ಆ್ಯಪ್ನಗರ

ಮಲಾಲಾ ಬಯೋಪಿಕ್‌ನಲ್ಲಿ ತಾರೆ ದಿವ್ಯಾ ದತ್ತ

ಬಾಲಿವುಡ್‌ನಲ್ಲಿ ನೈಜಕಥೆಯಾಧಾರಿತ ಹಲವಾರು ಸಿನಿಮಾಗಳು ಬಂದಿವೆ. ಇದೀಗ ಆ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗೆ ಹೋರಾಡುತ್ತಿರುವ, ನೋಬೆಲ್ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಮಲಾಲಾ ಯೂಸಫ್‌ಜಾಯ್‌ ಕುರಿತ ಸಿನಿಮಾ ಬಾಲಿವುಡ್‌ನಲ್ಲಿ ಬರುತ್ತಿದೆ.

TNN 13 Mar 2018, 1:17 pm
ಬಾಲಿವುಡ್‌ನಲ್ಲಿ ನೈಜಕಥೆಯಾಧಾರಿತ ಹಲವಾರು ಸಿನಿಮಾಗಳು ಬಂದಿವೆ. ಇದೀಗ ಆ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗೆ ಹೋರಾಡುತ್ತಿರುವ, ನೋಬೆಲ್ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಮಲಾಲಾ ಯೂಸಫ್‌ಜಾಯ್‌ ಕುರಿತ ಸಿನಿಮಾ ಬಾಲಿವುಡ್‌ನಲ್ಲಿ ಬರುತ್ತಿದೆ. ಈ ಚಿತ್ರಕ್ಕೆ 'ಗುಲ್ ಮಕಾಯ್' ಎಂದು ಹೆಸರಿಡಲಾಗಿದೆ.
Vijaya Karnataka Web divya dutta sings for malala
ಮಲಾಲಾ ಬಯೋಪಿಕ್‌ನಲ್ಲಿ ತಾರೆ ದಿವ್ಯಾ ದತ್ತ


ಮಲಾಲಾ ಪಾತ್ರವನ್ನು ಕಿರುತೆರೆ ನಟಿ ರೀಮ್ ಶೇಖ್ ಪೋಷಿಸಿದ್ದಾರೆ. ಮಲಾಲಾ ತಂದೆತಾಯಿ ಪಾತ್ರಗಳಲ್ಲಿ ದಿವ್ಯಾ ದತ್ತ ಹಾಗೂ ಅತುಲ್ ಕುಲಕರ್ಣಿ ಕಾಣಿಸಲಿದ್ದಾರೆ. ಅಮ್ಜಾದ್ ಖಾನ್ ಚೊಚ್ಚಲ ನಿರ್ದೇಶನದ ಸಿನಿಮಾ ಇದು.

'ಒಟ್ಟು 10 ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಲಾಗಿದ್ದು, ಮಂಜು ಸುರಿಯುವ, ಸ್ಫೋಟದಂತಹ ದೃಶ್ಯಗಳನ್ನು ಏಕಕಾಲಕ್ಕೆ ಸೆರೆಹಿಡಿಯಲಾಗಿದೆ' ಎಂದು ಮುಂಬೈ ಮಿರರ್ ಜತೆಗೆ ಮಾತನಾಡುತ್ತಾ ದಿವ್ಯಾ ದತ್ತ ತಿಳಿಸಿದ್ದಾರೆ. ಒಟ್ಟು 500 ಮಂದಿ ಇರುವ ಸ್ಫೋಟದ ಸನ್ನಿವೇಶವನ್ನು ಸೆರೆಹಿಡಿಯಬೇಕಾಗಿದೆ. ಕಾಶ್ಮೀರದ ಶೂಟಿಂಗ್ ಮುಗಿದ ಬಳಿಕ ಆ ಸನ್ನಿವೇಶ ಸೆರೆಹಿಡಯಲಾಗುತ್ತದೆ ಎಂದಿದ್ದಾರೆ.

ಚಿತ್ರ ಮಲಾಲ ಅವರ ಸ್ವಾತ್ ಕಣಿವೆಯಲ್ಲಿನ ಬದುಕಿನಿಂದ ಹಿಡಿದು ನೊಬೆಲ್ ಪ್ರಶಸ್ತಿ ಪಡೆಯುವವರೆಗಿನ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಮುಕೇಶ್ ರಿಷಿ, ಅಭಿಮನ್ಯು ಸಿಂಗ್ ಮಾತ್ತು ಅಜಾಜ್ ಖಾನ್ ಸಹ ಇದ್ದಾರೆ. ಚಿತ್ರದಲ್ಲಿ ಉರ್ದು ಮತ್ತು ಪಾಸ್ತೋ ಭಾಷೆಯ ಹಾಡೊಂದು ಇದ್ದು ಆ ಹಾಡಿನಲ್ಲಿ ದಿವ್ಯಾ ಕಾಣಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌