ಆ್ಯಪ್ನಗರ

ಅಭಿಮಾನಿಗಳಿಗೆ ಬೇಸರ ತರಿಸಿದ ರಜನಿಕಾಂತ್ 2.0 ಚಿತ್ರದ ಟೀಸರ್‌ ಲೀಕ್‌!

ಚಿತ್ರ ಬಿಡುಗಡೆಯ ಮುನ್ನ ಚಿತ್ರದ ದೃಶ್ಯಗಳು ಲೀಕ್‌ ಆಗುತ್ತಿರುವುದರಿಂದ ಚಿತ್ರತಂಡಕ್ಕೆ ಬಹುದೊಡ್ಡ ಅನ್ಯಾಯವಾಗುತ್ತಿದೆ.

Vijaya Karnataka Web 4 Mar 2018, 4:43 pm
ಚಿತ್ರ ಬಿಡುಗಡೆಯ ಮುನ್ನ ಚಿತ್ರದ ದೃಶ್ಯಗಳು ಲೀಕ್‌ ಆಗುತ್ತಿರುವುದರಿಂದ ಚಿತ್ರತಂಡಕ್ಕೆ ಬಹುದೊಡ್ಡ ಅನ್ಯಾಯವಾಗುತ್ತಿದೆ. ಚಿತ್ರ ಲೀಕ್‌ ಆಗುವುದನ್ನು ತಡೆಯಲು ಚಿತ್ರತಂಡ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಖದೀಮರು ತಮ್ಮ ಕೃತ್ಯ ಮುಂದುವರೆಸುತ್ತಲೇ ಇದ್ದಾರೆ.
Vijaya Karnataka Web fans unhappy about 2 0 teaser leak
ಅಭಿಮಾನಿಗಳಿಗೆ ಬೇಸರ ತರಿಸಿದ ರಜನಿಕಾಂತ್ 2.0 ಚಿತ್ರದ ಟೀಸರ್‌ ಲೀಕ್‌!


ಇದೀಗ ಭಾರತೀಯ ಚಿತ್ರರಂಗದಲ್ಲಿಯೇ ಬಹು ನಿರೀಕ್ಷೆ ಹುಟ್ಟಿಸಿದ್ದ ಸೂಪರ್‌ ಸ್ಟಾರ್ ರಜನಿ ಕಾಂತ್‌ ಹಾಗೂ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿನಯದ 2.0 ಚಿತ್ರದ ಟೀಸರ್‌ ಬಿಡುಗಡೆಯ ಮುನ್ನವೇ ಲೀಕ್‌ ಆಗಿರುವುದು ರಜನಿ ಅಭಿಮಾನಿಗಳಿಗೆ ಹಾಗೂ ಚಿತ್ರತಂಡಕ್ಕೆ ಬೇಸರ ತಂದಿದೆ.

ಲೀಕ್‌ ಆದ ಫೂಟೇಜ್‌ನಲ್ಲಿ ದೃಶ್ಯದ ತುಣುಕು 44 ಸೆಕೆಂಡ್‌ ಇದ್ದು ಈ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಈ ರೀತಿ ಲೀಕ್‌ ಮಾಡುವ ಚಿತ್ರಕ್ಕಾಗಿ ದುಡಿದವರ ಕಠಿಣ ಪರಿಶ್ರಮವನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಮರ್ಶಕರು, ಚಿತ್ರ ರಸಿಕರು ಅಭಿಪ್ರಾಯ ಪಟ್ಟಿದ್ದಾರೆ.

ದೃಶ್ಯ ಲೀಕ್‌ ಆಗಿರುವುದಕ್ಕೆ ಬೇಸರಗೊಂಡಿರುವ ರಜನಿಕಾಂತ್‌ ಪುತ್ರಿ' “Leaking content online before the official release should not be TOLERATED or ENCOURAGED ! This is a heartless act ignoring hard work, efforts and sentiments of the makers for few seconds of excitement !!! #BeAshamed #StopPiracy #StopMisusingDigitalMedium (ಬಿಡುಗಡೆಯ ಮುನ್ನವೇ ಚಿತ್ರ ಲೀಕ್ ಮಾಡಿದವರನ್ನು ಕ್ಷಮಿಸಬಾರದು, ಕೆಲವು ಕ್ಷಣದ ಕುತೂಹಲಕ್ಕಾಗಿ ಚಿತ್ರಕ್ಕಾಗಿ ದುಡಿದವರ ಕಠಿಣ ಶ್ರಮವನ್ನು ಪರಿಗಣಿಸದೆ ಇರುವುದು ಹೃದಯ ಹೀನ ಕೃತ್ಯವಾಗಿದೆ, ಅವರಿಗೆ ನಾಚಿಕೆಯಾಗಬೇಕು' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಚಿತ್ರದಲ್ಲಿ ಆ್ಯಮಿ ಜಾಕ್ಸನ್‌ ನಾಯಕಿಯಾಗಿದ್ದು ಎ. ಆರ್ ರೆಹಮಾನ್‌ ಸಂಗೀತವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌