ಆ್ಯಪ್ನಗರ

ನಾನಿನ್ನೂ ಸಿಂಗಲ್, ಯಾರ ಜತೆಗೂ ಮಿಂಗಲ್ ಆಗಿಲ್ಲ: ಕಿಯರಾ

ಕಿಯರಾ ಅಡ್ವಾಣಿ ತೆಲುಗು ಮತ್ತು ಹಿಂದಿಯ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಹೇಶ್ ಬಾಬು ಜತೆಗಿನ 'ಭರತ್ ಅನೆ ನೇನು' ಸಿನಿಮಾ ಸಖತ್ ಸೌಂಡ್ ಮಾಡಿದ್ದು ಗೊತ್ತೇ ಇದೆ. ಕಳಂಕ್ ಸಿನಿಮಾದಲ್ಲಿನ ವಿಶೇಷ ಗೀತೆಯಲ್ಲೂ ಸೊಂಟ ಬಳುಸಿದ್ದಾರೆ ಈ ಬೆಡಗಿ.

TIMESOFINDIA.COM 30 Mar 2019, 12:22 pm
Vijaya Karnataka Web kaira
ಬಾಲಿವುಡ್ ತಾರೆಗಳಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದಾರೆ ಎಂಬ ಗುಸುಗುಸು ಇದೆ. ಇತ್ತೀಚೆಗೆ ಈಗ ಬಗ್ಗೆ ಕಿಯಾರಾರನ್ನು ಮಾಧ್ಯಮಗಳು ಪ್ರಶ್ನಿಸಿದವು. ಇದಕ್ಕೆ ಪ್ರತಿಕ್ರಿಯಿಸಿರುವ ಕಿಯಾರಾ, "ತಾನು ಇನ್ನೂ ಸಿಂಗಲ್ ಆಗಿಯೇ ಇದ್ದೇನೆ. ಸಿದ್ಧಾರ್ಥ್‌ನನ್ನು ಪ್ರೀತಿಸುತ್ತಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ರೀತಿಯ ವದಂತಿಗಳನ್ನು ನೀವು ಹೇಗೆ ಎದುರಿಸುತ್ತೀರ ಎಂಬ ಪ್ರಶ್ನಗೆ, "ಅವು ಕೇವಲ ವದಂತಿಗಳು ಮಾತ್ರ. ಹಾಗಾಗಿ ತಲೆಕೆಡಿಸಿಕೊಳ್ಳಲ್ಲ" ಎಂದಿದ್ದಾರೆ. ಇನ್ನೊಂದು ಕಡೆ ಕಾಫಿ ವಿತ್ ಕರಣ್ ಶೋನಲ್ಲಿ ಕಿಯರಾ ಬಗ್ಗೆ ಸಿದ್ಧಾರ್ಥ್ ಈ ರೀತಿ ಹೇಳಿಕೊಂಡಿದ್ದಾರೆ.

"ಮುಂದೆ ಕಿಯರಾ ನನ್ನ ಸಹನಟಿ ಆಗಲಿದ್ದಾರೆ. ಇದೇ ಸಂಗತಿ ನನಗೆ ಖುಷಿ ನೀಡುತ್ತಿದೆ. ಅವರ ಜತೆಗೆ ನಾನು ಕೆಲಸ ಮಾಡಲಿದ್ದೇನೆ. ನಮ್ಮ ಮೇಲಿನ ವದಂತಿಗಳ ಬಗ್ಗೆ ನನಗೇನು ಗೊತ್ತಿಲ್ಲ. ಆದರೆ ಆ ವದಂತಿಗಳು ನಿಜವಾದರೆ ಖುಷಿಪಡುತ್ತೇನೆ. ಆದರೆ ಜನ ಭಾವಿಸಿದಷ್ಟು ಕಲರ್‌ಫುಲ್‍ ಆಗಿ ನನ್ನ ಜೀವನ ಇಲ್ಲ" ಎಂದಿದ್ದಾರೆ ಸಿದ್ಧಾರ್ಥ್.

ಕಿಯರಾ ಅಡ್ವಾಣಿ ತೆಲುಗು ಮತ್ತು ಹಿಂದಿಯ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಹೇಶ್ ಬಾಬು ಜತೆಗಿನ 'ಭರತ್ ಅನೆ ನೇನು' ಸಿನಿಮಾ ಸಖತ್ ಸೌಂಡ್ ಮಾಡಿದ್ದು ಗೊತ್ತೇ ಇದೆ. ಕಳಂಕ್ ಸಿನಿಮಾದಲ್ಲಿನ ವಿಶೇಷ ಗೀತೆಯಲ್ಲೂ ಸೊಂಟ ಬಳುಸಿದ್ದಾರೆ ಈ ಬೆಡಗಿ. ಬಾಲಿವುಡ್‌ನ 'ಗುಡ್ ನ್ಯೂಸ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಕರೀನಾ ಕಪೂರ್ ತಾರಾಗಣದ ಈ ಸಿನಿಮಾ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌