ಆ್ಯಪ್ನಗರ

'ಮೈಕಲ್‌ ಜಾಕ್ಸನ್‌' ಬಗ್ಗೆ ಗೊತ್ತಿಲ್ಲದ ರಹಸ್ಯ ತಿಳಿಯೋದಿಕ್ಕೆ ರೆಡಿಯಾಗಿ!

ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ಮತ್ತು 'ಕಿಂಗ್‌ ಆಫ್‌ ಪಾಪ್‌' ಎಂದೇ ಪ್ರಸಿದ್ಧರಾಗಿದ್ದ ಗಾಯಕ ಮತ್ತು ಡಾನ್ಸರ್‌ ಮೈಕಲ್‌ ಜಾಕ್ಸನ್‌ ಜೀವನಕಥೆಯಿರುವ ಸಿನಿಮಾವೊಂದು ನಿರ್ಮಾಣವಾಗಲಿದೆ.

Vijaya Karnataka Web 26 Nov 2019, 10:40 am
ಜಾಕ್ಸನ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಡಾನ್ಸರ್‌ ಮೈಕಲ್‌ ಜಾಕ್ಸನ್‌ಬಯೋಪಿಕ್‌ ನಿರ್ಮಾಣದ ಹಕ್ಕನ್ನು ಹಾಲಿವುಡ್‌ ನಿರ್ಮಾಪಕ ಗ್ರಹಾಂ ಕಿಂಗ್‌ರ ಜಿಕೆ ಫಿಲ್ಮ್ಸ್ ಪಡೆದುಕೊಂಡಿದೆ. ಬಾಲ್ಯದಲ್ಲಿಯೇ ಪಾಪ್‌ ಗಾಯನ ಮತ್ತು ಅದ್ಭುತ ಡಾನ್ಸ್‌ ಮೂವ್‌ಗಳಿಂದ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದ ಜಾಕ್ಸನ್‌ರ ನಂತರದ ಬದುಕು ವಿವಾದಗಳಿಂದಲೇ ಕೂಡಿತ್ತು.
Vijaya Karnataka Web michael jackson oriented film will release soon
'ಮೈಕಲ್‌ ಜಾಕ್ಸನ್‌' ಬಗ್ಗೆ ಗೊತ್ತಿಲ್ಲದ ರಹಸ್ಯ ತಿಳಿಯೋದಿಕ್ಕೆ ರೆಡಿಯಾಗಿ!


ಅನಾರೋಗ್ಯದ ಕಾರಣದಿಂದಲೂ ಸಾಕಷ್ಟು ಜರ್ಜರಿತರಾಗಿದ್ದ ಅವರು ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ದುರಂತ ಅಂತ್ಯ ಕಂಡ ಕಾರಣ ಅವರ ಬಯೋಪಿಕ್‌ ನಿರ್ಮಾಣಕ್ಕೂ ಕೆಲವು ಅಡೆತಡೆಗಳಿದ್ದವು. ಇದೀಗ ಜಾಕ್ಸನ್‌ ಬಯೋಪಿಕ್‌ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಗ್ರಹಾಂ ಕಿಂಗ್‌ ಇದರ ನಿರ್ಮಾಣಕ್ಕೆ ಅಗತ್ಯವಿರುವ ಮೈಕಲ್‌ ಜಾಕ್ಸನ್‌ರ ಎಲ್ಲಾಮ್ಯೂಸಿಕ್‌ ಮತ್ತು ಇನ್ನಿತರ ಮೂಲಗಳನ್ನು ಬಳಸಿಕೊಳ್ಳುವ ಹಕ್ಕನ್ನು ಪಡೆದಿದ್ದಾರೆ. ಈ ಸಿನಿಮಾ ಕಥೆಯನ್ನು ಲೇಖಕ ಜಾನ್‌ ಲೋಗನ್‌ ಬರೆಯಲಿದ್ದಾರೆ.

ಮೂರು ಮಕ್ಕಳಿದ್ದರೂ, ತಂದೆಯಾಗದ ಜಾಕ್ಸನ್

ಈ ಬಯೋಪಿಕ್‌ನಲ್ಲಿ ಜಾಕ್ಸನ್‌ರ ಇಡೀ ಬದುಕಿನ ಚಿತ್ರಣವಿರಲಿದೆ. ತಮ್ಮ 50ನೇ ವರ್ಷದಲ್ಲಿ ಕೊನೆಯುಸಿರು ಎಳೆದ ಅವರ ಜೀವನದ ಬಗೆಹರಿಯದ ವಿವಾದಗಳನ್ನು ಮಾತ್ರವಲ್ಲ, ಹರೆಯದಲ್ಲಿಯೇ ಗ್ಲೋಬಲ್‌ ಐಕಾನ್‌ ಆಗಿ ಬೆಳೆದ ಅವರ ಸಾಧನೆಯನ್ನೂ ಈ ಸಿನಿಮಾದಲ್ಲಿ ತೋರಿಸಲಾಗುವುದು ಎಂದು ತಿಳಿದುಬಂದಿದೆ.

ಜಾಕ್ಸನ್ ಜನ್ಮದಿನ ಆಚರಣೆ

ಬಾಲಿವುಡ್‌ನ ಕೊರಿಯೊಗ್ರಾಫರ್, ನಿರ್ದೇಶಕಿ ಹಾಗೂ ನಟಿ ಫರ್ಹಾ ಖಾನ್ ತಮ್ಮ ಚಿತ್ರ 'ಹ್ಯಾಪಿ ನ್ಯೂ ಇಯರ್‌'ನಲ್ಲಿ ಡಾನ್ಸ್ ಲೆಜೆಂಡರಿ ಪಾಪ್ ಸ್ಟಾರ್ ಮೈಕಲ್ ಜಾಕ್ಸನ್‌ಗೆ ಟ್ರಿಬ್ಯೂಟ್ ಸಲ್ಲಿಸಿದ್ದರು. ಜಾಕ್ಸನ್ ಎಷ್ಟೇ ಪ್ರಸಿದ್ಧಿ ಹೊಂದ್ದಿರೂ ತಾವು ಸುರದ್ರೂಪಿಯಾಗಿಲ್ಲ ಎಂಬ ಒಂದೇ ಕೊರಗು ಅವರಿಗೆ ಕಾಡುತ್ತಿತ್ತಂತೆ.
ಮೈಕಲ್ ಜಾಕ್ಸನ್ ಮಕ್ಕಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌