ಆ್ಯಪ್ನಗರ

ಟಾಕಿ ಭಾಗ ಮುಗಿಸಿದ ಧ್ರುವ

ಟಾಲಿವುಡ್‌ನಲ್ಲಿ ಹಾಟ್‌ ಟಾಪಿಕ್‌ ಆಗಿರುವ ರಾಮ್‌ಚರಣ್‌ ಅವರ ಹೊಸಸಿನಿಮಾ ‘ಧ್ರುವ’ ಸಿನಿಮಾದ ಟಾಕಿ ಭಾಗ ಚಿತ್ರೀಕರಣ ಪೂರ್ಣಗೊಂಡಿದೆ.

Vijaya Karnataka Web 29 Oct 2016, 4:30 am
ಸದ್ಯ ಟಾಲಿವುಡ್‌ನಲ್ಲಿ ಹಾಟ್‌ ಟಾಪಿಕ್‌ ಆಗಿರುವ ರಾಮ್‌ಚರಣ್‌ ಅವರ ಹೊಸಸಿನಿಮಾ ‘ಧ್ರುವ’ ಸಿನಿಮಾದ ಟಾಕಿ ಭಾಗ ಚಿತ್ರೀಕರಣ ಪೂರ್ಣಗೊಂಡಿದೆ.
Vijaya Karnataka Web dhruva telugu film complete
ಟಾಕಿ ಭಾಗ ಮುಗಿಸಿದ ಧ್ರುವ


ಇತ್ತೀಚೆಗಷ್ಟೆ ಟ್ರೈಲರ್‌ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ‘ಧ್ರುವ’ ಸಿನಿಮಾ ಮೇಲೆ ರಾಮ್‌ ಫ್ಯಾನ್ಸ್‌ ಸಖತ್‌ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತಮಿಳಿನ ಥನಿ ಒರುವನ್‌ ಸಿನಿಮಾದ ರಿಮೇಕ್‌ ಆದ ಧ್ರುವ ಸಿನಿಮಾವನ್ನು ಸುರೇಂದರ್‌ ರೆಡ್ಡಿ ನಿರ್ದೇಶಿಸಿದ್ದಾರೆ. ಕಳೆದ ವರ್ಷ ತಮಿಳಿನಲ್ಲಿ ಬಿಡುಗಡೆಯಾಗಿದ್ದ ‘ಥನಿ ಓರುವನ್‌’ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ ಜಯಂ ರವಿ ಮತ್ತು ನಯನತಾರಾ ನಾಯಕ ನಾಯಕಿಯರಾಗಿದ್ದರು. ಮೆಡಿಕಲ್‌ ಮಾμಯಾದ ಕತೆ ಹೊಂದಿದ್ದ ಈ ಸಿನಿಮಾದಲ್ಲಿ ರೋಜಾ ಖ್ಯಾತಿಯ ಅರವಿಂದಸ್ವಾಮಿ ಸ್ಟೈಲಿಶ್‌
ವಿಲನ್‌ ಆಗಿ ಕಾಣಿಸಿಕೊಂಡಿದ್ದರು.

ಐಪಿಎಸ್‌ ಅಧಿಕಾರಿಯೊಬ್ಬ ಈ ಸಿನಿಮಾದಲ್ಲಿ ರಾಮ್‌ಚರಣ್‌ ತೇಜಾ ಐಪಿಎಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರವಿಂದ್‌ ನಿರ್ಮಾಣದ ಈ ಸಿನಿಮಾದಲ್ಲಿ ರಾಕುಲ್‌ ಪ್ರೀತ್‌ಸಿಂಗ್‌ ರಾಮ್‌ಚರಣ್‌ಗೆ ಜೋಡಿಯಾಗಿ ಕಾಣಸಿಕೊಂಡಿದ್ದಾರೆ. 

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌