ಆ್ಯಪ್ನಗರ

ವೈರಲ್‌ ಆಯ್ತು ಸಂಜಯ್‌-ಮಾನ್ಯತಾ ರೋಮ್ಯಾಂಟಿಕ್‌ ಫೋಟೋ

ಬಾಲಿವುಡ್‌ ನಟ ಸಂಜಯ್‌ ದತ್‌ ಪತ್ನಿ ಮಾನ್ಯತಾ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌.

Vijaya Karnataka Web 10 Sep 2017, 12:14 pm
ಬಾಲಿವುಡ್‌ ನಟ ಸಂಜಯ್‌ ದತ್‌ ಪತ್ನಿ ಮಾನ್ಯತಾ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್‌. ಕೆಲ ದಿನಗಳ ಹಿಂದೆ ಬೋಲ್ಡ್‌ ಫೋಟೋವೊಂದನ್ನು ಅಪ್ಲೋಡ್‌ ಮಾಡಿ ಸಖತ್‌ ಸುದ್ದಿಯಾಗಿದ್ದ ಮಾನ್ಯತಾ, ಇದೀಗ ರೋಮ್ಯಾಂಟಿಕ್‌ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
Vijaya Karnataka Web maanayata dutt in the arms of sanjay
ವೈರಲ್‌ ಆಯ್ತು ಸಂಜಯ್‌-ಮಾನ್ಯತಾ ರೋಮ್ಯಾಂಟಿಕ್‌ ಫೋಟೋ


ಈ ಬಾರಿ ಮಾನ್ಯತಾ ಅಪ್ಲೋಡ್‌ ಮಾಡಿರುವ ಫೋಟೋದಲ್ಲಿ ಸಂಜಯ್‌ ದತ್‌ ಕೂಡ ಇದ್ದಾರೆ. ಮಾನ್ಯತಾ ಅವರನ್ನು ಹಿಂದಿನಿಂದ ತಬ್ಬಿಕೊಂಡಿರುವ ಸಂಜಯ್‌ ದತ್‌, ಪತ್ನಿಗೆ ಮಧುರ ಆಲಿಂಗನದ ಸುಖ ನೀಡಿದ್ದಾರೆ. ಇವರಿಬ್ಬರ ಈ ರೋಮ್ಯಾಂಟಿಕ್‌ ಫೋಟೋ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟಾಕ್‌ ಕ್ರಿಯೇಟ್‌ ಮಾಡಿದೆ.

  Home is where you put your arms around me❤️❤️ #love #grace #positivity #instafam #dutts #holidayhome #4amshot #weekendthrowback #forever #loveofmylife #besthalf #lovelyweather #beautifulife #thankyougod🙏 A post shared by Maanayata Dutt (@maanayata) on Sep 6, 2017 at 10:44pm PDT
ಪೋಟೋ ಜತೆಗೆ, 'ನಿನ್ನ ತೋಳುಗಳೇ ನನ್ನ ಆಸರೆ' ಎಂಬ ಅರ್ಥ ನೀಡುವ ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ ಮಾನ್ಯತಾ. ಮತ್ತೊಂದು ವಿಶೇಷತೆ ಎಂದರೆ ಸಂಜಯ್‌ ದತ್‌ ಪುತ್ರಿ ತ್ರಿಶಾಲಾ ಈ ಫೋಟೋಗೆ ಕಮೆಂಟ್‌ ಮಾಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ಸೆಪ್ಟೆಂಬರ್‌ 22ರಂದು ಸಂಜಯ್‌ ದತ್‌ ಅಭಿನಯದ 'ಭೂಮಿ' ಚಿತ್ರ ತೆರೆ ಕಾಣಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌