆ ಕನೆಕ್ಷನ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌