ಆ್ಯಪ್ನಗರ

ಅಂಕಲ್‌ ಎನ್ನಬೇಡಿ ಎಂದ ಸಲ್ಮಾನ್‌ ಖಾನ್‌

ಬಾಲಿವುಡ್‌ ಸುಲ್ತಾನ್‌ ಸಲ್ಮಾನ್‌ ಖಾನ್‌ರಿಗೂ ತಮ್ಮನ್ನು ಅಂಕಲ್‌ ಎಂದು ಕರೆಸಿಕೊಳ್ಳಲು ಒಂಚೂರೂ ಇಷ್ಟವಿಲ್ಲ...

Vijaya Karnataka 13 Jul 2018, 5:00 am
ಬಾಲಿವುಡ್‌ ಸುಲ್ತಾನ್‌ ಸಲ್ಮಾನ್‌ ಖಾನ್‌ರಿಗೂ ತಮ್ಮನ್ನು ಅಂಕಲ್‌ ಎಂದು ಕರೆಸಿಕೊಳ್ಳಲು ಒಂಚೂರೂ ಇಷ್ಟವಿಲ್ಲ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ನನ್ನನ್ನು ಭಾಯ್‌ ಎಂದು ಕರೆಯಿರಿ ಆದರೆ ಅಂಕಲ್‌ ಎನ್ನಬೇಡಿ ಎಂದು ಹೇಳಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಬಹುತೇಕ ಮಹಿಳೆಯರನ್ನು ಆಂಟಿ ಎಂದು ಕರೆದರೆ ರೇಗುತ್ತಾರೆ ಎಂಬೊಂದು ಅಭಿಪ್ರಾಯದ ಬಗ್ಗೆ ಮಾತನಾಡಿದ ಸಲ್ಲು, ಮಹಿಳೆಯರು ಮಾತ್ರವಲ್ಲ, ಪುರುಷರಿಗೂ ಅಂಕಲ್‌ ಎಂದು ಕರೆಸಿಕೊಳ್ಳುವುದು ಇಷ್ಟವಿಲ್ಲ. ನಾನೂ ಇದಕ್ಕೆ ಹೊರತಲ್ಲ. ನನ್ನ ಸಂಬಂಧಿಕರ ಮಕ್ಕಳಿಗೂ ನನ್ನನ್ನು ಅಂಕಲ್‌ ಎಂದು ಕರೆಯಬೇಡಿ ಎಂದು ತಾಕೀತು ಮಾಡಿದ್ದೇನೆ ಎಂದು ವಿವರಿಸಿದ್ದಾರೆ. ನನ್ನ ಸ್ನೇಹಿತರ ಮಕ್ಕಳು ನನ್ನನ್ನು ಅಂಕಲ್‌ ಎಂದು ಕರೆದರೆ ನಾನು ಅವರನ್ನು ಭೇಟಿಯಾಗುವುದೇ ಇಲ್ಲ ಎಂದು ಅವರು ಹೇಳಿದ್ದಾರೆ.
Vijaya Karnataka Web Mumbai: Bollywood actor Salman Khan during music launch of the upcoming film Ra...
Bollywood actor Salman Khan during music launch of the upcoming film "Race 3", in Mumbai on Friday, Jun 01, 2018.Photo)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌