ಆ್ಯಪ್ನಗರ

'ನನ್ನ ಪತ್ನಿ ಹಿಂದೂ, ನಾನು ಮುಸ್ಲಿಂ, ನನ್ನ ಮಕ್ಕಳು ಹಿಂದೂಸ್ಥಾನ್'; ಶಾರುಖ್ ಖಾನ್ ಹೀಗೆನ್ನಲು ಕಾರಣ?

ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿರುವ ಮಾತು ಈಗ ಇಡೀ ಭಾರತದಾದ್ಯಂತ ಮಾರ್ದನಿಸುತ್ತಿದ್ದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಇಷ್ಟಕ್ಕೂ ಶಾರುಖ್ ಖಾನ್ ಹೇಳಿರುವುದೇನು? ಈ ಸಂದರ್ಭದಲ್ಲಿ ಅವರ ಬಾಯಿಂದ ಈ ಮಾತು ಬರಲು ಕಾರಣವೇನು?

ಜೀವನದಲ್ಲಿ ಭಾರತಕ್ಕಿಂತ ನನಗೇನು ಮುಖ್ಯವಲ್ಲ ಎಂದಿರುವ ಶಾರುಖ್ ಖಾನ್ ಕಿರುತೆರೆಯ "ಡ್ಯಾನ್ಸ್ ಪ್ಲಸ್" ಶೋನಲ್ಲಿ ಭಾಗವಹಿಸಿದ್ದಾಗ ಇನ್ನಷ್ಟು ಓಪನ್ ಅಪ್ ಆಗಿದ್ದಾರೆ. ಧರ್ಮದ ಬಗ್ಗೆ ತನ್ನ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಶಾರುಖ್ ಅವರ ಮಾತುಗಳು ಅಭಿಮಾನಿಗಳ ಹೃದಯವನ್ನೂ ಸ್ಪರ್ಶಿಸಿದ್ದು ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಹರಿದು ಬರುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದೆ.

"ನಾವು ಹಿಂದೂ-ಮುಸ್ಲಿಂ ಎಂಬ ಬಗ್ಗೆ ಎಂದೂ ಚರ್ಚಿಸಿಲ್ಲ. ನನ್ನ ಪತ್ನಿ ಹಿಂದೂ, ನಾನು ಮುಸ್ಲಿಮ್, ನನ್ನ ಮಕ್ಕಳು ಹಿಂದೂಸ್ಥಾನಿ" ಎಂದಿದ್ದಾರೆ. ಈ ಮಾತು ಹೇಳುವುದಕ್ಕೂ ಮುನ್ನ ಶಾರುಖ್ ಖಾನ್ ತನ್ನ ಮಗಳು ಸುಹಾನಾ ಶಾಲಾ ಅರ್ಜಿ ತುಂಬಬೇಕಾದಾಗ ಎದುರಾದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

Vijaya Karnataka Web 27 Jan 2020, 7:35 pm
ಗಣರಾಜ್ಯೋತ್ಸವ ಸಂದರ್ಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಹೇಳಿರುವ ಮಾತು ಈಗ ಇಡೀ ಭಾರತದಾದ್ಯಂತ ಮಾರ್ದನಿಸುತ್ತಿದ್ದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಇಷ್ಟಕ್ಕೂ ಶಾರುಖ್ ಖಾನ್ ಹೇಳಿರುವುದೇನು? ಈ ಸಂದರ್ಭದಲ್ಲಿ ಅವರ ಬಾಯಿಂದ ಈ ಮಾತು ಬರಲು ಕಾರಣವೇನು?
Vijaya Karnataka Web my wife is hindu i am muslim my children are hindustan shah rukh khan
'ನನ್ನ ಪತ್ನಿ ಹಿಂದೂ, ನಾನು ಮುಸ್ಲಿಂ, ನನ್ನ ಮಕ್ಕಳು ಹಿಂದೂಸ್ಥಾನ್'; ಶಾರುಖ್ ಖಾನ್ ಹೀಗೆನ್ನಲು ಕಾರಣ?

ಜೀವನದಲ್ಲಿ ಭಾರತಕ್ಕಿಂತ ನನಗೇನು ಮುಖ್ಯವಲ್ಲ ಎಂದಿರುವ ಶಾರುಖ್ ಖಾನ್ ಕಿರುತೆರೆಯ "ಡ್ಯಾನ್ಸ್ ಪ್ಲಸ್" ಶೋನಲ್ಲಿ ಭಾಗವಹಿಸಿದ್ದಾಗ ಇನ್ನಷ್ಟು ಓಪನ್ ಅಪ್ ಆಗಿದ್ದಾರೆ. ಧರ್ಮದ ಬಗ್ಗೆ ತನ್ನ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ಶಾರುಖ್ ಅವರ ಮಾತುಗಳು ಅಭಿಮಾನಿಗಳ ಹೃದಯವನ್ನೂ ಸ್ಪರ್ಶಿಸಿದ್ದು ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಹರಿದು ಬರುತ್ತಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ವೈರಲ್ ಆಗಿದೆ.

"ನಾವು ಹಿಂದೂ-ಮುಸ್ಲಿಂ ಎಂಬ ಬಗ್ಗೆ ಎಂದೂ ಚರ್ಚಿಸಿಲ್ಲ. ನನ್ನ ಪತ್ನಿ ಹಿಂದೂ, ನಾನು ಮುಸ್ಲಿಮ್, ನನ್ನ ಮಕ್ಕಳು ಹಿಂದೂಸ್ಥಾನಿ" ಎಂದಿದ್ದಾರೆ. ಈ ಮಾತು ಹೇಳುವುದಕ್ಕೂ ಮುನ್ನ ಶಾರುಖ್ ಖಾನ್ ತನ್ನ ಮಗಳು ಸುಹಾನಾ ಶಾಲಾ ಅರ್ಜಿ ತುಂಬಬೇಕಾದಾಗ ಎದುರಾದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.

"ನಮಗೆ ಯಾವುದೇ ಧರ್ಮ ಇಲ್ಲ, ನಾವೆಲ್ಲಾ ಭಾರತೀಯರು"

ಶಾಲಾ ಅರ್ಜಿಯಲ್ಲಿ ಧರ್ಮ ಅಂತಿದೆ, ಏನನ್ನು ಬರೆಯಬೇಕು ಅಪ್ಪಾ ಎಂದು ಕೇಳಿದ್ದಳಂತೆ ಸುಹಾನಾ. ಆಗ ಶಾರುಖ್ ಖಾನ್, "ನಮಗೆ ಯಾವುದೇ ಧರ್ಮ ಇಲ್ಲ, ನಾವೆಲ್ಲಾ ಭಾರತೀಯರು" ಎಂದು ಹೇಳಿದ್ದಾಗಿ ಶಾರುಖ್ ತಿಳಿಸಿದ್ದಾರೆ.

ಶಾರುಖ್ ಖಾನ್ ಐಶಾರಾಮಿ ಬಂಗಲೆ 'ಮನ್ನತ್'ನಲ್ಲಿ ರೂಮ್ ಒಂದರ ಬಾಡಿಗೆ ಎಷ್ಟು?

ನನ್ನ ಪತ್ನಿ ಹಿಂದೂ, ನಾನೂ ಮುಸ್ಲಿಂ, ನನ್ನ ಮಕ್ಕಳು ಭಾರತೀಯರು

"ನಮ್ಮ ನಡುವೆ ಹಿಂದೂ-ಮುಸ್ಲಿಂ ಎಂಬುದು ಇಲ್ಲ. ನನ್ನ ಪತ್ನಿ ಹಿಂದೂ, ನಾನೂ ಮುಸ್ಲಿಮ್, ನನ್ನ ಮಕ್ಕಳು ಭಾರತೀಯರು. ಆದರೆ ಅವರು ಶಾಲೆಗೆ ಹೋದಾಗ "ಧರ್ಮ" ಯಾವುದು ಎಂದು ಅರ್ಜಿಯಲ್ಲಿ ಬರೆಯಬೇಕಾಗಿತ್ತು. ಹಾಗಾಗಿ ನನ್ನ ಮಾಗಳು "ನಮ್ಮ ಧರ್ಮ ಯಾವುದು?" ಎಂದು ಕೇಳಿದ್ದಳು. ನಮಗೆ ಯಾವುದೇ ಧರ್ಮ ಇಲ್ಲ, ನಾವು ಭಾರತೀಯರು ಎಂದು ಬರೆಯಲು ಹೇಳಿದ್ದಾಗಿ ತಿಳಿಸಿದ್ದಾರೆ. ಶಾರುಖ್‌ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಮ್ಮ ಮನೆಯಲ್ಲಿ ಯಾವುದೇ ಧರ್ಮದ ಹೇರಿಕೆ ಇಲ್ಲ

ಈ ಹಿಂದೊಮ್ಮೆ ಶಾರುಖ್ ಖಾನ್ ಮಾತನಾಡುತ್ತಾ, ನಮ್ಮ ಮನೆಯಲ್ಲಿ ಯಾವುದೇ ಧರ್ಮದ ಹೇರಿಕೆ ಇಲ್ಲ ಎಂದಿದ್ದರು. "ನನ್ನ ಮಗ ಮತ್ತು ಮಗಳಿಗೆ ಜಾತಿ ವಿಶಿಷ್ಟವಾದ ಹೆಸರುಗಳನ್ನೂ ಇಟ್ಟಿಲ್ಲ. ಆರ್ಯನ್ ಹಾಗೂ ಸುಹಾನಾ ಎಂಬ ಹೆಸರುಗಳು ಪ್ಯಾನ್ ಇಂಡಿಯಾ ಹಾಗೂ ಪ್ಯಾನ್ ರಿಲೀಜಿಯಸ್" ಎಂದಿದ್ದರು.

ಶಾರುಖ್ ಖಾನ್ "ನಕಲಿ ಮುಸ್ಲಿಮ್" ಎನ್ನಿಸಿಕೊಂಡಿದ್ದೂ ಉಂಟು

ಇನ್ನೊಂದು ವಿಶೇಷ ಎಂದರೆ ಶಾರುಖ್ ಖಾನ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಅಷ್ಟೇ ಉಲ್ಲಾಸ ಉತ್ಸಾಹದಿಂದ ಆಚರಿಸಲಾಗುತ್ತದೆ. ಇದಕ್ಕಾಗಿ ಹಲವಾರು ಸಲ ಟ್ರೋಲ್ ಆಗಿದ್ದೂ ಉಂಟು. ಹಣೆಗೆ ತಿಲಕ ಇಟ್ಟುಕೊಂಡಾಗ, ಗಣೇಶನಿಗೆ ನಮಸ್ಕಾರ ಮಾಡಿದಾಗ "ನಕಲಿ ಮುಸ್ಲಿಮ್" ಎಂದಿದ್ದರು. ಆದರೂ ಶಾರುಖ್ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.

ಇಸ್ಲಾಂ ತತ್ವಗಳಲ್ಲಿ ನನಗೆ ನಂಬಿಕೆ ಇದೆ ಎಂದಿದ್ದ ಶಾರುಖ್

ತನ್ನ ಧರ್ಮಕ್ಕೆ ಸಂಬಂಧಿಸಿದಂತೆ ಈ ಹಿಂದೊಮ್ಮೆ ಮಾತನಾಡಿದ್ದ ಶಾರುಖ್, "ಐದು ಬಾರಿ ನಮಾಜ್ (ಪ್ರಾರ್ಥನೆ) ಓದುವ ವಿಷಯದಲ್ಲಿ ನಾನು ಧಾರ್ಮಿಕನಲ್ಲ. ಆದರೆ ಇಸ್ಲಾಂ ತತ್ವಗಳಲ್ಲಿ ನನಗೆ ನಂಬಿಕೆ ಇದೆ. ಇಸ್ಲಾಂ ಎಂಬುದು ಒಳ್ಳೆಯ ಧರ್ಮ ಮತ್ತು ಉತ್ತಮ ಶಿಸ್ತು ಎಂದು ನಾನು ನಂಬುತ್ತೇನೆ" ಎಂದಿದ್ದರು. ಶಾರುಖ್ ಖಾನ್ ಮದುವೆಯಾಗಿರುವ ಗೌರಿ ಅವರು ಹಿಂದೂ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ದಂಪತಿಗಳಿಗೆ ಆರ್ಯನ್, ಸುಹಾನಾ ಹಾಗೂ ಅಬ್‌ರಾಮ್ ಮೂರು ಮಕ್ಕಳಿದ್ದಾರೆ.

ವೈರಲ್ ಆಗಿರುವ ಶಾರುಖ್ ವಿಡಿಯೋ ಕ್ಲಿಪ್ಪಿಂಗ್ ಇದೇ ನೋಡ

ನಾವು ಹಿಂದೂ-ಮುಸ್ಲಿಂ ಎಂಬ ಬಗ್ಗೆ ಎಂದೂ ಚರ್ಚಿಸಿಲ್ಲ. ನನ್ನ ಪತ್ನಿ ಹಿಂದೂ, ನಾನು ಮುಸ್ಲಿಮ್, ನನ್ನ ಮಕ್ಕಳು ಹಿಂದೂಸ್ಥಾನಿ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌