ಆ್ಯಪ್ನಗರ

ಕರುಳು ಹಿಂಡುವ ಆನೆ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಸಿನಿಮಾ ಕಲಾವಿದರು! ನ್ಯಾಯಕ್ಕಾಗಿ ಆಕ್ರೋಶ

ಆಲಿಯಾ ಭಟ್‌, ಶ್ರದ್ಧಾ ಕಪೂರ್‌, ಅನುಷ್ಕಾ ಶರ್ಮಾ ಮುಂತಾದ ನಟಿಯರು ಈ ಹೀನ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಕೇರಳ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Vijaya Karnataka Web 3 Jun 2020, 5:27 pm
ಆಹಾರ ಅರಸಿ ಬಂದಿದ್ದ ಆನೆಗೆ ಹಣ್ಣಿನಲ್ಲಿ ಸಿಡಿಮುದ್ದು ಇಟ್ಟು ತಿನಿಸಿದ ಹೇಯ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಪ್ರಾಣಿಪ್ರಿಯರು ಕಣ್ಣೀರಿನ ಜೊತೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮಾನುಷವಾಗಿ ಕೊಲ್ಲಲ್ಪಟ್ಟ ಆನೆಯ ಫೋಟೋಗಳು ವೈರಲ್‌ ಆಗುತ್ತಿದ್ದಂತೆಯೇ ಅದು ಸಿನಿಮಾ ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿದೆ.
Vijaya Karnataka Web ಕೇರಳ ಆನೆ ಸಾವು


ಜನಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್‌ ಸಿನಿಮಾ ತಾರೆಯರು ಕೂಡ ಗರ್ಭಿಣಿ ಆನೆ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ. ಆನೆಯ ಫೋಟೋವನ್ನು ಶೇರ್‌ ಮಾಡಿಕೊಂಡಿರುವ ಅನುಷ್ಕಾ ಶರ್ಮಾ, 'ಈ ಕಾರಣಕ್ಕಾಗಿಯೇ ಪ್ರಾಣಿ ಹಿಂಸೆ ವಿರುದ್ಧ ನಮ್ಮ ದೇಶದಲ್ಲಿ ಕಠಿಣ ಕಾನೂನು ಜಾರಿ ಆಗಬೇಕಿದೆ' ಎಂದು ಟ್ವೀಟ್‌ ಮಾಡಿದ್ದಾರೆ. ಮೊದಲಿನಿಂದಲೂ ಪ್ರಾಣಿಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತ ಬಂದಿರುವ ಅವರು ಈ ಬಾರಿಯೂ ಧ್ವನಿ ಎತ್ತಿದ್ದಾರೆ.

ಹೆಣ್ಣಾನೆಯ ಕರುಣಾಜನಕ ವಿಷಯ ಕೇಳಿ ಶ್ರದ್ಧಾ ಕಪೂರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ಹೇಗೆ??? ಇಂಥದ್ದೆಲ್ಲ ಹೇಗೆ ನಡೆಯಲು ಸಾಧ್ಯ? ಮನುಷ್ಯರಿಗೆ ಹೃದಯವೇ ಇಲ್ಲವೇ? ಈ ಸುದ್ದಿ ತಿಳಿದು ನನ್ನ ಹೃದಯ ಒಡೆದು ಚೂರಾಗಿದೆ. ತಪ್ಪಿತಸ್ಥರಿಗೆ ಅತಿ ಕಠಿಣವಾದ ಶಿಕ್ಷೆ ಆಗಬೇಕು' ಎಂದು ಶ್ರದ್ಧಾ ಕಪೂರ್ ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಕೇರಳ ಮುಖ್ಯಮಂತ್ರಿಗಳಿಗೂ ಟ್ಯಾಗ್‌ ಮಾಡಿದ್ದಾರೆ.

also read: ಗರ್ಭಿಣಿ ಕಾಡಾನೆಯ ಭೀಕರ ಹತ್ಯೆ : ರಕ್ಕಸ ಕೃತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಿಡಿ

ನಟ ರಣದೀಪ್‌ ಹೂಡ ಅವರನ್ನೂ ಈ ಘಟನೆ ಅತಿಯಾಗಿ ಕಾಡಿದೆ. ಈ ಬಗ್ಗೆ ಅವರು ಸರಣಿ ಟ್ವೀಟ್‌ ಮಾಡುತ್ತಿದ್ದಾರೆ. 'ಇಂಥದ್ದನ್ನೆಲ್ಲ ನಾವು ಒಪ್ಪಿಕೊಳ್ಳಲೇಬಾರದು. ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ರಣದೀಪ್‌ ಹೂಡ ಒತ್ತಾಯ ಹೇರಿದ್ದಾರೆ. ಈ ವಿಚಾರವಾಗಿ ಬೇರೆಯವರು ಮಾಡಿದ ಅನೇಕ ಟ್ವೀಟ್‌ಗಳನ್ನು ಅವರು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

also read: ಪುಟ್ಟ ಬಾಲೆ ಹಾಗೂ ಆನೆಯ ನಡುವಣ ಫ್ರೆಂಡ್ಸ್‌ಶಿಪ್ ವೈರಲ್

'ಇದು ತೀರಾ ಭಯಾನಕ ಆಗಿದೆ. ನಾವು ಈ ಪ್ರಾಣಿಗಳ ಪರವಾಗಿ ಧ್ವನಿ ಎತ್ತಬೇಕು ಹಾಗು ಅವುಗಳ ಜೊತೆಯಲ್ಲಿ ಬಾಳಬೇಕು. ಇದೇನು ತಮಾಷೆಯ ವಿಚಾರವೇ. ಹೃದಯ ಛಿದ್ರವಾಗುವಂತಿದೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್‌ ಶೇರ್‌ ಮಾಡಿಕೊಂಡಿದ್ದಾರೆ ನಟಿ ಆಲಿಯಾ ಭಟ್‌.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌