ಆ್ಯಪ್ನಗರ

ಹೊಸ ಅವತಾರದಲ್ಲಿ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ

ಡ್ರೀಮ್‌ ಗರ್ಲ್‌ ಕಂಠಸಿರಿಯಲ್ಲಿ ಆಲ್ಬಂವೊಂದು ಹೊರಬರುತ್ತಿದೆ. ಒಟ್ಟು 8 ಭಜನೆ ಗೀತೆಗಳನ್ನು ಹೊಂದಿರುವ ಈ ಆಲ್ಬಂಗೆ 'ಗೋಪಾಲಾ ಕೋ ಸಮರ್ಪಣ್‌' ಎಂದು ಹೆಸರಿಡಲಾಗಿದೆ.

ಟೈಮ್ಸ್ ಆಫ್ ಇಂಡಿಯಾ 8 Aug 2017, 3:27 pm
ಬಾಲಿವುಡ್‌ನ ಡ್ರೀಮ್‌ ಗರ್ಲ್‌ ಎಂದು ಕರೆಸಿಕೊಳ್ಳುವ ಹೇಮಾ ಮಾಲಿನಿ ಒಬ್ಬ ನಟಿಯಾಗಿ ಮಾತ್ರವಲ್ಲದೆ ರಾಜಕಾರಣಿ, ನೃತ್ಯಗಾರ್ತಿ ಹಾಗೂ ಚಿತ್ರದ ನಿರ್ಮಾಪಕಿಯಾಗಿ ಮಿಂಚಿದವರು. ಇದೀಗ ಹೇಮಾ ಗಾಯಕಿಯಾಗಿ ಮಿಂಚಲು ಸಿದ್ಧರಾಗಿದ್ದಾರೆ.
Vijaya Karnataka Web dream girl hema malini turns a bhajan singer
ಹೊಸ ಅವತಾರದಲ್ಲಿ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ


ಹೌದು, ಡ್ರೀಮ್‌ ಗರ್ಲ್‌ ಕಂಠಸಿರಿಯಲ್ಲಿ ಆಲ್ಬಂವೊಂದು ಹೊರಬರುತ್ತಿದೆ. ಒಟ್ಟು 8 ಭಜನೆ ಗೀತೆಗಳನ್ನು ಹೊಂದಿರುವ ಈ ಆಲ್ಬಂಗೆ 'ಗೋಪಾಲಾ ಕೋ ಸಮರ್ಪಣ್‌' ಎಂದು ಹೆಸರಿಡಲಾಗಿದೆ. ಆಗಸ್ಟ್‌ 13 ಅಂದರೆ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ಆಲ್ಬಂ ಬಿಡುಗಡೆಯಾಗಲಿದೆ. ಮುಂಬಯಿನ ಜುಹುದಲ್ಲಿರುವ ಇಸ್ಕಾನ್‌ ಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷ.


ಹೇಮಾ ಮಾಲಿನಿ ಹಾಡಿರುವ ಭಕ್ತಿ ಪ್ರಧಾನ ಆಲ್ಬಂಗೆ ಪಂಡಿತ್ ಜಸ್ರಾಜ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ರಾಜನ್-ಸಾಜನ್ ಮಿಶ್ರಾ ಮತ್ತು ಪಂಡಿತ್ ಶಿವಕುಮಾರ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆಗಳಿಗೆ ನಾರಾಯಣ್‌ ಅಗರವಾಲ್‌ ಎಂಬುವರು ಸಾಹಿತ್ಯ ರಚಿಸಿದ್ದಾರೆ.

ಈ ಆಲ್ಬಂ ಒಪ್ಪಿಕೊಳ್ಳಲು ಹೇಮಾ ಮಾಲಿನಿ ಹಿಂದೇಟು ಹಾಕಿದರಂತೆ. ' ನಾರಾಯಣ್‌ ಅವರು ಈ ಆಲ್ಬಂನ್ನು ನಾನೇ ಹಾಡಬೇಕು ಎಂದು ಕೇಳಿಕೊಂಡಾಗ ನಾನು ಸ್ವಲ್ಪ ಹಿಂಜರಿದೆ. ಏಕೆಂದರೆ ನಾನು ವೃತ್ತಿಪರ ಗಾಯಕಿ ಅಲ್ಲ. ಅಪೂರ್ಣ ಮನಸ್ಸಿನಿಂದ ನಾನು ಯಾವ ಕೆಲಸವನ್ನೂ ಮಾಡುವುದಿಲ್ಲ. ನಂತರ ಈ ಆಲ್ಬಂನ ಸಂಗೀತವನ್ನು ಆಲಿಸಿದ ನಂತರ ನನ್ನಲ್ಲಿ ಭರವಸೆ ಮೂಡಿತು. ಇಂಥ ಒಂದು ಅವಕಾಶ ಪ್ರತಿದಿನ ಬರುವುದಿಲ್ಲವೆಂದು ಅನಿಸಿ ಹಾಡಲು ಒಪ್ಪಿಕೊಂಡೆ' ಎನ್ನುತ್ತಾರೆ ಹೇಮಾ. ಅಷ್ಟೇ ಅಲ್ಲದೆ ಈ ಆಲ್ಬಂಗಾಗಿ ಅಗತ್ಯ ಸಂಗೀತಾಭ್ಯಾಸವನ್ನೂ ಮಾಡಿದರಂತೆ ಡ್ರೀಮ್‌ ಗರ್ಲ್‌.

Dream Girl Hema Malini turns a bhajan singer

We've seen her donning several hats — as an actress, a dance exponent, politician, filmmaker and what not! Now, Dream Girl Hema Malini is all set to launch her debut bhajan album, Gopala Ko Samarpan.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌