ಆ್ಯಪ್ನಗರ

ನಾನು ಹಳೆ ಕುದುರೆ: ಜಾನ್‌ ಅಬ್ರಹಾಮ್‌

ಪರಮಾಣು ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಬಾಲಿವುಡ್‌ ನಟ ಜಾನ್‌ ಅಬ್ರಹಾಮ್‌, ತಾವು ಸಿನಿಮಾ ರಂಗದ ಹಳೆ ಕುದುರೆ ಇದ್ದಂತೆ...

Vijaya Karnataka 15 Jun 2018, 5:00 am
ಪರಮಾಣು ಸಿನಿಮಾ ಯಶಸ್ಸಿನಿಂದ ಖುಷಿಯಾಗಿರುವ ಬಾಲಿವುಡ್‌ ನಟ ಜಾನ್‌ ಅಬ್ರಹಾಮ್‌, ತಾವು ಸಿನಿಮಾ ರಂಗದ ಹಳೆ ಕುದುರೆ ಇದ್ದಂತೆ. ಈಗಲೂ ನನಗೆ ಸಿಕ್ಕಾಪಟ್ಟೆ ಹೊಗಳಿಕೆ ಮತ್ತು ಟೀಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ. ಹದಿನೈದು ವರ್ಷಗಳ ನನ್ನ ಸಿನಿ ಕರಿಯರ್‌ನಲ್ಲಿ ನಾನು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಸಿನಿಮಾ ಸಕ್ಸೆಸ್‌ ಆದಾಗ ಜನರು ಹೊಗಳುತ್ತಾರೆ. ವಿಫಲವಾದಾಗ ತೆಗಳುತ್ತಾರೆ. ಆಯಾ ಕಾಲಕ್ಕೆ ಜನರ ಮನಸ್ಸಿನಲ್ಲಿ ಏನಿರುತ್ತದೆ ಎಂದು ತಿಳಿದುಕೊಂಡು ಪಾತ್ರ ಆಯ್ಕೆ ಮಾಡಿಕೊಂಡರೆ ಯಶಸ್ಸು ನಮ್ಮದಾಗುತ್ತದೆ ಎಂದು ಅವರು ಹೇಳಿದ್ದಾರೆ.
Vijaya Karnataka Web New Delhi: Bollywood actor John Abraham during the film promotion of Parmanu: T...
Bollywood actor John Abraham during the film promotion of 'Parmanu: The Story of Pokhran', in New Delhi, on Tuesday.Photo)


ಭಾರತದಲ್ಲಿ 1998 ರಲ್ಲಿ ನಡೆದ ಪೋಖ್ರಾನ್‌ ಪರಮಾಣು ಪರೀಕ್ಷೆಯ ಕಥೆ ಹೊಂದಿರುವ ಪರಮಾಣು ಸಿನಿಮಾದಲ್ಲಿ ಜಾನ್‌ ಅಬ್ರಹಾಮ್‌ ಉತ್ತಮ ನಟನೆ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಜಾನ್‌, ಈ ಬಗ್ಗೆ ಈಗಲೇ ಹೇಳಲಾಗುವುದಿಲ್ಲ. ಆದರೆ ಇದು ಕಮರ್ಷಿಯಲ್‌, ಎಂಟರ್ಟೈನ್‌ಮೆಂಟ್‌ ಮತ್ತು ದೇಶಭಕ್ತಿಯನ್ನು ಹೊಂದಿರುವ ಉತ್ತಮ ಸಿನಿಮಾ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌