ಆ್ಯಪ್ನಗರ

ಒಟಿಟಿಯಲ್ಲಿ ನೇರವಾಗಿ ರಿಲೀಸ್ ಆಗಲಿರುವ ಬಾಲಿವುಡ್ ಸಿನಿಮಾಗಳು

ಈಗ ಲಾಕ್‍ಡೌನ್ 3.0 ಮುಂದುವರೆಯುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಲಾಕ್‍ಡೌನ್ ತೆರವಾಗಬಹುದು. ಆದರೆ ಚಿತ್ರಮಂದಿರಗಳಿಗೆ ಜನ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಹಾಗಾಗಿ ಹಲವಾರು ನಿರ್ಮಾಪಕರು ಒಟಿಟಿ ಫ್ಲಾಟ್‍ಫಾಮ್‍ನಲ್ಲೇ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

Vijaya Karnataka 13 May 2020, 11:27 pm
ಬಾಲಿವುಡ್‌ನ ಯುವನಟಿಯರಾದ ಜಾಹ್ನವಿ ಕಪೂರ್‌ ಮತ್ತು ಅನನ್ಯಾ ಪಾಂಡೆ ನಟನೆಯ 'ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗಲ್‌ರ್‍' ಮತ್ತು 'ಖಾಲಿ ಪೀಲಿ' ಎಂಬ ಎರಡು ಸಿನಿಮಾಗಳು ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.
Vijaya Karnataka Web ಜಾಹ್ನವಿ ಕಪೂರ್


ಸದ್ಯಕ್ಕೆ ಲಾಕ್‌ಡೌನ್‌ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಮತ್ತು ಲಾಕ್‌ಡೌನ್‌ ಮುಗಿದರೂ ಚಿತ್ರಮಂದಿರಗಳಿಗೆ ಜನರು ಬರುವ ಸಾಧ್ಯತೆ ಕಡಿಮೆ ಇರುವುದರಿಂದ ಇವೆರಡು ಸಿನಿಮಾಗಳನ್ನು ಡಿಜಿಟಲ್‌ ವೇದಿಕೆಯಲ್ಲಿ ಬಿಡುಗಡೆ ಮಾಡುವುದೇ ಬೆಸ್ಟ್‌ ಎಂಬ ನಿರ್ಧಾರಕ್ಕೆ ಆ ಸಿನಿಮಾ ನಿರ್ಮಾಪಕರು ಬಂದಿದ್ದಾರೆ ಎನ್ನಲಾಗುತ್ತಿದೆ.

ಅಭಿಮಾನಿಗಳೊಂದಿಗೆ ಸ್ಟೆಪ್ ಹಾಕಿದ 'ಧಡಕ್' ಬೆಡಗಿ ಜಾಹ್ನವಿ
ಗುಂಜನ್‌ ಸಕ್ಸೇನಾ ಸಿನಿಮಾದಲ್ಲಿ ಜಾಹ್ನವಿ ಕಪೂರ್‌ ಅವರು ಕಾರ್ಗಿಲ್‌ ಕದನದಲ್ಲಿ ಸಾಹಸ ಮೆರೆದ ಪೈಲಟ್‌ ಗುಂಜನ್‌ ಸಕ್ಸೇನಾ ಪಾತ್ರದಲ್ಲಿ ನಟಿಸಿದ್ದರೆ, 'ಖಾಲಿ ಪೀಲಿ' ಸಿನಿಮಾದಲ್ಲಿಅನನ್ಯಾ ಪಾಂಡೆ ಅವರು ನಟ ಇಶಾನ್‌ ಖಟ್ಟರ್‌ ಜೊತೆ ಕಾಣಿಸಿಕೊಂಡಿದ್ದಾರೆ.

ಮರ್ಸಿಡೆಸ್ ಬೆಂಜ್ ಕಾರಿನ ಒಡತಿಯಾದ ನಟಿ ಜಾಹ್ನವಿ ಕಪೂರ್
ಈಗಾಗಲೇ ಅಮಿತಾಭ್‌ ಬಚ್ಚನ್‌ ನಟನೆಯ 'ಝಂಡ್‌', ರಾಜ್‌ಕುಮಾರ್‌ ರಾವ್‌ ನಟನೆಯ 'ಲೂಡೊ' ಮತ್ತು ಅಕ್ಷಯ್‌ ಕುಮಾರ್‌ ನಟನೆಯ 'ಲಕ್ಷ್ಮಿ ಬಾಂಬ್‌' ಸಿನಿಮಾಗಳೂ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಗೊಳ್ಳಲು ರೆಡಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌