ಆ್ಯಪ್ನಗರ

'ನನ್ನ ಎದೆ ಸೀಳು, ನನ್ನಿಷ್ಟ ಬಂದಂತೆ ಮಾಡುತ್ತೇನೆ': ಕೆಣಕಿದ ನೆಟ್ಟಿಗರಿಗೆ ಗಾಯಕಿಯ ಖಾರದ ಉತ್ತರ!

ಆನ್‌ಲೈನ್‌ನಲ್ಲಿ ಸೆಲೆಬ್ರಿಟಿಗಳಿಗೆ ಟ್ರೋಲ್‌ ಸಹಜ. ಆದರೆ ಅದು ಕೆಲವೊಮ್ಮೆ ಮಿತಿ ಮೀರುತ್ತದೆ. ಗಾಯಕಿ ಸೋನಾ ಮೋಹಪಾತ್ರ ಅವರಿಗೂ ಈಗ ಟ್ರೋಲಿಗರ ಕಾಟ ಶುರುವಾಗಿದೆ. ಆದರೆ ಅದಕ್ಕೆ ಅವರು ಕೊಂಚ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

Authored byಟೀನಾ | Vijaya Karnataka Web 25 Nov 2020, 4:43 pm
ಜನಪ್ರಿಯ ಗಾಯಕಿ ಸೋನಾ ಮೋಹಪಾತ್ರ ಅವರು ಇತ್ತೀಚೆಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಮಾಡಿದ ಒಂದು ಟ್ವೀಟ್‌. ಮಹಿಳೆಯ ಬಟ್ಟೆ ಮತ್ತು ಲೈಂಗಿಕ ಶೋಷಣೆಗೆ ಸಂಬಂಧ ಇದೆಯೇ ಎಂಬ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ ಅದನ್ನು ಅನೇಕರು ವಿರೋಧಿಸಿದ್ದಾರೆ. ಪ್ರಚಾರಕ್ಕಾಗಿಯೇ ಸೋನಾ ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.
Vijaya Karnataka Web ಸೋನಾ ಮೋಹಪಾತ್ರ


'ನಾನು ಬಿಟೆಕ್‌ ಇಂಜಿನಿಯರಿಂಗ್‌ ಓದುತ್ತಿದ್ದಾಗಿನ ಸಮಯ. ಸಲ್ವಾರ್‌ ಮತ್ತು ಕುರ್ತಾ ಧರಿಸಿ ಮೈಕ್ರೋಪ್ರೊಸೆಸರ್‌ ಲ್ಯಾಬ್‌ಗೆ ಹೋಗುತ್ತಿದ್ದೆ. ಸೀನಿಯರ್ಸ್‌ ನನ್ನನ್ನು ನೋಡಿ ವಿಶಲ್‌ ಹಾಕುತ್ತಿದ್ದರು. ನನ್ನ ಬ್ರಾ ಸೈಜ್‌ ಏನು ಎಂಬುದರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದ್ದರು. ಒಬ್ಬ ಹಿತೈಷಿ ನನ್ನ ಬಳಿ ಬಂದು, ದೇಹದ ಅಂಗಗಳು ಮುಚ್ಚಿಕೊಳ್ಳುವಂತೆ ಯಾಕೆ ನೀನು ದುಪ್ಪಟ್ಟ ಧರಿಸಿಲ್ಲ ಅಂತ ಪ್ರಶ್ನಿಸಿದರು' ಎಂದು ಸೋನಾ ಟ್ವೀಟ್‌ ಮಾಡಿರುವುದು ವೈರಲ್‌ ಆಗಿದೆ.

ತಮ್ಮ ರೀತಿಯೇ ಅನುಭವ ಇತರರಿಗೂ ಆಗಿದ್ದರೆ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವಂತೆ ಸೋನಾ ಕರೆ ನೀಡಿದ್ದಾರೆ. 'ನಿಮಗೆ ಲೈಂಗಿಕವಾಗಿ ಶೋಷಣೆ, ದೌರ್ಜನ್ಯ ಆಗಿದ್ದಾಗ ನೀವು ಯಾವ ರೀತಿ ಡ್ರೆಸ್‌ ಧರಿಸಿದ್ರಿ ಎಂಬುದು ನೆನಪಿದ್ರೆ ಅದನ್ನು ಟ್ವೀಟ್‌ ಮಾಡಿ' ಎಂದು ಅವರು ಹೇಳಿದ್ದಾರೆ. ಸೋನಾ ಮಾಡಿರುವ ಈ ಟ್ವೀಟ್‌ಗೆ ಹಲವರು ವ್ಯಂಗ್ಯವಾಡಿದ್ದಾರೆ.

also read: ತಂದೆ ಸತ್ತ ಒಂದೇ ವಾರಕ್ಕೆ ಗ್ಲಾಮರ್‌ ಫೋಟೋ ಶೇರ್‌ ಮಾಡಿಕೊಂಡ ನಟಿ! ನೆಟ್ಟಿಗರ ಟೀಕೆಗೆ ಉತ್ತರ ಏನು?

ಪ್ರಚಾರಕ್ಕಾಗಿ ಮತ್ತು ಸಿಂಪಥಿ ಗಿಟ್ಟಿಸುವ ಸಲುವಾಗಿ ಸೋನಾ ಈ ರೀತಿಯ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. 'ಇವರ ಅಳು ಶುರುವಾಯಿತು. ನಿಮಗೆ ಅಷ್ಟೊಂದು ಚಿಂತೆ ಇದ್ದರೆ ಎದೆ ಸೀಳು ಕಾಣುವಂತೆ ಯಾಕೆ ಹಾಟ್‌ ಫೋಟೋಶೂಟ್‌ ಮಾಡುತ್ತೀರಿ? ಅದರ ಬದಲು ಗಾಯನದ ಬಗ್ಗೆ ಗಮನ ಕೊಡಿ' ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಸಿಟ್ಟಾಗಿರುವ ಸೋನಾ, 'ಇದು ನನ್ನ ದೇಹ, ನನ್ನ ಎದೆಸೀಳು. ನನ್ನಿಷ್ಟ ಬಂದಂತೆ ಮಾಡುತ್ತೇನೆ' ಎಂದು ತಿರುಗೇಟು ನೀಡಿದ್ದಾರೆ.

also read: ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಯಿಬಿಟ್ಟ ಆಮೀರ್ ಖಾನ್ ಮಗಳು ಇರಾ ಖಾನ್!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌