ಆ್ಯಪ್ನಗರ

ಬೆಂಗಳೂರಿನ ಚಾರಿಟಿಗೆ ಹೋಗಲಿದೆ ದೀಪಿಕಾ ಪಡುಕೋಣೆ ವೆಡ್ಡಿಂಗ್‌ ಗಿಫ್ಟ್‌

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆಗೆ ಅತಿಥಿಗಳು ನೀಡುವ ಉಡುಗೊರೆಗಳು ದಾನ ರೂಪದಲ್ಲಿ ಬೆಂಗಳೂರಿನ ...

Vijaya Karnataka 14 Nov 2018, 5:00 am
ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮದುವೆಗೆ ಅತಿಥಿಗಳು ನೀಡುವ ಉಡುಗೊರೆಗಳು ದಾನ ರೂಪದಲ್ಲಿ ಬೆಂಗಳೂರಿನ ಚಾರಿಟಿಯೊಂದಕ್ಕೆ ಹೋಗಲಿದೆ. ನಮಗೆ ಉಡುಗೊರೆ ಬೇಡ. ಅದನ್ನು ದಾನ ರೂಪದಲ್ಲಿ ಇಂದಿರಾ ನಗರದಲ್ಲಿರುವ ಲಿವ್‌ ಲವ್‌ ಲಾಫ್‌ ಫೌಂಡೇಷನ್‌ಗೆ ನೀಡಿ ಎಂದು ಈ ಜೋಡಿ ಕೇಳಿಕೊಂಡಿದೆ.
Vijaya Karnataka Web deepveer


ಈ ಕುರಿತ ರಿಕ್ವೆಸ್ಟ್‌ ಕಾರ್ಡ್‌ವೊಂದನ್ನು ದೀಪ್‌ವೀರ್‌ ಮಾಡಿದ್ದು, ಅದರಲ್ಲಿ ಅತಿಥಿಗಳು ಯಾರಿಗೆ, ಹೇಗೆ ಉಡುಗೊರೆಗಳನ್ನು ವರ್ಗಾಯಿಸಬೇಕು ಎಂಬುದರ ಮಾಹಿತಿಯಿದೆ. ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ಸಂಸ್ಥೆಯನ್ನು ಸ್ವತಃ ದೀಪಿಕಾ ಪಡುಕೋಣೆ ಮತ್ತು ಅವರ ಸಹೋದರಿ ಅನಿಶಾ ಪಡುಕೋಣೆ ಸ್ಥಾಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌