ಆ್ಯಪ್ನಗರ

ಮತ್ತೊಮ್ಮೆ ಅಪ್ಪನಾಗುತ್ತಿರುವ ಸೈಫ್ ಅಲಿ ಖಾನ್; ಪ್ರತಿಕ್ರಿಯಿಸಿದ ಸೈಫ್‌ರ 19 ವರ್ಷದ ಪುತ್ರ ಇಬ್ರಾಹಿಂ!

ಬಾಲಿವುಡ್‌ನ ಸ್ಟಾರ್ ಕಲಾವಿದರಾದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೈಫ್ ಮೊದಲ ಪತ್ನಿ ಮಗ ಇಬ್ರಾಹಿಂ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ.

Vijaya Karnataka Web 13 Aug 2020, 12:02 pm
ಅಧಿಕೃತವಾಗಿ ಬಾಲಿವುಡ್ ತಾರಾ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮತ್ತೊಮ್ಮೆ ಪಾಲಕರಾಗಿರುತ್ತಿರುವ ಬಗ್ಗೆ ಹೇಳಿದ್ದಾರೆ. ಈ ವಿಷಯ ಕೇಳಿ ಹಲವರು ಇವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿ ಮಗ ಇಬ್ರಾಹಿಂ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಏನದು?
Vijaya Karnataka Web ibrahim ali khan comments on saif ali khan and kareena kapoor second child
ಮತ್ತೊಮ್ಮೆ ಅಪ್ಪನಾಗುತ್ತಿರುವ ಸೈಫ್ ಅಲಿ ಖಾನ್; ಪ್ರತಿಕ್ರಿಯಿಸಿದ ಸೈಫ್‌ರ 19 ವರ್ಷದ ಪುತ್ರ ಇಬ್ರಾಹಿಂ!


ಅಧಿಕೃತ ಹೇಳಿಕೆ ನೀಡಿದ ಸೈಫ್ ದಂಪತಿ!
'ನಮ್ಮ ಕುಟುಂಬಕ್ಕೆ ಇನ್ನೊಂದು ಸದಸ್ಯರ ಸೇರ್ಪಡೆಯಾಗುವ ಬಗ್ಗೆ ಹೇಳಿಕೊಳ್ಳಲು ತುಂಬ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ, ಪ್ರೀತಿಗೆ ಧನ್ಯವಾದಗಳು' ಎಂದು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅಧಿಕೃತವಾಗಿ ಹೇಳಿದ್ದಾರೆ. ಈ ಖುಷಿಯ ವಿಷಯ ತಿಳಿದು ಅನೇಕ ಸೆಲೆಬ್ರಿಟಿಗಳು ಕರೀನಾ ದಂಪತಿಗೆ ಶುಭ ಹಾರೈಸಿದ್ದಾರೆ.

ಅಮೃತಾ ಸಿಂಗ್‌ರನ್ನು ಮದುವೆಯಾಗಿದ್ದ ಸೈಫ್
1991ರಲ್ಲಿ ಸೈಫ್ ಅಲಿ ಖಾನ್ ಅವರು ನಟಿ ಅಮೃತಾ ಸಿಂಗ್‌ರನ್ನು ಹಲವು ವಿವಾದಗಳ ಮಧ್ಯೆ ಮದುವೆಯಾಗಿದ್ದರು. ಅಮೃತಾ, ಸೈಫ್‌ಗಿಂತ 13 ವರ್ಷ ವಯಸ್ಸಿನಲ್ಲಿ ಹಿರಿಯರು. ಈ ಜೋಡಿಗೆ ಇಬ್ರಾಹಿಂ, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. 13 ವರ್ಷಗಳ ವೈವಾಹಿಕ ಜೀವನ ನಡೆಸಿದ ನಂತರದಲ್ಲಿ ಇವರು 2004ರಲ್ಲಿ ವಿಚ್ಛೇದನ ಪಡೆದರು. ಈ ದಂಪತಿಗೆ 2001ರಲ್ಲಿ ಇಬ್ರಾಹಿಂ ಅಲಿ ಖಾನ್ ಜನಿಸಿದ್ದನು. ಸಾರಾ ಅಲಿ ಖಾನ್ ಈಗ ಬಾಲಿವುಡ್‌ನ ಭರವಸೆಯ ನಟಿ.

ಸೈಫ್ ಮೊದಲ ಮಗ 19 ವರ್ಷದ ಇಬ್ರಾಹಿಂ ಹೇಳಿದ್ದೇನು?
ಸೈಫ್ ಅಲಿ ಖಾನ್ ಸಹೋದರಿ ಸೋಹಾ ಅಲಿ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸೈಪ್ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ 'ಅಬ್ಬಾ' ಎಂದು ಇಬ್ರಾಹಿಂ ಕಾಮೆಂಟ್ ಮಾಡಿದ್ದಾನೆ. ಸಾರಾ ಅಲಿ ಖಾನ್ ಬರ್ತಡೇ ಪ್ರಯುಕ್ತ ಇಬ್ರಾಹಿಂ ಪ್ರಸ್ತುತ ಗೋವಾದಲ್ಲಿದ್ದಾನೆ. ರಿಯಾ ಕಪೂರ್, ರಿಧಿಮಾ ಕಪೂರ್ ಮುಂತಾದವರು ಸೈಫ್ ದಂಪತಿಗೆ ಶುಭ ಹಾರೈಕೆ ತಿಳಿಸಿದ್ದಾರೆ.

Also Read-ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ ನಟ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್!

ಸೈಫ್ ಮತ್ತು ಕರೀನಾಗೆ ಈಗಾಗಲೇ ತೈಮೂರ್ ಎಂಬ ಮಗನಿದ್ದಾನೆ!
ಸೈಫ್ ಅಲಿ ಖಾನ್ 2012ರಲ್ಲಿ ಕರೀನಾ ಕಪೂರ್‌ರನ್ನು ಮದುವೆಯಾಗಿದ್ದರು. ಈ ಮದುವೆಗೆ ಸೈಫ್ ಮೊದಲ ಪತ್ನಿ ಮಕ್ಕಳಾದ ಸಾರಾ ಹಾಗೂ ಇಬ್ರಾಹಿಂ ಸಾಕ್ಷಿಯಾಗಿದ್ದರು. 2016ರ ಡಿಸೆಂಬರ್ 20ರಂದು ಈ ದಪಂತಿಗೆ ತೈಮೂರ್ ಎಂಬ ಮಗ ಜನಿಸಿದ್ದನು. ಈಗ ತೈಮೂರ್‌ಗೆ ಮೂರುವರೇ ವರ್ಷ. ಈತ ಈಗ ಬಾಲಿವುಡ್‌ನ ಹಲವರು ಫೇವರಿಟ್ ಸ್ಟಾರ್ ಕಿಡ್.ಒಟ್ಟಾರೆಯಾಗಿ ಸೈಫ್‌ಗೆ ಈಗಾಗಲೇ ಮೂರು ಮಕ್ಕಳಿದ್ದಂತಾಗಿದೆ, ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Also Read-ಕೊರೊನಾ ಹೊಡೆತಕ್ಕೆ ಸಿಲುಕಿದ ಆಮೀರ್ ಖಾನ್ ಸಿನಿಮಾ! 'ಲಾಲ್ ಸಿಂಗ್ ಛಡ್ಡಾ' ರಿಲೀಸ್ ಯಾವಾಗ?

View this post on Instagram Coming soon!! Couldn’t resist! Congratulations @kareenakapoorkhan be safe and healthy - and radiant as ever ! ❤️ A post shared by Soha (@sakpataudi) on Aug 12, 2020 at 4:20am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌