ಯುವ ನಟ ಟೈಗರ್ ಶ್ರಾಫ್ರಿಗೆ ಅಭಿಮಾನಿಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿದೆಯಂತೆ. ಅವರು ಎಲ್ಲಿ ಹೋದರೂ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ಅಭಿನಯದ ಮುನ್ನಾ ಮೈಕಲ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲೂ ಅವರಿಗೆ ಇಂಥ ಅನುಭವಗಳಾಗಿವೆ. ಮಾಲ್ವೊಂದಕ್ಕೆ ಹೋಗಿದ್ದ ಅವರನ್ನು ದೊಡ್ಡ ಸಂಖ್ಯೆಯಲ್ಲಿದ್ದ ಅಭಿಮಾನಿಗಳು ಸುತ್ತುವರಿದಿದ್ದಾರೆ. ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡಿದ್ದ ಟೈಗರ್ ಶ್ರಾಫ್ರ ಬೆನ್ನಿಗೆ ಸಣ್ಣ ಗಾಯವಾಗಿತ್ತು. ಇದರಿಂದ ಚಿಂತಿತರಾಗಿರುವ ಅವರ ತಾಯಿ ಆಯೇಷಾ ಶ್ರಾಫ್ ತಮ್ಮ ಮಗನಿಗೆ ಸಾರ್ವಜನಿಕರ ಮುಂದೆ ಹೋಗದಂತೆ ತಾಕೀತು ಮಾಡಿದ್ದಾರಂತೆ. ಅಲ್ಲದೆ ಎಲ್ಲಿ ಹೋದರೂ ಕನಿಷ್ಠ ಐದು ಬಾಡಿಗಾರ್ಡ್ಗಳನ್ನು ಇಟ್ಟುಕೊಳ್ಳುವಂತೆ ಹೇಳಿದ್ದಾರೆ.
ಟೈಗರ್ ಶ್ರಾಫ್ಗೆ ಐದು ಬಾಡಿಗಾರ್ಡ್ಸ್
ಯುವ ನಟ ಟೈಗರ್ ಶ್ರಾಫ್ರಿಗೆ ಅಭಿಮಾನಿಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿದೆಯಂತೆ...
Vijaya Karnataka Web 25 Jul 2017, 11:37 am