ಆ್ಯಪ್ನಗರ

ಕನ್ಹಯ್ಯ ಕುಮಾರ್ ಗೆಲುವು ಪ್ರಜಾಪ್ರಭುತ್ವದ ಗೆಲುವು ಎಂದ ನಟಿ

ಒಂದು ವೇಳೆ ಕನ್ಹಯ್ಯ ಗೆದ್ದರೆ, ಅದು ಭಾರತೀಯ ಪ್ರಜಾಪ್ರಭುತ್ವದ ಗೆಲುವಾಗುತ್ತದೆ. ದೇಶದಲ್ಲಿ ಹಿಂದೆಂದೂ ಕಾಣದಂತಹ ಹಿಂಸಾತ್ಮಕತೆ ಮತ್ತು ದ್ವೇಷ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ಮೌನವಾಗಿದ್ದರೆ ಆಗಲ್ಲ ಎಂದಿದ್ದಾರೆ ಸ್ವರಾ ಭಾಸ್ಕರ್.

Vijaya Karnataka Web 9 Apr 2019, 12:46 pm
ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಲೋಕಸಭೆ ಚುನಾವಣೆ ಮಂಗಳವಾರ (ಏಪ್ರಿಲ್ 9) ನಾಮಪತ್ರ ಸಲ್ಲಿಸಿದ್ದಾರೆ. ಬೆಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ.
Vijaya Karnataka Web kanhaia


ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸದಾ ಧ್ವನಿಯೆತ್ತುತ್ತಾ ವಿವಾದಾತ್ಮಕ ತಾರೆ ಎನ್ನಿಸಿಕೊಂಡಿದ್ದಾರೆ ಸ್ವರಾ ಭಾಸ್ಕರ್. ಇದೀಗ ಸಿಪಿಐ ಪರ ಪ್ರಚಾರದಲ್ಲಿ ತೊಡಗಿದ್ದಾರೆ. "ಕನ್ಹಯ್ಯ ಕುಮಾರ್ ನಿರುದ್ಯೋಗ, ಸಂವಿಧಾನದ ಮೌಲ್ಯಗಳಿಗೆ ಬೆದರಿಕೆ, ಗುಂಪು ಘರ್ಷಣೆ, ಹಿಂಸಾಚಾರದಂತಹ ಎಲ್ಲ ಭಾರತೀಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಕನ್ಹಯ್ಯ ವಿಚಾರಗಳು ಮತ್ತು ಅವರ ದೇಶಪ್ರೇಮಕ್ಕೆ ನನ್ನ ಬೆಂಬಲವಿದೆ" ಎಂದಿದ್ದಾರೆ ಸ್ವರಾ ಭಾಸ್ಕರ್.

"ಒಂದು ವೇಳೆ ಕನ್ಹಯ್ಯ ಗೆದ್ದರೆ, ಅದು ಭಾರತೀಯ ಪ್ರಜಾಪ್ರಭುತ್ವದ ಗೆಲುವಾಗುತ್ತದೆ. ದೇಶದಲ್ಲಿ ಹಿಂದೆಂದೂ ಕಾಣದಂತಹ ಹಿಂಸಾತ್ಮಕತೆ ಮತ್ತು ದ್ವೇಷ ಮಿತಿ ಮೀರಿದೆ. ಇಂತಹ ಸಂದರ್ಭದಲ್ಲಿ ಮೌನವಾಗಿದ್ದರೆ ಆಗಲ್ಲ. ಎದ್ದು ನಿಲ್ಲಿ ನಮ್ಮ ದೇಶ ಮತ್ತು ಸಂವಿಧಾನದ ಪರ ನಿಲ್ಲಿ. ಇದಕ್ಕಾಗಿ ತಾನೂ ಯಾವುದೇ ಬೆಲೆ ತೆರಲು ಸಿದ್ಧ" ಎಂದಿದ್ದಾರೆ.

ನಟಿ ಸ್ವರಾ ಭಾಸ್ಕರ್ ವೀರೇ ದಿ ವೆಡ್ಡಿಂಗ್, ಪ್ರೇಮ್ ರತನ್ ಧನ್ ಪಾಯೋ, ತನು ವೆಡ್ಸ್ ಮನು, ದಿ ನ್ಯೂ ಕ್ಲಾಸ್ ಮೇಟ್ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಆಕ್ಟಿವ್ ಆಗಿದ್ದು ಆಗಾಗ ವಿವಾದಗಳಿಂದ ಸುದ್ದಿಯಾಗುತ್ತಾರೆ. ಈ ನಟಿ ಸ್ವರಾ ಭಾಸ್ಕರ್, ಸಿನಿಮಾಗಳಿಗಿಂತ ಹೆಚ್ಚು ಕಾಂಟ್ರೋವರ್ಸಿಗಳಲ್ಲೇ ಕಾಲ ಕಳೆಯುತ್ತಾರೆ ಎಂಬುದು ಹೊಸ ಸಂಗತಿಯೇನಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌