ಆ್ಯಪ್ನಗರ

ನರೇಂದ್ರ ಮೋದಿ ಬಯೋಪಿಕ್ ಬಗ್ಗೆ ಸಲ್ಮಾನ್ ಖಾನ್ ಅಸಮಾಧಾನ?

ಮೋದಿ ಬಯೋಪಿಕ್ ಬಗ್ಗೆ ಈಗ ಸಲ್ಮಾನ್ ಖಾನ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ದಸ್ ಸಿನಿಮಾದ ಹಾಡಿನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್, ರವೀನಾ ಟಂಡನ್ ಹಾಗೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಆದರೆ ಚಿತ್ರ ಬಿಡುಗಡೆಯಾಗಲಿಲ್ಲ. ಕಾರಣ ಚಿತ್ರದ ನಿರ್ದೇಶಕರಾದ ಮುಕುಲ್ ಆನಂದ್ ಅಕಾಲಿಕ ಸಾವಪ್ಪಿದರು.

Vijaya Karnataka Web 26 Mar 2019, 6:59 pm
ನಾನಾ ಕಾರಣಗಳಿಂದಾಗಿ ನರೇಂದ್ರ ಮೋದಿ ಅವರ ಬಯೋಪಿಕ್ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಒಂದಷ್ಟು ವಿವಾದಗಳಿಗೂ ಕಾರಣವಾಗಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಪೋಸ್ಟರ್‌ನಲ್ಲಿ ತನ್ನ ಹೆಸರು ಹಾಕಲಾಗಿದೆ ಎಂದು ಗೀತರಚನೆಕಾರ ಜಾವೇದ್ ಅಖ್ತರ್ ಗರಂ ಆಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಈ ಚಿತ್ರದಲ್ಲಿ ನಾನು ಯಾವುದೇ ಹಾಡು ಬರೆದಿಲ್ಲ ಎಂದಿದ್ದರು.
Vijaya Karnataka Web salman-khan


ಇದಾದ ಬಳಿಕ ಇನ್ನೊಬ್ಬ ಗೀತರಚನೆಕಾರ ಸಮೀರ್ ಸಹ ನಾನೂ ಈ ಚಿತ್ರದಲ್ಲಿ ಯಾವುದೇ ಗೀತೆ ಬರೆದಿಲ್ಲ ಎಂದಿದ್ದರು. ಇದೆಲ್ಲಾ ಆದ ಬಳಿಕ ಚಿತ್ರದ ನಿರ್ಮಾಪಕ, ಕ್ರಿಯೇಟೀವ್ ಡೈರೆಕ್ಟರ್ ಚಿತ್ರಕಥೆ ರಚಿಸಿರುವ ಸಂದೀಪ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

"ಟಿ-ಸೀರೀಸ್ ಸಂಸ್ಥೆ ನಮ್ಮ ಚಿತ್ರದ ಅಧಿಕೃತ ಮ್ಯೂಸಿಕ್ ಪಾರ್ಟನರ್. 1947: ಅರ್ಥ್ ಚಿತ್ರದ ಈಶ್ವರ ಅಲ್ಲಾಹ್ ಹಾಡು ಹಾಗೂ ಸುನೊ ಗೌರ್ ಸೇ ದುನಿಯಾ ವಾಲೋ ಹಾಡನ್ನು ದಸ್ ಚಿತ್ರದಿಂದ ತೆಗೆದುಕೊಂಡಿದ್ದೇವೆ. ಹಾಗಾಗಿ ಆ ಹಾಡನ್ನು ಬರೆದಿರುವ ಜಾವೇದ್ ಹಾಗೂ ಸಮೀರ್ ಹೆಸರನ್ನು ಬಳಸಿಕೊಂಡಿದ್ದೆವು" ಎಂದಿದ್ದಾರೆ.

ಈ ವಿವಾದ ಈಗ ಬಹುತೇಕ ಬಗೆಹರಿದಿದ್ದು ಎಲ್ಲವೂ ತಣ್ಣಗಾಗಿದೆ ಎಂದುಕೊಳ್ಳುವ ಹೊತ್ತಿಗೆ ಇನ್ನೊಂದು ವಿವಾದ ತಲೆಯೆತ್ತಿದೆ. ಈ ಚಿತ್ರದ ಬಗ್ಗೆ ಈಗ ಸಲ್ಮಾನ್ ಖಾನ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ದಸ್ ಸಿನಿಮಾದ ಹಾಡಿನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್, ರವೀನಾ ಟಂಡನ್ ಹಾಗೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಆದರೆ ಚಿತ್ರ ಬಿಡುಗಡೆಯಾಗಲಿಲ್ಲ. ಕಾರಣ ಚಿತ್ರದ ನಿರ್ದೇಶಕರಾದ ಮುಕುಲ್ ಆನಂದ್ ಅಕಾಲಿಕ ಸಾವಪ್ಪಿದರು.

ಕಡೆಗೆ ಇದೇ ಹಾಡನ್ನು ಈಗ ವಿವೇಕ್ ಒಬೆರಾಯ್ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿರುವುದೇ ಸಲ್ಲು ಕೋಪಕ್ಕೆ ಕಾರಣ ಎನ್ನಲಾಗಿದೆ. ಮೊದಲೇ ವಿವೇಕ್ ಮತ್ತು ಸಲ್ಲುಗೆ ಎಣ್ಣೆ ಸೀಗೆಕಾಯಿ ಸಂಬಂಧ. ಆದರೆ ಈ ಹಾಡಿನ ರೈಟ್ಸ್ ಟಿ-ಸೀರೀಸ್ ಬಳಿ ಇದೆ. ಆಡಿಯೋ ಕಂಪೆನಿಗೂ ಸಲ್ಲುಗೂ ಯಾವುದೇ ತಕರಾರು ಇಲ್ಲ. ಹಾಗಾಗಿ ಸಲ್ಲು ಒಂದು ರೀತಿ ಅಸಮಾಧಾನಕ್ಕೆ ಒಳಗಾಗಿದ್ದಾರೆ ಎಂದಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌