ಆ್ಯಪ್ನಗರ

#Metoo: 15 ವರ್ಷದವಳಾಗಿದ್ದಾಗಲೇ ಕಿಸ್‌ ಮಾಡುವಂತೆ ಪೀಡಿಸಿದ್ದ ಅನು ಮಲಿಕ್‌, ಶ್ವೇತಾ ಪಂಡಿತ್‌ ಆರೋಪ

ಸಂಗೀತ ನಿರ್ದೇಶಕನ ಮೇಲೆ ಮತ್ತೊಂದು ಆರೋಪ

Vijaya Karnataka Web 17 Oct 2018, 9:04 pm
ಮುಂಬಯಿ: ಮಿ ಟೂ ಅಭಿಯಾನದ ಬಲೆಗೆ ಹಲವಾರು ಗಣ್ಯರು ಬೀಳುತ್ತಲೇ ಇದ್ದಾರೆ. ಈಗ ಬಾಲಿವುಡ್‌ ಸಂಗೀತ ನಿರ್ದೇಶಕ ಅನು ಮಲಿಕ್‌ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ.
Vijaya Karnataka Web ಶ್ವೇತಾ ಪಂಡಿತ್‌, ಅನು ಮಲಿಕ್‌
ಶ್ವೇತಾ ಪಂಡಿತ್‌, ಅನು ಮಲಿಕ್‌


ಈ ಹಿಂದೆ ಗಾಯಕಿಯೊಬ್ಬರು ಅನು ಮಲಿಕ್‌ ವಿರುದ್ಧ ದೂರು ಸಲ್ಲಿಸಿದ್ದರು.

ಈಗ ಮಿ ಟೂ ಅಭಿಯಾನದ ಬಿಸಿ ಹೆಚ್ಚಾಗುತ್ತಿದ್ದಂತೆ ಗಾಯಕಿ ಶ್ವೇತಾ ಪಂಡಿತ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.

2001ರಲ್ಲಿ ಗೀತೆಯೊಂದರ ರೆಕಾರ್ಡಿಂಗ್‌ ಸಂದರ್ಭ ಅನು ಮಲಿಕ್‌ ಹೇಗೆ ನಡೆದುಕೊಂಡಿದ್ದರು ಎಂದು ಶ್ವೇತಾ ಪಂಡಿತ್‌ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.

ಕೇವಲ 15 ವರ್ಷದವಳಾಗಿದ್ದ ನನಗೆ ಚಿತ್ರದಲ್ಲಿ ಹಾಡುವ ಅವಕಾಶ ಕಲ್ಪಿಸಲು ಅನು ಮಲಿಕ್‌ ನಿರ್ಧರಿಸಿದ್ದರು. ಆದರೆ ಆ ನಂತರ ಅವರು ನಡೆದುಕೊಂಡ ರೀತಿ ಇಂದಿಗೂ ಮೈ ಜುಮ್ಮೆನಿಸುತ್ತದೆ ಎಂದು ಶ್ವೇತಾ ಪಂಡಿತ ನೆನಪಿನಂಗಳಕ್ಕೆ ಜಾರಿದ್ದಾರೆ.

ಶ್ವೇತಾ ಟ್ವಿಟರ್‌ನಲ್ಲಿ ಬರೆದುಕೊಂಡಿರುವುದು ಹೀಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌