ಆ್ಯಪ್ನಗರ

ಮಾಮಿ ಅಧ್ಯಕ್ಷೆಯಾದ ದೀಪಿಕಾ ಪಡುಕೋಣೆ

ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಮಾಮಿ ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ...

Vijaya Karnataka 31 Jan 2019, 5:00 am
ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಮಾಮಿ ಮುಂಬಯಿ ಫಿಲ್ಮ್‌ ಫೆಸ್ಟಿವಲ್‌ನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಕಿರಣ್‌ ರಾವ್‌ ಈ ಸ್ಥಾನದಲ್ಲಿದ್ದರು. ಇತ್ತೀಚೆಗೆ ನಡೆದ ಮಾಮಿ ಬೋರ್ಡ್‌ ಮೀಟಿಂಗ್‌ನಲ್ಲಿ ದೀಪಿಕಾ ಪಡುಕೋಣೆಯವರನ್ನು ಅವಿರೋಧವಾಗಿ ಮಾಮಿ ಚೇರ್‌ಪರ್ಸನ್‌ ಆಗಿ ಆಯ್ಕೆ ಮಾಡಲಾಗಿದೆ. ಜಗತ್ತಿನಾದ್ಯಂತ ಅವರಿಗಿರುವ ಅಭಿಮಾನಿ ಬಳಗ, ಪ್ರೇಕ್ಷ ಕರ ಜೊತೆಗಿನ ಅವರ ಒಡನಾಟ, ಮಾನಸಿಕ ಆರೋಗ್ಯದ ಕುರಿತು ಅವರು ಮೂಡಿಸಿರುವ ಜಾಗೃತಿ ಇತ್ಯಾದಿಗಳನ್ನು ಪರಿಗಣಿಸಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Vijaya Karnataka Web deepika padukone-1


ದೀಪಿಕಾ ನೇತೃತ್ವದಲ್ಲಿ ಫಿಲ್ಮ್‌ ಫೆಸ್ಟಿವಲ್‌ ಹೊಸ ಮತ್ತು ಯುವ ಪ್ರೇಕ್ಷ ಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಬೋರ್ಡ್‌ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ ಪಡುಕೋಣೆ, ಇದು ನನಗೆ ಸಿಕ್ಕಿದ ಗೌರವ ಮತ್ತು ದೊಡ್ಡ ಜವಾಬ್ದಾರಿಯಾಗಿದೆ. ಮಾಮಿ ವಿಷನ್‌ಗಳ ಬಗ್ಗೆ ನನಗೆ ಗೌರವವಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌