ಆ್ಯಪ್ನಗರ

ನಾಲ್ಕೇ ದಿನಕ್ಕೆ ನಾಲ್ಕನೇ ಹೆಂಡತಿಗೆ ವಿಚ್ಛೇದನ ನೀಡಿದ 'ಮಹಾನ್' ನಟ!

ನಟ ನಿಕೊಲಾಸ್ ಅವರು ಮೇಕಪ್ ಆರ್ಟಿಸ್ಟ್ ಎರಿಕಾ ಕೊಯ್ಕೆ ಜೊತೆ 2018ರ ಏಪ್ರಿಲ್‌ನಿಂದ ಸಂಬಂಧದಲ್ಲಿದ್ದರು. ಆದರೆ, ಇತ್ತೀಚೆಗಷ್ಟೇ 'ಲಾಸ್ ವೇಗಾಸ್‌'ನಲ್ಲಿ ಮದುವೆ ಮಾಡಿಕೊಂಡರು. ಆದರೆ ನಾಲ್ಕೇ ದಿನಕ್ಕೆ ಎರಿಕಾಳಿಂದ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

Vijaya Karnataka Web 31 Mar 2019, 5:53 pm
ಹಾಲಿವುಡ್ ನಟ ನಿಕೋಲಾಸ್ ಅವರು ತಮ್ಮ ನಾಲ್ಕನೇ ಹೆಂಡತಿಗೇ ನಾಲ್ಕೇ ದಿನಕ್ಕೆ ಡಿವೋರ್ಸ್ ಕೊಟ್ಟಿದ್ದಾರೆ. ಒಂದಾದ ನಂತರ ಮತ್ತೊಂದರಂತೆ ನಾಲ್ಕು ಮದುವೆಗಳನ್ನು ಆಗಿದ್ದ ನಟ ನಿಕೊಲಾಸ್ ಕೇಜ್ ಇದೀಗ ನಾಲ್ಕನೇ ಹೆಂಡತಿಗೆ ಮದುವೆಯಾದ ನಾಲ್ಕೇ ದಿನಕ್ಕೆ ಡೈವೋರ್ಸ್ ನೀಡಿದ್ದಾರೆ. ಇನ್ನು ಐದನೇ ಮದುವೆಯಾದರೆ ಐದೇ ದಿನಕ್ಕೆ ವಿಚ್ಛೇದನ ಕೊಡಬಹುದು ಎಂದು ಜನರು ಟೀಕೆ ಮಾಡತೊಡಗಿದ್ದಾರೆ ಎನ್ನಲಾಗಿದೆ.
Vijaya Karnataka Web nicolascage3103


ನಟ ನಿಕೊಲಾಸ್ ಅವರು ಮೇಕಪ್ ಆರ್ಟಿಸ್ಟ್ ಎರಿಕಾ ಕೊಯ್ಕೆ ಜೊತೆ 2018ರ ಏಪ್ರಿಲ್‌ನಿಂದ ಸಂಬಂಧದಲ್ಲಿದ್ದರು. ಆದರೆ, ಇತ್ತೀಚೆಗಷ್ಟೇ ಅದೇನಾಯಿತೋ ಏನೋ ಅವರನ್ನು 'ಲಾಸ್ ವೇಗಾಸ್‌'ನಲ್ಲಿ ಮದುವೆ ಮಾಡಿಕೊಂಡರು. ಆದರೆ ನಾಲ್ಕೇ ದಿನಕ್ಕೆ ಎರಿಕಾಳಿಂದ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

"ಎರಿಕಾ ಸ್ವಭಾವ ಸರಿ ಇಲ್ಲ. ಅವಳು ಇನ್ನೊಬ್ಬನೊಂದಿಗೆ ಆಕೆಗಿದ್ದ ಸಂಬಂಧವನ್ನು ಮುಚ್ಚಿಟ್ಟಿದ್ದಳು. ಇದೊಂದು ಮೋಸದ ಮದುವೆ. ಹೀಗಾಗಿ ನಾನು ಅವಳಿಂದ ಬೇರೆಯಾಗುತ್ತಿದ್ದೇನೆ. ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೇನೆ" ಎಂದು ನಿಕೊಲಾಸ್ ಕಾರಣ ನೀಡಿದ್ದಾರೆ.

ನಿಕೊಲಾಸ್ ಈ ಹಿಂದೆ ಅಲೈಸ್ ಕಿಮ್, ಲಿಸಾ ಮೇರಿ ಪ್ರಿಸ್ಲೆ ಮತ್ತು ಪ್ಯಾಟ್ರಿಕಾ ಅಕ್ರ್ವೆಟ್ಟೆ ಅವರನ್ನು ಮದುವೆಯಾಗಿದ್ದಲ್ಲದೆ, ಈ ಮೂವರಿಗೂ ಡೈವೋರ್ಸ್ ಕೊಟ್ಟು ಬೇರೆಯಾಗಿದ್ದರು. ಅದರಲ್ಲೂ ಲಿಸಾಗೆ ಮದುವೆಯಾದ 108 ದಿನಕ್ಕೆ ಡೈವೋರ್ಸ್ ನೀಡಿದ್ದರು.

ಅಂದಹಾಗೆ, ಇವರಿಬ್ಬರ ವಿಚ್ಛೇದನಕ್ಕೆ ಹಾಲಿವುಡ್ ದಿಗ್ಭ್ರಮೆ ವ್ಯಕ್ತಪಡಿಸಿದೆಯಂತೆ. ಏಕೆಂದರೆ, ಮದುವೆಯಾಗಿ ನಾಲ್ಕೇ ದಿನಕ್ಕೆ ಡೈವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ ಎಂದರೆ ಅವರಿಬ್ಬರ ಸಂಬಂಧ ಅದೆಷ್ಟು ಹದಗೆಟ್ಟಿರಬಹುದು ಎಂದು ಊಹಿಸಲೂ ಅಸಾಧ್ಯ ಎಂದು ಹಲವರು ಹೇಳಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌