ಆ್ಯಪ್ನಗರ

Farhan Akhtar: ಯಶ್ ಜತೆಗಿನ ಫೋಟೋ ಹಂಚಿಕೊಂಡು ಹೊಸ ಸುಳಿವು ನೀಡಿದ ಫರ್ಹಾನ್ ಅಖ್ತರ್

ಎಕ್ಸೆಲ್ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ರಿತೇಶ್ ಸಿಧ್ವಾನಿ ಜತೆಗೆ ಬಾಲಿವುಡ್‌ನ ಬಹುಮುಖ ಪ್ರತಿಭೆ ಫರ್ಹಾನ್ ಅಖ್ತರ್ 'ಕೆಜಿಎಫ್: ಚಾಪ್ಟರ್ 1' ಸಿನಿಮಾವನ್ನು ಹಿಂದಿಯಲ್ಲಿ ರಿಲೀಸ್ ಮಾಡಿದ್ದರು. ಆ ಸಿನಿಮಾ ಬಾಕ್ಸ್ ಆಫೀಸಲ್ಲಿ ಭರ್ಜತಿ ಯಶಸ್ಸು ಸಾಧಿಸಿದ್ದು ಗೊತ್ತೇ ಇದೆ. ಇದೀಗ ಯಶ್ ಜತೆಗಿನ ಫೋಟೋವನ್ನು ಫರ್ಹಾನ್ ಹಂಚಿಕೊಂಡಿದ್ದಾರೆ. ಈ ಮೂಲಕ ಕೆಜಿಎಫ್: ಚಾಪ್ಟರ್ 2 ಸಿನಿಮಾ ಬಗ್ಗೆಯೂ ಸುಳಿವು ನೀಡಿದ್ದಾರೆ.

Times Now 23 Jan 2019, 3:36 pm
ನಟ, ನಿರ್ದೇಶಕ, ನಿರ್ಮಾಪಕ, ಸ್ಕ್ರೀನ್ ರೈಟರ್ ಹಾಗೂ ಹಿನ್ನೆಲೆ ಗಾಯಕ ಫರ್ಹಾನ್ ಅಖ್ತರ್ ಸದ್ಯಕ್ಕೆ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ತಮ್ಮ ನಿರ್ಮಾಣದ ಮುಂದಿನ ಚಿತ್ರ 'ಗಲ್ಲಿ ಬಾಯ್' ಬಿಡುಗಡೆ ಸಿದ್ಧವಾಗಿದೆ. ಬಹುಮುಖ ಪ್ರತಿಭೆಯ ಫರ್ಹಾನ್ ಅಖ್ತರ್ ಈಗ ಯಶ್ ಜತೆಗಿನ ಫೋಟೋ ಹಂಚಿಕೊಂಡು ಕುತೂಹಲ ಕೆರಳಿಸಿದ್ದಾರೆ.
Vijaya Karnataka Web farhan-akhtar


ಯಶ್ ಅಭಿನಯದ ಕೆಜಿಎಫ್: ಚಾಪ್ಟರ್ 1 ಸಿನಿಮಾವನ್ನು ಎಕ್ಸೆಲ್ ಎಂಟರ್‌ಟೇನ್‌ಮೆಂಟ್ ಲಾಂಛನದಲ್ಲಿ ರಿತೇಶ್ ಸಿಧ್ವಾನಿ ಜತೆಗೆ ಫರ್ಹಾನ್ ಅಖ್ತರ್ ಹಿಂದಿಯಲ್ಲಿ ರಿಲೀಸ್ ಮಾಡಿದ್ದರು. ಹಿಂದಿ ಬಾಕ್ಸ್ ಆಫೀಸರಲ್ಲಿ ಶಾರುಖ್ ಖಾನ್ ಅವರ 'ಝೀರೋ' ಚಿತ್ರಕ್ಕೆ ಕೆಜಿಎಫ್ ಸೆಡ್ಡು ಹೊಡೆದದ್ದು ಗೊತ್ತೇ ಇದೆ. ಈಗ ಯಶ್ ಜತೆಗಿನ ಫೋಟೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ.

ಅಷ್ಟೇ ಅಲ್ಲದೆ ಫೋಟೋ ಅಡಿಬರಹ ಈ ರೀತಿ ಇದೆ, "ಯಶ್‌ರ ಕೆಜಿಎಫ್ ಚಿತ್ರಕ್ಕೆ ನೀವು ತೋರಿದ ಪ್ರೀತಿಯನ್ನು ಸಂಭ್ರಮಿಸುತ್ತಿದ್ದೇನೆ. ಚಾಪ್ಟರ್ 2 ಚಿತ್ರದ ನಿರೀಕ್ಷೆಯಲ್ಲಿದ್ದೇನೆ" ಎಂದು ಯಶ್‌ಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಕೆಜಿಎಫ್: ಚಾಪ್ಟರ್ 2 ಸಿನಿಮಾ ಸಹ ಹಿಂದಿಯಲ್ಲಿ ಬಿಡುಗಡೆ ಮಾಡುವ ಸೂಚನೆಯನ್ನು ಫರ್ಹಾನ್ ಅಖ್ತರ್ ನೀಡಿದಂತಾಗಿದೆ.

View this post on Instagram Celebrating the love you all have shown KGF with the rocking @thenameisyash .. here’s looking forward to Chapter 2. #filmhasnoboundaries A post shared by Farhan Akhtar (@faroutakhtar) on Jan 22, 2019 at 9:25am PST

ವಿಜಯ್ ಕಿರಗಂದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಹಿಂದಿ ಆವೃತ್ತಿ ಬಾಕ್ಸ್ ಆಫೀಸಲ್ಲಿ ₹ 40 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಅದೇ ರೀತಿ ಎಲ್ಲಾ ಆವೃತ್ತಿಗಳ ಒಟ್ಟಾರೆ ಗಳಿಕೆ ₹ 200 ಕೋಟಿ ದಾಟಿದೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌