ಆ್ಯಪ್ನಗರ

ಕತ್ರಿನಾ ಮೇಲೆ ಸಲ್ಲೂ ಗರ್ಲ್‌ಫ್ರೆಂಡ್‌ಗೆ ಅಸೂಯೆ

ಸಲ್ಮಾನ್‌ ಖಾನ್‌ ತಮ್ಮ ಮಾಜಿ ಪ್ರೇಯಸಿ ಕತ್ರಿನಾ ಕೈಫ್‌ ಮೇಲೆ ವಿಶೇಷ ಆಸಕ್ತಿ ತೋರಿಸುತ್ತಿರುವುದಕ್ಕೆ ಅವರ ಹಾಲಿ ಗರ್ಲ್‌ಫ್ರೆಂಡ್‌ ಲೂಲಿಯಾ ವಂಟೂರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 10 May 2016, 4:00 am
ಸಲ್ಮಾನ್‌ ಖಾನ್‌ ತಮ್ಮ ಮಾಜಿ ಪ್ರೇಯಸಿ ಕತ್ರಿನಾ ಕೈಫ್‌ ಮೇಲೆ ವಿಶೇಷ ಆಸಕ್ತಿ ತೋರಿಸುತ್ತಿರುವುದಕ್ಕೆ ಅವರ ಹಾಲಿ ಗರ್ಲ್‌ಫ್ರೆಂಡ್‌ ಲೂಲಿಯಾ ವಂಟೂರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನಗಿದು ಇಷ್ಟವಿಲ್ಲದ ಸಂಗತಿ ಎಂದು ಅವರು ಸಲ್ಲೂಗೆ ನೇರವಾಗಿ ಹೇಳಿಬಿಟ್ಟಿದ್ದಾರಂತೆ. 'ಕತ್ರಿನಾಗೆ ನೀನು ಸಹಾಯ ಮಾಡುವುದು ಮತ್ತು ಇತರ ರೀತಿಯಲ್ಲಿ ಆಸಕ್ತಿ ತೋರಿಸುತ್ತಿರುವುದು ನನಗೆ ಸಂತೋಷವನ್ನುಂಟು ಮಾಡುತ್ತಿಲ್ಲ' ಎಂದು ಸಲ್ಲೂಗೆ ಹೇಳಿದ್ದಾರಂತೆ ಲೂಲಿಯಾ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಲ್ಲೂ, 'ನೀನು ಚಿಂತೆ ಮಾಡುವಂಥ ವಿಷಯವೇನಿಲ್ಲ, ಡೋಂಟ್‌ ವರಿ' ಎಂದು ಆಶ್ವಾಸನೆ ಕೊಟ್ಟಿದ್ದಾರಂತೆ.
Vijaya Karnataka Web iss lulia vantur jealous of salman khans closeness to ex girlfriend katrina
ಕತ್ರಿನಾ ಮೇಲೆ ಸಲ್ಲೂ ಗರ್ಲ್‌ಫ್ರೆಂಡ್‌ಗೆ ಅಸೂಯೆ


ಲೂಲಿಯಾರ ಅತೃಪ್ತಿಗೆ ಕಾರಣವೂ ಇದೆ. ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದ ಸಲ್ಮಾನ್‌ ಮತ್ತು ಕತ್ರಿನಾ ಬ್ರೇಕಪ್‌ನ ನಂತರವೂ ಆಗಾಗ ಭೇಟಿಯಾಗುತ್ತಿರುತ್ತಾರೆ. ಸಲ್ಲೂ ತಮ್ಮ ಇತರೆಲ್ಲ ಮಾಜಿ ಗೆಳತಿಯರಿಗೆ ಪ್ರೋತ್ಸಾಹ ನೀಡುವಂತೆ ಕ್ಯಾಟ್‌ಗೂ ನೀಡುತ್ತಾರೆ. ಕೆಲವು ವರದಿಗಳ ಪ್ರಕಾರ, ಕೆಲವು ಸಿನಿಮಾಗಳಿಗೆ ಸಲ್ಲೂನೇ ಕತ್ರಿನಾರನ್ನು ಶಿಫಾರಸ್ಸು ಮಾಡುತ್ತಾರಂತೆ. ಮಾತ್ರವಲ್ಲ, ಕ್ಯಾಟ್‌ ಸಿನಿಮಾದ ಶೂಟಿಂಗ್‌ ಪ್ಲೇಸ್‌ಗೂ ಆಗಾಗ ಸರ್‌ಪ್ರೈಸ್‌ ವಿಸಿಟ್‌ ನೀಡುತ್ತಾರೆಂದು ಸುದ್ದಿ. ಇವರಿಬ್ಬರು ಈ ರೀತಿ ಆತ್ಮೀಯರಾಗುತ್ತಿರುವುದು ಲೂಲಿಯಾಗೆ ಒಲ್ಲದ ಸಂಗತಿಯಾಗಿದೆ.

**


ಹೃತಿಕ್‌-ಯಾಮಿ ಜೋಡಿಯ ಕಾಬಿಲ್‌ಗೆ ಚಾಲನೆ

ತಂದೆ ರಾಕೇಶ್‌ ರೋಷನ್‌ ನಿರ್ಮಾಣದಲ್ಲಿ ಹೃತಿಕ್‌ ರೋಷನ್‌ ಮತ್ತು ಯಾಮಿ ಗೌತಮಿ ನಟಿಸಲಿರುವ 'ಕಾಬಿಲ್‌' ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ವರ್ಷ ಹೃತಿಕ್‌ರ ಎರಡು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಆಗಸ್ಟ್‌ನಲ್ಲಿ ಅವರ ಬಹುನಿರೀಕ್ಷಿತ 'ಮೊಹೆಂಜೊ ದಾರೋ' ಸಿನಿಮಾ ಬಿಡುಗಡೆಯಾಗಲಿದೆ. ಇದರ ಮಧ್ಯೆ ಅವರು ತಮ್ಮ ತಂದೆ ರಾಕೇಶ್‌ ರೋಷನ್‌ ನಿರ್ಮಾಣದ 'ಕಾಬಿಲ್‌'ನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಸಂಜಯ್‌ ಗುಪ್ತ ನಿರ್ದೇಶನದ ಈ ಚಿತ್ರದಲ್ಲಿ ಅವರು ಸುಂದರ ನಟಿ ಯಾಮಿ ಗೌತಮ್‌ ಜೊತೆ ಇದೇ ಮೊದಲ ಬಾರಿಗೆ ನಟಿಸುತ್ತಿರುವುದು ವಿಶೇಷ. ಚಿತ್ರದ ವಿಶೇಷವೆಂದರೆ 'ಕ್ರಿಷ್‌-3' ಸಿನಿಮಾದ ಯಶಸ್ವಿ ನಿರ್ಮಾಪಕ ಮತ್ತು ನಟ ಜೋಡಿ ಮತ್ತೊಮ್ಮೆ ಈ ಚಿತ್ರದ ಮೂಲಕ ಹಿಂತಿರುಗಿದ್ದಾರೆ. ಈ ಡ್ರಾಮ ಥ್ರಿಲ್ಲರ್‌ ಸಿನಿಮಾಗೆ ರಾಜೇಶ್‌ ರೋಷನ್‌ ಸಂಗೀತ ಸಂಯೋಜಿಸಿದ್ದಾರೆ. ಕಳೆದ ವಾರ ಹೃತಿಕ್‌ ರೋಷನ್‌ ಈ ಸಿನಿಮಾದ ಟೀಸರ್‌ ಅನ್ನು ಸೋಷಲ್‌ ಮೀಡಿಯಾದಲ್ಲಿ ಹಾಕಿದ್ದು, ಇದು ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌