ಆ್ಯಪ್ನಗರ

ವೀರ್‌ ಚಕ್ರ ಗೌರವ ಪಡೆದ ಐಎಎಫ್‌ ಯೋಧನ ಪಾತ್ರದಲ್ಲಿ ಇಮ್ರಾನ್‌ ಹಷ್ಮಿ

ಬಾಲಿವುಡ್ ನಟ ಇಮ್ರಾನ್ ಹಸ್ಮಿ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಇದೀಗ ರೊಮ್ಯಾಂಟಿಕ್ ಕಡೆಯಿಂದ ಬಯೋಪಿಕ್‌ಗೆ ಹೊರಳಿದ್ದಾರೆ. ವೀರ್ ಚಕ್ರ ಗೌರವಕ್ಕೆ ಪಾತ್ರರಾದ ಐಎಎಫ್ ಯೋಧ ಕೆಸಿ ಕುರುವಿಲ್ಲಾ ಪಾತ್ರದಲ್ಲಿ ಕಾಣಿಸಲಿದ್ದಾರೆ ಇಮ್ರಾನ್.

Vijaya Karnataka 2 Jul 2019, 3:54 pm
ಬಾಲಿವುಡ್‌ನಲ್ಲಿ ಕಿಸ್ಸಿಂಗ್‌ ಬಾಯ್‌ ಎಂದೇ ಕರೆಸಿಕೊಳ್ಳುವ ನಟ ಇಮ್ರಾನ್‌ ಹಷ್ಮಿ ಹೊಸ ಸಿನಿಮಾವೊಂದರಲ್ಲಿ ವೀರ್‌ ಚಕ್ರ ಗೌರವ ಪಡೆದ ಐಎಎಫ್‌ ಯೋಧ ಕೆ.ಸಿ ಕುರುವಿಲ್ಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಕೆಸಿ ಕುರುವಿಲ್ಲಾ ಅವರು ಪಾಕ್‌ ವಿರುದ್ಧ ವೈಮಾನಿಕ ಬಾಂಬ್‌ ದಾಳಿಯ ನೇತೃತ್ವ ವಹಿಸಿ ಅದರಲ್ಲಿ ಯಶಸ್ವಿಯಾಗಿದ್ದರು. ಈಗ ಅವರ ಬಗ್ಗೆ ಸಿನಿಮಾ ಬರುತ್ತಿದೆ.
Vijaya Karnataka Web imran-hasmi


ವಾಯುಸೇನಾ ಎಂಬ ಟೈಟಲ್‌ ಇರುವ ಈ ಸಿನಿಮಾವನ್ನು ವಿಜಯ್‌ ರತ್ನಾಕರ್‌ ಗುತ್ತೆ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗಾಗಿ ನೈಜ ಏರ್‌ಬೇಸ್‌ನಲ್ಲಿ ಯುದ್ಧ ವಿಮಾನಗಳ ಮೂಲಕ ದಾಳಿ ಮಾಡುವ ದೃಶ್ಯಗಳ ಚಿತ್ರೀಕರಣಕ್ಕಾಗಿ ಈ ಚಿತ್ರತಂಡವು ಸರ್ಕಾರದ ಅನುಮತಿ ಪಡೆಯಲು ಯತ್ನಿಸುತ್ತಿದೆ.

ಈ ಕುರಿತು ಮಾತನಾಡಿರುವ ಚಿತ್ರ ನಿರ್ದೇಶಕರು, ವಾಯುಸೇನಾ ಸಿನಿಮಾದಲ್ಲಿ ಇಮ್ರಾನ್‌ ಹಷ್ಮಿ ಈ ಹಿಂದೆ ಯಾವತ್ತೂ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುದ್ಧ ಕುರಿತ ಸಿನಿಮಾವಾದರೂ ಇದರಲ್ಲಿ ಮಾನವೀಯ ಅಂಶವಿರುವ ಕಥೆಯೊಂದಿದೆ ಎಂದು ಹೇಳಿದ್ದಾರೆ. ಈ ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌