ಆ್ಯಪ್ನಗರ

ದಯವಿಟ್ಟು ನನ್ನನ್ನು ನಿಷೇಧಿಸಿ ಎಂದು ಬೇಡಿಕೊಂಡ ಕಂಗನಾ ರಣಾವತ್

ತನ್ನನ್ನು ನಿಷೇಧಿಸಬೇಕು ಎಂದು ಹೋರಾಡುತ್ತಿರುವ ಪತ್ರಕರ್ತರ ವಿರುದ್ಧ ನಟಿ ಕಂಗನಾ ರಣಾವತ್ ಗರಂ ಆಗಿದ್ದಾರೆ. ಈ ಬಗ್ಗೆ ವೀಡಿಯೊದಲ್ಲಿ ಮಾತನಾಡಿರುವ ಅವರು, ದಯವಿಟ್ಟು ನನ್ನನ್ನು ನಿಷೇಧಿಸಿ ಎಂದು ಬೇಡಿಕೊಂಡಿದ್ದಾರೆ. ಕಂಗನಾರನ್ನು ಎಲ್ಲಾ ಮಾಧ್ಯಮಗಳಿಂದ ನಿಷೇಧಿಸಿರುವಾಗಿ ಎಂಟರ್‌ಟೇನ್‌ಮೆಂಟ್ ಪತ್ರಕರ್ತರ ಗಿಲ್ಡ್ ಪ್ರಕಟಿಸಿದೆ.

Vijaya Karnataka Web 11 Jul 2019, 12:42 pm
ದಯವಿಟ್ಟು ನನ್ನನ್ನು ನಿಷೇಧಿಸಿ ಎಂದು ಹಲವು ಮಾಧ್ಯಮಗಳನ್ನು ಬೇಡಿಕೊಂಡಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್. 'ಜಡ್ಜಿಮೆಂಟಲ್ ಹೈ ಕ್ಯಾ' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರಿಗೂ ಕಂಗನಾಗೂ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗಾಗಿ ಅವರ ವರ್ತನೆ ಸರಿಯಿಲ್ಲ ಎಂದು, ಚಿತ್ರರಂಗದಿಂದ ನಿಷೇಧಿಸಿ, ಮುಂದೆ ಮಾಧ್ಯಮಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳದಂತೆ ಮಾಡಬೇಕೆಂದು ಹಲವು ಪತ್ರಕರ್ತರು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
Vijaya Karnataka Web ejc


"ನಾನು ಕೆಲವು ಮಾಧ್ಯಮಗಳನ್ನು ಉದ್ದೇಶಿಸಿ ಒಂದು ಮಾತು ಹೇಳಬೇಕೆಂದಿದ್ದೇನೆ. ನನಗೆ ಮಾಧ್ಯಮಗಳು ಎಲ್ಲ ಸಂದರ್ಭಗಳಲ್ಲೂ ಬೆಂಬಲವಾಗಿ ನಿಂತಿವೆ. ಮಾಧ್ಯಮದಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ. ನನ್ನನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ನನ್ನ ಗೆಲುವಿನಲ್ಲಿ ಅವರ ಪಾಲು ಸಹ ಇದೆ. ಅಂತಹವರಿಗೆ ನಾನು ಜೀವನಪರ್ಯಂತ ಚಿರಋಣಿಯಾಗಿರುತ್ತೇನೆ. ಆದರೆ ಕೆಲವು ಮಾಧ್ಯಮಗಳಿವೆ. ಇವರೆಲ್ಲಾ ದೇಶವನ್ನು ಹಾಳು ಮಾಡುತ್ತಿದ್ದಾರೆ. ಇಂತಹವರು ಹತ್ತನೇ ತರಗತಿ ಫೇಲ್ ಆಗಿ ಬಂದವರು. ಇಂತಹವರನ್ನು ನಮ್ಮ ದೇಶ ಶಿಕ್ಷಿಸಲ್ಲ" ಎಂದಿದ್ದಾರೆ. [ಇಟಲಿ ಸರಕಾರದ ಸೇವಕರಾಗಿದ್ದೆವು, ಈಗ ಸ್ವತಂತ್ರರಾಗಿದ್ದೇವೆ: ಕಂಗನಾ ರಣಾವತ್]

"ಇವರಿಗೆ ದೇಶದ ಬಗ್ಗೆ ಯಾವುದೇ ರೀತಿಯ ಭಕ್ತಿ ಇರಲ್ಲ. ಆದರೆ ನನಗೆ ದೇಶಭಕ್ತಿ ಇಲ್ಲ ಎಂದು ಆರೋಪಿಸುತ್ತಾರೆ. ಪರಿಸರ ದಿನಾಚರಣೆ ದಿನ ನಾನು ಇಷಾ ಫೌಂಡೇಷನ್ ಜತೆಗೆ ಕೈಜೋಡಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಪ್ರಾಣಿಗಳ ರಕ್ಷಣೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆ. ನಾನು ಇದೆಲ್ಲಾ ಮಾಡಿದ್ದಕ್ಕೆ ಪತ್ರಕರ್ತರೊಬ್ಬರು ನನ್ನ ಮೇಲೆ ಜೋಕ್ ಹಾಕುತ್ತಾ ಲೇಖನ ಬರೆದ. ಇಂತಹವನ್ನು ಪತ್ರಕರ್ತರು ಎಂದು ಹೇಗೆ ಹೇಳುತ್ತಾರೆ. ಒಬ್ಬ ಪತ್ರಕರ್ತ ನನ್ನ ಸಿನಿಮಾ ಬಗ್ಗೆ ಕೆಟ್ಟದಾಗಿ ಬರೆದ ಎಂದು ಅವರನ್ನು ತರಾಟೆಗೆ ತೆಗೆದುಕೊಂಡೆ"

"ಅಲ್ಲೇ ಇದ್ದ ನಾಲ್ಕು ಮಂದಿ ಪತ್ರಕರ್ತರು ನನ್ನ ಮೇಲೆ ಪ್ರಕರಣ ದಾಖಲಿಸಿದರು. ನಿಷೇಧಿಸಬೇಕೆಂದು ಪ್ರತಿಭಟಿಸಿದರು. ನನಗೆ ಸಿನಿಮಾ ಅವಕಾಶ ಸಿಗದಂತೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇಂತಹವರು ಚಿತ್ರೋದ್ಯಮವನ್ನು ಆಳುತ್ತಿದ್ದಾರೆ ಎಂದರೆ ನಾನು ಇಂದು ಟಾಪ್ ನಟಿ ಆಗುತ್ತಿರಲಿಲ್ಲ ಅಲ್ಲವೇ! ನಿಮ್ಮನ್ನು ಒಂದೇ ಒಂದು ಕೇಳುತ್ತಿದ್ದೇನೆ. ದಯವಿಟ್ಟು ನನ್ನನ್ನು ನಿಷೇಧಿಸಿ. ಯಾಕೆಂದರೆ ನನ್ನ ಮೂಲಕ ಬರುವ ಸುದ್ದಿಯಿಂದ ನೀವು ನಿಮ್ಮ ಕುಟುಂಬವನ್ನು ಪೋಷಿಸಬಾರದು" ಎಂದಿದ್ದಾರೆ ಕಂಗನಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌