ಆ್ಯಪ್ನಗರ

ಮಲ್ಲಿಕಾ ಶೆರಾವತ್ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಲು ಹೇಳಿದ್ದ ನಿರ್ಮಾಪಕ

ಬಾಲಿವುಡ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಹಲವಾರು ಸ್ಫೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ನನ್ನೊಂದಿಗೆ ಖಾಸಗಿಯಾಗಿ ಇನ್‌ಟಿಮೇಟ್ ಸನ್ನಿವೇಶಗಳಲ್ಲಿ ಭಾಗಿಯಾಗಿ ಎಂದು ಕೇಳಿದ ನಟರು, ಅವರ ಗರ್ಲ್‌ಫ್ರೆಂಡ್‌ಗಾಗಿ ನನಗೆ ಅವಕಾಶ ತಪ್ಪಿಸಿದ ಉದಾಹರಣೆಗಳನ್ನೂ ಹೇಳಿದ್ದಾರೆ.

Vijaya Karnataka 2 Jul 2019, 4:39 pm
ಬಾಲಿವುಡ್‌ನ ಸಿನಿಮಾ ನಿರ್ಮಾಪಕರೊಬ್ಬರು ನನ್ನ ಹೊಟ್ಟೆಯ ಮೇಲೆ ಮೊಟ್ಟೆ ಫ್ರೈ ಮಾಡುವ ದೃಶ್ಯವನ್ನು ಚಿತ್ರೀಕರಿಸಿ ನಾನೆಷ್ಟು ಹಾಟ್‌ ಆಗಿದ್ದೇನೆ ಎಂದು ಪ್ರೇಕ್ಷಕರಿಗೆ ಬಿಂಬಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಿದ್ದಾರೆ ನಟಿ ಮಲ್ಲಿಕಾ ಶೆರಾವತ್‌. ಆದರೆ ತಾನು ಆ ದೃಶ್ಯ ಮಾಡಲು ನಿರಾಕರಿಸಿದ್ದೆ ಎಂದು ಕಾಮಿಡಿ ಶೋವೊಂದರಲ್ಲಿ ಹೇಳಿದ್ದಾರೆ.
Vijaya Karnataka Web mallika-sherawat


ಸದ್ಯಕ್ಕೆ ಏಕ್ತಾ ಕಪೂರ್‌ ನಿರ್ಮಾಣದ ಬೂ ಸಬ್ಕಿ ಫಟೇಗಿ ಎಂಬ ಹಾರರ್‌ ಕಾಮಿಡಿ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿರುವ ಮಲ್ಲಿಕಾ ಶೆರಾವತ್‌, ಈಗ ಯೋಚಿಸಿದಾಗ ನಾನು ಆ ನಿರ್ಮಾಪಕರು ಹೇಳಿದ್ದ ದೃಶ್ಯ ಮಾಡಿದ್ದರೆ ಸ್ವಾರಸ್ಯಕರವಾಗಿರುತ್ತಿತ್ತು ಎಂದು ಅನಿಸುತ್ತದೆ ಎಂದಿದ್ದಾರೆ.

ದಿ ಕಪಿಲ್ ಶರ್ಮಾ ಶೋನಲ್ಲಿ ಮಲ್ಲಿಕಾ ಶೆರಾವತ್ ಈ ರೀತಿ ಹೇಳುತ್ತಿದ್ದಂತೆ ಓ ಗಾಡ್ ಎಂದು ಉದ್ಗಾರ ತೆಗೆದಿದ್ದಾರೆ ಪ್ಯಾನಲ್ ಸದಸ್ಯೆಯಾಗಿರುವ ಅರ್ಚನಾ ಪುರಾನ್ ಸಿಂಗ್. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ "ಡ್ಯಾನ್ಸ್ ಭಿನ್ನವಾಗಿರಲು ಬಯಸಿದ್ದರು ನಿರ್ದೇಶಕರೊಬ್ಬರು. ಹಾಗಾಗಿ ನಿಮ್ಮ ಬೆನ್ನ ಮೇಲೆ ಬಿಸಿಬಿಸಿ ರೋಟಿ ಮಾಡುವ ಸನ್ನಿವೇಶ ಇಡೋಣ" ಎಂದಿದ್ದರಂತೆ.

ತಾನು ಸ್ವಲ್ಪ ಹಠಸ್ವಭಾವದಳು ಎಂದು ಪ್ರಚಾರ ಮಾಡಿದ ಕಾರಣ ಹಲವಾರು ಸಿನಿಮಾ ಅವಕಾಶಗಳು ಕೈತಪ್ಪಿದ್ದಾಗಿ ಹೇಳಿದ್ದಾರೆ. ನಾನು ತುಂಬಾ ವಾಚಾಳಿ, ಹಠಮಾರಿ ಧೋರಣೆಯವಳು ಎಂದು ಹಲವಾರು ಹೀರೋಗಳು ಹೇಳಿ ಅವರ ಗರ್ಲ್‌ಫ್ರೆಂಡ್ಸ್‌ಗೆ ಚಾನ್ಸ್ ಕೊಡಿಸಿದ ಉದಾಹರಣೆಗಳೂ ಉಂಟು ಎಂದಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಇನ್ನೊಂದು ಸ್ಫೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ ಮಲ್ಲಿಕಾ ಶೆರಾವತ್, "ತೆರೆಯ ಮೇಲೆ ಮಾಡಿದಂತೆ ಇಂಟಿಮೇಟ್ ಸನ್ನಿವೇಶಗಳನ್ನು ನನ್ನೊಂದಿಗೆ ಯಾಕೆ ಮಾಡಲ್ಲ" ಎಂದು ಕೇಳಿದವರೂ ಇದ್ದಾರೆ. ಅವರ ಜತೆ ಆ ರೀತಿ ಮಾಡದೆ ಇದ್ದ ಕಾರಣ ಹಲವಾರು ಪ್ರಾಜೆಕ್ಟ್‌ಗಳು ನನ್ನ ಕೈತಪ್ಪಿ ಹೋಗಿವೆ ಎಂದು ಮಲ್ಲಿಕಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌