ಆ್ಯಪ್ನಗರ

ಸುಶಾಂತ್ ಸಿಂಗ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಗೆ ಭೂಗತ ಜಗತ್ತಿನ ನಂಟು?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ದಿನದಿಂದ ದಿನಕ್ಕೆ ಬೇರೆಯದೇ ಆದ ಸ್ವರೂಪ ಪಡೆದುಕೊಳ್ಳುತ್ತಿದೆ. ಇವರ ಗೆಳತಿ ರಿಯಾ ಚಕ್ರವರ್ತಿ ಕುರಿತಾಗಿ ಬಿಹಾರ ಮಾಜಿ ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಏನದು?

Vijaya Karnataka Web 5 Aug 2020, 12:29 pm
ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಎರಡು ತಿಂಗಳುಗಳು ಕಳೆಯುತ್ತ ಬಂದವು. ಆದರೆ ಇವರ ಸಾವು ಆತ್ಯಹತ್ಯೆಯೋ ಅಥವಾ ಕೊಲೆಯೋ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ದಿನದಿಂದ ದಿನಕ್ಕೆ ಇವರ ಕೇಸ್ ತುಂಬ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಿಯಾ ಚಕ್ರವರ್ತಿ ಬಗ್ಗೆ ಹಲವು ವಿಷಯಗಳು ಹೊರಬೀಳುತ್ತಿವೆ. ಮಾಜಿ ಬಿಹಾರ ಸಿಎಂ ಈಗ ರಿಯಾ ಬಗ್ಗೆ ವಿವಾದಾತ್ಮಕ ಮಾತು ಆಡಿದ್ದಾರೆ.
Vijaya Karnataka Web jitan ram manjhi claims sushant singh rajput girlfriend rhea chakraborty has an affinity for people in the underworld
ಸುಶಾಂತ್ ಸಿಂಗ್ ರಜಪೂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಗೆ ಭೂಗತ ಜಗತ್ತಿನ ನಂಟು?


ರಿಯಾ ಚಕ್ರವರ್ತಿಗೆ ಭೂಗತ ಜಗತ್ತಿನ ನಂಟು ಇದೆಯೇ?
ಮಾಜಿ ಬಿಹಾರ ಸಿಎಂ ಜಿತನ್ ರಾಮ್ ಮಂಜಿ ವೆಬ್‌ಸೈಟ್‌ವೊಂದರ ಬಳಿ ಮಾತನಾಡಿ, 'ರಿಯಾ ಭೂಗತ ಜನರ ಬಗ್ಗೆ ತಿಳಿದುಕೊಂಡಿರುತ್ತಾರೆ ಅಥವಾ ಒಲವು ಹೊಂದಿರುತ್ತಾರೆ' ಎಂದು ಹೇಳಿದ್ದಾರೆ. ಪ್ರಸ್ತುತ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಸುಶಾಂತ್ ಸಿಂಗ್ ರಜಪೂತ್ ಕೇಸ್‌ನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೇಳಿರುವುದನ್ನು ಜಿತನ್ ಮೆಚ್ಚಿದ್ದಾರೆ. ಬಿಹಾರ ಶಾಸಕಾಂಗ ಸಭೆಯಲ್ಲಿಯೂ ಕೂಡ ಸುಶಾಂತ್ ಸಿಂಗ್ ಕೇಸ್‌ನ್ನು ಸಿಬಿಐಗೆ ಒಪ್ಪಿಸಬೇಕು, ಸುಶಾಂತ್‌ರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಚರ್ಚೆ ಮಾಡಲಾಗಿದೆ. ಸಿಬಿಐ ಈ ಕುರಿತು ತನಿಖೆ ಮಾಡಬೇಕು' ಎಂದು ಹೇಳಿದ್ದಾರೆ.

ಪಶ್ಚಾತ್ತಾಪದಲ್ಲಿ ಮುಂಬೈ ಪೊಲೀಸರು!
'ನಿತೀಶ್‌ ಕುಮಾರ್ ಅವರು ಈ ಹಿಂದೆಯೇ ಸಿಬಿಐಗೆ ಸುಶಾಂತ್ ಕೇಸ್‌ನ್ನು ಸಿಬಿಐಗೆ ಒಪ್ಪಿಸಬೇಕಿತ್ತು ಎಂದು ಹೇಳಿದ್ದಾರೆ.ಮುಂಬೈ ಪೊಲೀಸರು ತನಿಖೆಯನ್ನು ಮಾಡದ ಕಾರಣ ಬಿಹಾರ ಪೊಲೀಸರು ಮುಂಬೈಗೆ ತೆರಳಿ ತನಿಖೆ ಮಾಡಬೇಕಾಗಿ ಬಂತು. ಮಹಾರಾಷ್ಟ್ರ ಪೊಲೀಸರಿಗೆ ಪಶ್ಚಾತ್ತಾಪವಾದ್ದರಿಂದ ಅವರು ಸರಿಯಾಗಿ ತನಿಖೆ ಮಾಡಲಿಲ್ಲ' ಎಂದು ಜಿತನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?
ಬಾಲಿವುಡ್‌ನ ಭರವಸೆಯ ನಟ ಸುಶಾಂತ್ ಸಿಂಗ್ ರಜಪೂತ್ ಜೀವನೋತ್ಸಾಹ ತುಂಬುವ ಸಿನಿಮಾಗಳಲ್ಲಿ ನಟಿಸಿದ್ದರು. ಅನೇಕ ಭಾಷಣ, ಸಂದರ್ಶನಗಳಲ್ಲಿ ಅವರ ಮಾತನ್ನು ಕೇಳಿದವರಿಗೆ ಸುಶಾಂತ್ ಆತ್ಯಹತ್ಯೆ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಇಂದು ಕೂಡ ಕಾಡುತ್ತಿದೆ. ಅವರ ಆತ್ಮೀಯರು ಕೂಡ ಇದೇ ಮಾತನ್ನು ಹೇಳುತ್ತಾರೆ. ಒಟ್ಟಾರೆಯಾಗಿ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಕಣ್ಣಿಗೆ ಬಿದ್ದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌