ಆ್ಯಪ್ನಗರ

Me Too ಆರೋಪ ಹೊತ್ತಿರುವ ನಿರ್ದೇಶಕ ಅನುರಾಗ್‌ ಕಶ್ಯಪ್‌ಗೆ 'ದೊಡ್ಡ ಸ್ತ್ರೀವಾದಿ' ಎಂದು ಕರೆದ ತಾಪ್ಸೀ!

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರ ಮೇಲೆ ಮೀಟೂ ಆರೋಪ ಹೊರಿಸಲಾಗಿದೆ. ಆದರೆ ಅನೇಕ ನಟಿಯರು ಅನುರಾಗ್‌ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ನಟಿ ತಾಪ್ಸೀ ಪನ್ನು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Vijaya Karnataka Web 21 Sep 2020, 6:34 pm
ಜನಪ್ರಿಯ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮೇಲೆ ನಟಿ ಪಾಯಲ್‌ ಘೋಷ್‌ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬಳಿಕ ಇಡೀ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಶುರು ಆಗಿದೆ. ಅನೇಕರು ಅನುರಾಗ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ. ಸಾಮಾನ್ಯವಾಗಿ ಮೀಟೂ ಆರೋಪ ಹೊತ್ತಿರುವ ವ್ಯಕ್ತಿಯನ್ನು ನಿಂದಿಸುವವರೇ ಹೆಚ್ಚು. ಆದರೆ ಅನುರಾಗ್‌ ವಿಚಾರದಲ್ಲಿ ಅದು ಉಲ್ಟಾ ಆಗಿದೆ.
Vijaya Karnataka Web ಅನುರಾಗ್‌ ಕಶ್ಯಪ್ ತಾಪ್ಸೀ ಪನ್ನು


ಅನುರಾಗ್‌ ಕಶ್ಯಪ್‌ ಜೊತೆ ನಟಿ ತಾಪ್ಸೀ ಪನ್ನು 'ಮನ್‌ಮರ್ಜಿಯಾ' ಚಿತ್ರದಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಅನುರಾಗ್‌ ಅವರ ವ್ಯಕ್ತಿತ್ವ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅದರ ಆಧಾರದ ಮೇಲೆ ಈಗ ಒಂದು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಅನುರಾಗ್‌ರನ್ನು ದೊಡ್ಡ ಸ್ತ್ರೀವಾದಿ ಎಂದು ಕರೆದಿರುವುದು ಗಮನ ಸೆಳೆಯುತ್ತಿದೆ. ಈ ಬಗ್ಗೆ ಪರ-ವಿರೋಧದ ಕಾಮೆಂಟ್‌ಗಳು ಬರುತ್ತಿವೆ.

ಅನುರಾಗ್‌ ಜೊತೆಗೆ ಇರುವ ಒಂದು ಫೋಟೋವನ್ನು ತಾಪ್ಸೀ ಹಂಚಿಕೊಂಡಿದ್ದಾರೆ. 'ನನ್ನ ಫ್ರೆಂಡ್‌ ದೊಡ್ಡ ಸ್ತ್ರೀವಾದಿ ಎಂಬುದು ನನಗೆ ಗೊತ್ತಿದೆ. ನೀವು ಸೃಷ್ಟಿ ಮಾಡುವ ಜಗತ್ತಿನಲ್ಲಿ ಮಹಿಳೆಯರು ಎಷ್ಟು ಮುಖ್ಯವಾದವರು ಮತ್ತು ಬಲಶಾಲಿಗಳು ಎಂಬುದನ್ನು ತೋರಿಸುವ ಮತ್ತೊಂದು ಕಲಾಕೃತಿಯ ಶೂಟಿಂಗ್‌ ಸೆಟ್‌ನಲ್ಲಿ ಶೀಘ್ರವೇ ನಿಮ್ಮನ್ನು ಭೇಟಿ ಆಗುತ್ತೇನೆ' ಎಂದು ತಾಪ್ಸೀ ಬರೆದುಕೊಂಡಿದ್ದಾರೆ.

also read: ನಿರ್ದೇಶಕ ಅನುರಾಗ್ ಕಶ್ಯಪ್‌ ಬೆಂಬಲಕ್ಕೆ ನಿಂತ ಮಾಜಿ ಪತ್ನಿ ಕಲ್ಕಿ ಕೊಚ್ಲಿನ್!

ಅನುರಾಗ್‌ ಕಶ್ಯಪ್‌ ಅವರ ಮಾಜಿ ಪತ್ನಿ ಕಲ್ಕಿ ಕೊಚ್ಲಿನ್‌, ಸ್ವರಾ ಭಾಸ್ಕರ್‌, ರಾಧಿಕಾ ಆಪ್ಟೆ, ಸ್ಯಯಾಮಿ ಖೇರ್‌ ಮುಂತಾದ ನಟಿಯರು ಅನುರಾಗ್‌ ಪರವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ 'ಮಹಾಭಾರತ' ಧಾರಾವಾಹಿ ಖ್ಯಾತಿಯ ನಟಿ ರೂಪಾ ಗಂಗೂಲಿ ಅವರು ಕಿಡಿಕಾರಿದ್ದಾರೆ. 'ಇಂಥ ಗಂಭೀರ ಆರೋಪಗಳು ಇದ್ದರೂ ಯಾಕೆ ಅನುರಾಗ್‌ ಕಶ್ಯಪ್‌ನನ್ನು ಮುಂಬೈ ಪೊಲೀಸರು ಬಂಧಿಸಿಲ್ಲ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

also read: #MeToo: ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಪಾಯಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌