ಆ್ಯಪ್ನಗರ

'ನಾನೇನು ಅದ್ಭುತ ಸುಂದರಿ ಅಲ್ಲ, ಸಾಧಾರಣ ಲುಕ್‌ನ ಹುಡುಗಿ'

ನಾನು ಅತ್ಯಂತ ಅದ್ಭುತವಾದ ಸುಂದರಿ ಅಲ್ಲದಿರುವುದೇ ನನ್ನ ದೊಡ್ಡ ಶಕ್ತಿ ಎಂದು ತಾಪ್ಸಿ ಪನ್ನು ಹೇಳಿದ್ದಾರೆ. ಈ ಕಾರಣದಿಂದಲೇ ಸಿನಿಮಾದಲ್ಲಿ ನನ್ನ ಪ್ರತಿ ಪಾತ್ರಗಳು ಜನರನ್ನು ತಲುಪುತ್ತವೆ. ನನ್ನ ಸಾಧಾರಣ ಲುಕ್‌ ಭಾರತದ ಸಾಮಾನ್ಯ ಮಹಿಳೆಯರನ್ನು ಹೋಲುತ್ತದೆ.

Vijaya Karnataka 13 Mar 2019, 5:00 am
"ತಾನೊಬ್ಬ ಸಾಧಾರಣ ಭಾರತೀಯ ಹುಡುಗಿ, ನೋಡಲು ನಾನೇನು ಅಷ್ಟೇನು ಸುಂದರವಾಗಿ ಇಲ್ಲದಿರುವುದೇ ನನ್ನ ಅತಿ ದೊಡ್ಡ ಶಕ್ತಿ" ಎಂದಿದ್ದಾರೆ ಬಾಲಿವುಡ್ ನಟಿ ತಾಪ್ಸಿ ಪನ್ನು. ಇತ್ತೀಚೆಗೆ ಟೈಂಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ಈ ರೀತಿ ಹೇಳಿದ್ದಾರೆ.
Vijaya Karnataka Web taapasee


ನಾನು ಅತ್ಯಂತ ಅದ್ಭುತವಾದ ಸುಂದರಿ ಅಲ್ಲದಿರುವುದೇ ನನ್ನ ದೊಡ್ಡ ಶಕ್ತಿ ಎಂದು ತಾಪ್ಸಿ ಪನ್ನು ಹೇಳಿದ್ದಾರೆ. ಈ ಕಾರಣದಿಂದಲೇ ಸಿನಿಮಾದಲ್ಲಿ ನನ್ನ ಪ್ರತಿ ಪಾತ್ರಗಳು ಜನರನ್ನು ತಲುಪುತ್ತವೆ. ನನ್ನ ಸಾಧಾರಣ ಲುಕ್‌ ಭಾರತದ ಸಾಮಾನ್ಯ ಮಹಿಳೆಯರನ್ನು ಹೋಲುತ್ತದೆ. ಇದುವೇ ನನ್ನ ಪ್ಲಸ್‌ ಪಾಯಿಂಟ್‌ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾರ್ಡ್‌ ವರ್ಕ್‌ ಮೇಲೆ ಸದಾ ನಂಬಿಕೆಯಿಡುವ ತಾವು ತನಗನಿಸಿದ್ದನ್ನು ನೇರವಾಗಿ ಹೇಳಲು ಅಂಜುವುದಿಲ್ಲ ಎಂದು ತಾಪ್ಸಿ ಹೇಳಿದ್ದಾರೆ. ಬಾಲಿವುಡ್‌ನ ಪಿಂಕ್‌ ಸಿನಿಮಾದಿಂದ ಖ್ಯಾತರಾದ ಅವರು ಇತ್ತೀಚೆಗೆ ಬಿಡುಗಡೆಯಾದ ಬದ್ಲಾ ಸಿನಿಮಾದಲ್ಲೂ ನಟಿಸಿದ್ದಾರೆ.

ಇತ್ತೀಚೆಗೆ ತೆರೆಕಂಡ ಬದ್ಲಾ ಚಿತ್ರದಲ್ಲಿನ ಅಭಿನಯಕ್ಕಾಗಿ ತಾಪ್ಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಚಿತ್ರವನ್ನು ಶುಜೋಯ್ ಘೋಷ್ ನಿರ್ದೇಶಿಸಿದ್ದು ಅಮಿತಾಬ್ ಬಚ್ಚನ್ ಸಹ ಅಭಿನಯಿಸಿದ್ದಾರೆ. ಪಿಂಕ್ ಚಿತ್ರದ ಬಳಿಕ ಅಮಿತಾಬ್ ಮತ್ತು ತಾಪ್ಸಿ ಜತೆಯಾಗಿ ಅಭಿನಯಿಸಿದ ಎರಡನೇ ಸಿನಿಮಾ ಇದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌