ಅನುರಾಗ್ ಬಸು ನಿರ್ದೇಶನದ ಬಹು ನಿರೀಕ್ಷಿತ ಜಗ್ಗಾ ಜಾಸೂಸ್ ನಿರ್ಮಾಪಕರಿಗೆ ನಷ್ಟ ಉಂಟು ಮಾಡಿದೆ. ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಬಿಡುಗಡೆಗೂ ಮುನ್ನ ದೊಡ್ಡ ಕುತೂಹಲ ಸೃಷ್ಟಿ ಮಾಡಿತ್ತು. ಸಿನಿಮಾದ ಟ್ರೇಲರ್ ನೋಡಿ ಸಿನಿಮಾ ಹಿಟ್ ಆಗೋದು ಗ್ಯಾರಂಟಿ ಎಂಬ ಮಾತು ಬಾಲಿವುಡ್ನಲ್ಲಿ ಇತ್ತು. ಆದರೆ ಸಿನಿಮಾ ಅಂದಕೊಂಡಷ್ಟು ಮಟ್ಟಿಗೆ ಹಿಟ್ ಆಗಲಿಲ್ಲ. ಕೆಲವರು ಈ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರಬಹುದು. ಆದರೆ ಸಿನಿಮಾ ನಿರ್ಮಾಪಕರಿಗೆ ನಷ್ಟವುಂಟು ಮಾಡಿದೆ. 115-120 ಕೋಟಿ ಬಜೆಟ್ನಲ್ಲಿ ಜಗ್ಗಾಜಾಸೂಸ್ ಸಿನಿಮಾ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ ಬರೀ 90 ಕೋಟಿ ಸಂಪಾದಿಸಿದೆ. ಅಂದರೆ ನಿರ್ಮಾಪಕ ಭಾರಿ ನಷ್ಟ ಅನುಭವಿಸಿದ್ದಾರೆ. ಕಡಿಮೆ ಎಂದರೂ ನಿರ್ಮಾಪಕರಿಗೆ 40 ಕೋಟಿಯಷ್ಟು ನಷ್ಟವಾಗಿದೆ ಎನ್ನಲಾಗ್ತಿದೆ. ರಣ್ಬೀರ್ ಕಪೂರ್ ಸಹ ಈ ಸಿನಿಮಾಗೆ ಬಂಡವಾಳ ಹೂಡಿದ್ದರು. ಅಲ್ಲದೆ ಈ ಸಿನಿಮಾ ನಷ್ಟವಾಗಿದ್ದಕ್ಕೆ, ರಣ್ಬೀರ್ ತಂದೆ ರಿಷಿ ಕಪೂರ್ ನಿರ್ದೇಶಕ ಅನುರಾಗ್ ಬಸು ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಜಗ್ಗಾ ಜಾಸೂಸ್ ಚಿತ್ರದಿಂದ ನಿರ್ಮಾಪಕರಿಗಾದ ನಷ್ಟವೆಷ್ಟು?
ಅನುರಾಗ್ ಬಸು ನಿರ್ದೇಶನದ ಬಹು ನಿರೀಕ್ಷಿತ ಜಗ್ಗಾ ಜಾಸೂಸ್ ನಿರ್ಮಾಪಕರಿಗೆ ನಷ್ಟ ಉಂಟು ಮಾಡಿದೆ...
Vijaya Karnataka Web 28 Jul 2017, 6:00 am