ಆ್ಯಪ್ನಗರ

ಜನಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದೇನೆ: ಶಾರುಖ್ ಖಾನ್ ಪತ್ನಿ ಗೌರಿ

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ತಾನೂ ಸಹ ಎಲ್ಲರಂತೆ ಸಾಮಾನ್ಯ ಜೀವನ ಮುನ್ನಡೆಸುತ್ತಿದ್ದೇನೆ. ಸ್ಟಾರ್ ಪತ್ನಿ ಎಂಬ ಕಾರಣಕ್ಕೆ ಐಶಾರಾಮಿ ಜೀವನ ನಡೆಸುತ್ತಿಲ್ಲ ಎಂದಿದ್ದಾರೆ. ಜನಸಾಮಾನ್ಯರಂತೆ ನಾನೂ ವರ್ಕಿಂಗ್ ವುಮನ್ ಎಂದು ಹೇಳಿದ್ದಾರೆ.

Vijaya Karnataka Web 6 Jul 2019, 11:25 am
ಜನಸಾಮಾನ್ಯರಂತೆ ನಾನೂ ಸಹ ಸಾಧಾರಣ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್. ಇಂಟೀರಿಯರ್ ಡಿಸೈನರ್ ಆಗಿರುವ ಗೌರಿ ಖಾನ್ ಇತ್ತೀಚೆಗೆ 'ಗ್ರ್ಯಾವಿಟಸ್ ರತ್ನ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Vijaya Karnataka Web gauri-khan


ಈ ಸಂದರ್ಭದಲ್ಲಿ ನಿಮ್ಮ ಕರಿಯರ್ ಮೇಲೆ ಸೂಪರ್ ಸ್ಟಾರ್ ಪತ್ನಿ ಎಂಬ ಇಮೇಜ್ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. "ಶಾರುಖ್‌ರಿಂದಾಗಿ ನನ್ನ ಸುತ್ತಲಿನ ಪರಿಸರ ಪಾಸಿಟಿವಿಟಿಯಿಂದ ತುಂಬಿಹೋಗುತ್ತದೆ. ಇಲ್ಲಿ ನೆಗಟೀವ್ ಸಹ ಇರಬಹುದು. ಆದರೆ ನಾನು ಪಾಸಿಟಿವಿಟಿಯನ್ನು ಮಾತ್ರ ಸ್ವೀಕರಿಸುತ್ತೇನೆ. ನೆಗಟೀವ್‌ ಪಕ್ಕಕ್ಕಿಡುತ್ತೇನೆ" ಎಂದಿದ್ದಾರೆ. [ಮಗಳ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ಶಾರುಖ್ ಖಾನ್]

ಮುಂದುವರೆದು, "ನಾನು ಗೌರಿ ಖಾನ್ ಡಿಸೈನ್ಸ್ ಆರಂಭಿಸಿದಾಗ ಶಾರುಖ್ ನನಗೆ ಬಹಳಷ್ಟು ಸಹಾಯ ಮಾಡಿದರು. ಅವರು ನನ್ನ ಕುಟುಂಬಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಅವರೊಬ್ಬ ಶ್ರೇಷ್ಠ ತಂದೆ, ಪತಿ. ಆದಕಾರಣ ಶಾರುಖ್ ಪತ್ನಿಯಾಗಿ ನಾನು ಕೇವಲ ಒಳಿತನ್ನೇ ನೋಡುತ್ತೇನೆ, ಸ್ವೀಕರಿಸುತ್ತೇನೆ" ಎಂದಿದ್ದಾರೆ.

ಬಳಿಕ ಸ್ಟಾರ್ ಪತ್ನಿಯಾಗಿ ಮಾಧ್ಯಮಗಳನ್ನು ಹೇಗೆ ಎದುರಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, "ನಾನು ತುಂಬಾ ಸರಳ ಜೀವನ ನಡೆಸುತ್ತಿದ್ದೇನೆ. ಜನಸಾಮಾನ್ಯರಂತೆ ನಾನೂ ವರ್ಕಿಂಗ್ ವುಮನ್. ನನ್ನ ವೃತ್ತಿಗೆ ಸಂಬಂಧಿಸಿದ ಅಗತ್ಯಗಳಿಗಾಗಿ ಮಾತ್ರ ಮಾಧ್ಯಮಗಳ ಮುಂದೆ ಬರುತ್ತಿರುತ್ತೇನೆ. ನಾವು ಮಾಡುವ ಕೆಲಸ ನಾಲ್ಕು ಮಂದಿಗೆ ಗೊತ್ತಾಗಬೇಕಾದರೆ ಮಾಧ್ಯಮ ಬೇಕೆಬೇಕು" ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಗೌರಿಯನ್ನು ನೋಡಿದ ಶಾರುಖ್ ಪ್ರೀತಿಯಲ್ಲಿ ಬಿದ್ದರು. ಕೆಲವು ವರ್ಷ ಪ್ರೀತಿಸಿಕೊಂಡ ಇವರು 1991ರಲ್ಲಿ ಮದುವೆ ಮೂಲಕ ಒಂದಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌