ಆ್ಯಪ್ನಗರ

ಮೋದಿಗೆ ಜನ್ಮದಿನದ ಶುಭಕೋರುತ್ತಾ ಕಾಂಟ್ರವರ್ಸಿ ನಟಿ ಕಂಗನಾ ರಣಾವತ್‌ ಹೇಳಿದ ಕಟು ಸತ್ಯ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನಟಿ ಕಂಗನಾ ರಣಾವತ್‌ ಶುಭ ಕೋರಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅವರು ಮೋದಿಗೆ ವಿಶ್‌ ಮಾಡಿದ್ದಾರೆ. ಅದರಲ್ಲಿ ಕೆಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Vijaya Karnataka Web 17 Sep 2020, 12:33 pm
ಪಿಎಂ ನರೇಂದ್ರ ಮೋದಿ ಅವರನ್ನು ಹೊಗಳುವವರ ಜೊತೆಗೆ ತೆಗಳುವವರ ವರ್ಗವೂ ಇದೆ. ಅಂಥವರ ಬಗ್ಗೆ ಬಾಲಿವುಡ್‌ನ ಕಾಂಟ್ರವರ್ಸಿ ನಟಿ ಕಂಗನಾ ರಣಾವತ್‌ ಮಾತನಾಡಿದ್ದಾರೆ. ಮೋದಿ ಜನ್ಮದಿನಕ್ಕೆ ಶುಭಕೋರುವ ಸಲುವಾಗಿ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಈ ವಿಚಾರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Vijaya Karnataka Web ಕಂಗನಾ ರಣಾವತ್‌, ನರೇಂದ್ರ ಮೋದಿ


'ಮಾನ್ಯ ಪ್ರಧಾನ ಮಂತ್ರಿಗಳೇ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ನನಗೆ ನಿಮ್ಮ ಜೊತೆ ಮಾತನಾಡುವ ಅವಕಾಶ ಸಿಗಲಿಲ್ಲ. ಎರಡು-ಮೂರು ಬಾರಿ ಸಿಕ್ಕಾಗ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಮಾತ್ರ. ನಾನು ನಿಮಗೆ ಹೇಳಬಯಸುವುದು ಏನೆಂದರೆ, ಕೆಲವರು ನಿಮ್ಮನ್ನು ಸರಿಯಾಗಿ ಟ್ರೀಟ್‌ ಮಾಡಿಲ್ಲ. ನಿಮ್ಮ ಬಗ್ಗೆ ಕೆಟ್ಟ ಮಾತುಗಳನ್ನು ಆಡುತ್ತಾರೆ. ಅಪಮಾನ ಮಾಡುತ್ತಾರೆ' ಎಂದಿದ್ದಾರೆ ಕಂಗನಾ! ಆದರೆ ಅಂಥವರ ಸಂಖ್ಯೆ ತುಂಬ ಕಡಿಮೆ ಎಂಬುದು ಅವರ ಅಭಿಪ್ರಾಯ.

'ನಿಮಗೆ ಅಂಥ ಮಾತುಗಳನ್ನು ಆಡುವವರು ತುಂಬ ಕಡಿಮೆ ಜನ. ಅದೆಲ್ಲ ಒಂದು ಅಪಪ್ರಚಾರ. ಆದರೆ ಒಬ್ಬ ಸಾಧಾರಣ ಭಾರತೀಯನ ಭಾವನೆ ಬೇರೆ ಇದೆ. ಅವರು ನಿಮ್ಮನ್ನು ಪ್ರೀತಿ, ಭಕ್ತಿ, ಗೌರವಗಳಿಂದ ಕಾಣುತ್ತಾರೆ. ಇಷ್ಟೊಂದು ಪ್ರೀತಿ ಭಾರತದ ಬೇರೆ ಯಾವುದೇ ಪ್ರಧಾನ ಮಂತ್ರಿಗೂ ಸಿಕ್ಕಿಲ್ಲ. ಸೋಶಿಯಲ್‌ ಮೀಡಿಯಾ ಖಾತೆ ಇಲ್ಲದಿರುವ ಕೋಟ್ಯಂತರ ಜನರು ನಿಮಗಾಗಿ ಪ್ರಾರ್ಥಿಸುತ್ತಿದ್ದಾರೆ. ನಿಮ್ಮಂಥ ಪ್ರಧಾನಿ ಪಡೆದ ನಾವು ಭಾಗ್ಯಶಾಲಿಗಳು' ಎಂದಿದ್ದಾರೆ ಕಂಗನಾ.

also read: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಏಕವಚನದಲ್ಲಿ ಕ್ಲಾಸ್‌ ತೆಗೆದುಕೊಂಡ ನಟಿ ಕಂಗನಾ ರಣಾವತ್‌!

ಇತ್ತೀಚೆಗೆ ಸಿನಿಮಾಗಳಿಗಿಂತಲೂ ವಿವಾದದ ಕಾರಣದಿಂದಲೇ ಕಂಗನಾ ಸುದ್ದಿ ಆಗುತ್ತಿದ್ದಾರೆ. ರಿಯಾ ಚಕ್ರವರ್ತಿ, ಕರಣ್‌ ಜೋಹರ್‌, ಉದ್ಧವ್‌ ಠಾಕ್ರೆ ಮುಂತಾದವರ ವಿರುದ್ಧ ಅವರು ಕಿಡಿಕಾರುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರನ್ನು ಟೀಕಿಸುವ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಅವರ ತಾಯಿ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

also read: ಬಿಜೆಪಿಗೆ ಸೇರುತ್ತಾರಾ ಕಂಗನಾ ರಣಾವತ್‌? ರೆಬೆಲ್‌ ನಟಿಯ ಸಿಡಿಮಿಡಿ ಹಿಂದೆ ಇದೆಯಾ ರಾಜಕೀಯ ಉದ್ದೇಶ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌