ಆ್ಯಪ್ನಗರ

ಗೆಲುವಿನ ನಿರೀಕ್ಷೆಯಲ್ಲಿ ಇಲಿಯಾನಾ

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚಿದ್ದ ಇಲಿಯಾನಾ ಕಳೆದೆರಡು ವರ್ಷಗಳಿಂದ ಕಣ್ಮರೆಯಾಗಿದ್ದರು. ಇದೀಗ 'ರುಸ್ತುಂ' ತೆರೆಗೆ ಸಿದ್ಧವಾಗಿದ್ದು ಇಲಿಯಾನಾ ಮತ್ತೆರೆಡು ಹಿಂದಿ ಸಿನಿಮಾಗಳಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.

Vijaya Karnataka Web 5 Aug 2016, 4:00 am

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸ್ಟಾರ್‌ ಹಿರೋಯಿನ್‌ ಆಗಿ ಮಿಂಚಿದ್ದ ಇಲಿಯಾನಾ ಕಳೆದೆರಡು ವರ್ಷಗಳಿಂದ ಕಣ್ಮರೆಯಾಗಿದ್ದರು. 'ಬರ್ಫಿ' ಚಿತ್ರದೊಂದಿಗೆ ಬಾಲಿವುಡ್‌ಗೆ ಹಾರಿದ್ದ ಬೆಡಗಿ ದಕ್ಷಿಣದ ಸಿನಿಮಾಗಳಿಂದ ಕೊಂಚ ಬ್ರೇಕ್‌ ಪಡೆದಿದ್ದು ಹೌದು. ಯಾವಾಗ ಬಾಲಿವುಡ್‌ ಕೈಹಿಡಿಯಲಿಲ್ಲವೋ, ಮತ್ತೆ ತೆಲುಗಿಗೆ ಮರಳುವುದಾಗಿ ಘೋಷಿಸಿದ್ದರು. ಆದರೆ ಅಕ್ಷ ಯ್‌ ಕುಮಾರ್‌ ಜತೆಗಿನ 'ರುಸ್ತುಂ' ಸಿನಿಮಾದ ಅವಕಾಶ ಸಿಗುತ್ತಿದ್ದಂತೆ ಅವರು ತಮ್ಮ ನಿಲುವು ಬದಲಿಸಿದರು. ಇದೀಗ 'ರುಸ್ತುಂ' ತೆರೆಗೆ ಸಿದ್ಧವಾಗಿದ್ದು ಇಲಿಯಾನಾ ಮತ್ತೆರೆಡು ಹಿಂದಿ ಸಿನಿಮಾಗಳಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.

ಅಕ್ಷ ಯ್‌ ಕುಮಾರ್‌ ಅಭಿನಯದ 'ರುಸ್ತುಂ' ನೈಜ ಘಟನೆಯನ್ನಾಧರಿಸಿದ ಸಿನಿಮಾ. 1959ರ ನಾನಾವತಿ ಘಟನೆ ಪ್ರೇರಣೆಯಿಂದ ತಯಾರಾಗಿರುವ ಚಿತ್ರದಲ್ಲಿ ಇಲಿಯಾನಾಗೆ ನಟನೆಗೆ ಉತ್ತಮ ಸ್ಕೋಪ್‌ ಇರುವಂತಹ ಪಾತ್ರ ಸಿಕ್ಕಿದೆ. ದಕ್ಷಿಣದಲ್ಲಿ ಗ್ಲಾಮರ್‌ಗಷ್ಟೇ ಸೀಮಿತರಾಗಿದ್ದ ಇಲಿಯಾನಾಗೆ ಈಗ ಅಭಿನಯಕ್ಕೆ ಸ್ಕೋಪ್‌ ಇರುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಉಮೇದು. ಹಾಗಾಗಿ ಆಕೆ ಇಂತಹದ್ದೇ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. 'ರುಸ್ತುಂ ಸಿನಿಮಾ ನನ್ನ ವೃತ್ತಿ ಬದುಕಿಗೆ ಮಹತ್ವದ ನಿರುವು ನೀಡಲಿದೆ. ಗ್ಲಾಮರ್‌ನಲ್ಲಿ ಮಾತ್ರ ಗುರುತಿಸುತ್ತಿದ್ದವರು ನನ್ನನ್ನು ಇಲ್ಲಿ ಬೇರೆಯದ್ದೇ ಆದ ರೀತಿ ನೋಡಲಿದ್ದಾರೆ' ಎನ್ನುತ್ತಾರವರು.

ಇಪ್ಪತ್ತೆಂಟರ ಹರೆಯದ ಇಲಿಯಾನಾ ದುಬಾರಿ ಬಜೆಟ್‌ನ 'ಬಾದ್‌ಷಾಹೋ' ಹಿಂದಿ ಸಿನಿಮಾದಲ್ಲಿ ನಟಿಸುವ ಸೂಚನೆಗಳಿವೆ. 'ನಿರ್ದೇಶಕ ಮಿಲನ್‌ ಲುಥಾರಿಯಾ ಅವರೊಂದಿಗೆ ಚರ್ಚಿಸಿದ್ದೇನೆ. ಇದೊಂದು ಅಪರೂಪದ ಕತೆಯಾಗಿದ್ದು ನನಗೆ ತುಂಬಾ ಇಷ್ಟವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನಾನು ಚಿತ್ರದ ನಾಯಕಿಯಾಗಿ ನಟಿಸಲಿದ್ದೇನೆ. ಹಿಂದೆಂದೂ ನೋಡಿರದಂತಹ ಪಾತ್ರದಲ್ಲಿ ಪ್ರೇಕ್ಷಕರು ನನ್ನನ್ನು ನೋಡಲಿದ್ದಾರೆ' ಎನ್ನುತ್ತಾರವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌