ಆ್ಯಪ್ನಗರ

ಜನಾಂಗೀಯ ನಿಂದನೆ: ಕ್ಷ ಮೆ ಕೇಳಿದ ಇಶಾ ಗುಪ್ತ

ನೈಜೀರಿಯಾದ ಫುಟ್‌ಬಾಲ್‌ ಆಟಗಾರ ಅಲೆಕ್ಸಾಂಡರ್‌ ಇವೊಬಿಗೆ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ...

Vijaya Karnataka 31 Jan 2019, 5:00 am
ನೈಜೀರಿಯಾದ ಫುಟ್‌ಬಾಲ್‌ ಆಟಗಾರ ಅಲೆಕ್ಸಾಂಡರ್‌ ಇವೊಬಿಗೆ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ನಟಿ ಇಶಾ ಗುಪ್ತ ಈಗ ಕ್ಷ ಮೆ ಕೋರಿದ್ದಾರೆ. ನಾನು ಕೂಡಾ ಕ್ರೀಡಾ ಪ್ರೇಮಿ. ನಾನು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ ಇವೊಬಿಗೆ ಜನಾಂಗೀಯ ನಿಂದನೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಆ ಪಂದ್ಯ ನೋಡುವ ಉಂಟಾದ ಹತಾಶೆಯಿಂದ ಈ ರೀತಿ ಕಾಮೆಂಟ್‌ ಮಾಡಿದ್ದೇನೆ. ಇದಕ್ಕಾಗಿ ನಾನು ಕ್ಷ ಮೆ ಕೋರುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
Vijaya Karnataka Web Mumbai: Bollywood actors Esha Gupta walks the ramp for launch of Marks & Spence...
Bollywood actors Esha Gupta walks the ramp for launch of Marks & Spencer's Spring Summer 18 collection in Mumbai on Thursday.Photo


ಇತ್ತೀಚೆಗೆ ಇಶಾ ಗುಪ್ತ ತಮ್ಮ ಗೆಳತಿಯೊಂದಿಗೆ ನಡೆಸಿದ ವಾಟ್ಸ್‌ಆ್ಯಪ್‌ ಸಂಭಾಷಣೆಯ ಸ್ನ್ಯಾಪ್‌ಶಾಟ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಇದರಲ್ಲಿ ಇವೊಬಿ ಗೊರಿಲ್ಲಾ ಮುಖದವರು, ವಿಕಾಸವಾದ ಅವರಲ್ಲೇ ಕೊನೆಗೊಂಡಿದೆ ಎಂಬಂತ ಪದಗಳಿದ್ದವು. ಇದಕ್ಕಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಗುರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌