ಆ್ಯಪ್ನಗರ

ದೋಸ್ತಾನ ಸಿಕ್ವೆಲ್‌ನಲ್ಲಿ ಜಾಹ್ನವಿ ಕಪೂರ್‌

ಧಡಕ್‌ ಸಿನಿಮಾದ ನಂತರ ಯುವ ನಟಿ ಜಾಹ್ನವಿ ಕಪೂರ್‌ರಿಗೆ ಉತ್ತಮ ಅವಕಾಶಗಳು ಬರುತ್ತಿವೆ...

Vijaya Karnataka 21 Aug 2018, 5:00 am
ಧಡಕ್‌ ಸಿನಿಮಾದ ನಂತರ ಯುವ ನಟಿ ಜಾಹ್ನವಿ ಕಪೂರ್‌ರಿಗೆ ಉತ್ತಮ ಅವಕಾಶಗಳು ಬರುತ್ತಿವೆ. ಇತ್ತೀಚೆಗಷ್ಟೇ ಕರಣ್‌ ಜೋಹರ್‌ ನಿರ್ಮಾಣದ ಐತಿಹಾಸಿಕ ಸಿನಿಮಾ ತಖ್ತ್‌ಗೆ ಆಯ್ಕೆಯಾಗಿರುವ ಅವರು ಇದೀಗ ಕಳೆದ ದಶಕದ ಸೂಪರ್‌ ಹಿಟ್‌ ಕಾಮಿಡಿ ಸಿನಿಮಾ ದೋಸ್ತಾನ ಸಿಕ್ವೆಲ್‌ನಲ್ಲಿ ನಾಯಕಿ ಪಾತ್ರ ಮಾಡಲಿದ್ದಾರೆ. ಈ ಸಿನಿಮಾದ ನಾಯಕ ಸಿದ್ಧಾರ್ಥ್‌ ಮಲ್ಹೋತ್ರಾರಿಗೆ ಅವರು ಜೊತೆಯಾಗಲಿದ್ದಾರೆ.
Vijaya Karnataka Web janhvi kapoor in dostana 2
ದೋಸ್ತಾನ ಸಿಕ್ವೆಲ್‌ನಲ್ಲಿ ಜಾಹ್ನವಿ ಕಪೂರ್‌


ದೋಸ್ತಾನ 2 ಸಿನಿಮಾವನ್ನು ಕೂಡಾ ಕರಣ್‌ ಜೋಹರ್‌ ನಿರ್ಮಿಸಲಿದ್ದು ಇದಕ್ಕಾಗಿ ಜಾಹ್ನವಿ ಕಪೂರ್‌ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ಹೆಸರನ್ನು ಅಂತಿಮಗೊಳಿಸಿದ್ದಾರಂತೆ. ಮೂರನೇ ಮೇಲ್‌ ಲೀಡ್‌ ರೋಲ್‌ ಪಾತ್ರ ಮಾಡಲಿರುವ ಹೆಸರು ಇನ್ನೂ ಅಂತಿಮಗೊಂಡಿಲ್ಲ. ದೋಸ್ತಾನ ಪ್ರಿಕ್ವೆಲ್‌ನಲ್ಲಿ ಪ್ರಿಯಾಂಕ ಚೋಪ್ರಾ, ಜಾನ್‌ ಅಬ್ರಹಾಂ ಮತ್ತು ಅಭಿಷೇಕ್‌ ಬಚ್ಚನ್‌ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌