ಆ್ಯಪ್ನಗರ

ಎನ್‌ಟಿಆರ್‌ ಚಿತ್ರಕ್ಕೆ ನಾದೇಂಡ್ಲ ಶಾಕ್‌

1984ರಲ್ಲಿ ಮುಖ್ಯಮಂತ್ರಿಯಾಗಿ ಎನ್‌.ಟಿ. ರಾಮರಾವ್‌ ಅವರನ್ನು ಪದಚ್ಯುತಗೊಳಿಸಿದ್ದ ಅಂದಿನ ಕೇಂದ್ರ ಸರಕಾರ, ಮುಖ್ಯಮಂತ್ರಿ ಕುರ್ಚಿಯಲ್ಲಿ ನಾದೇಂಡ್ಲ ಭಾಸ್ಕರರಾವ್‌ ಅವರನ್ನು ಕೂರಿಸಿತ್ತು. ಈ ಬೆಳವಣಿಗೆ ಇಡೀ ದೇಶಾದ್ಯಂತ ದೊಡ್ಡ ಕಂಪನ ಉಂಟು ಮಾಡಿತ್ತು.

Vijaya Karnataka 31 Dec 2018, 8:54 am
ನಂದಮೂರಿ ಬಾಲಕೃಷ್ಣ ತಮ್ಮ ತಂದೆ ಎನ್‌ಟಿಆರ್‌ ಪಾತ್ರದಲ್ಲಿ ನಟಿಸುತ್ತಿರುವ ಎನ್‌ಟಿಆರ್‌ ಸಿನಿಮಾ ಇದೀಗ ಆಂಧ್ರ ಪ್ರದೇಶ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದೆ.
Vijaya Karnataka Web opuh


ಈ ಚಿತ್ರದಲ್ಲಿ ತಮ್ಮನ್ನು ಕೆಟ್ಟದ್ದಾಗಿ ಚಿತ್ರಿಸಿರುವ ಅನುಮಾನವಿದೆ. ಒಂದು ವೇಳೆ ಹಾಗೆ ಚಿತ್ರಿಸಿದ್ದರೆ ನಾನು ನ್ಯಾಯಾಲಯಕ್ಕೆ ಮೊರೆ ಹೋಗುತ್ತೇನೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ನಾದೇಂಡ್ಲ ಭಾಸ್ಕರ ರಾವ್ ಹೇಳಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

1984ರಲ್ಲಿ ಮುಖ್ಯಮಂತ್ರಿಯಾಗಿ ಎನ್‌.ಟಿ. ರಾಮಾರಾವ್‌ ಅವರನ್ನು ಪದಚ್ಯುತಗೊಳಿಸಿದ್ದ ಅಂದಿನ ಕೇಂದ್ರ ಸರಕಾರ, ಮುಖ್ಯಮಂತ್ರಿ ಕುರ್ಚಿಯಲ್ಲಿ ನಾದೇಂಡ್ಲ ಭಾಸ್ಕರರಾವ್‌ ಅವರನ್ನು ಕೂರಿಸಿತ್ತು. ಈ ಬೆಳವಣಿಗೆ ಇಡೀ ದೇಶಾದ್ಯಂತ ದೊಡ್ಡ ಕಂಪನ ಉಂಟು ಮಾಡಿತ್ತು.

ಈ ಘಟನೆಯೂ ಸಿನಿಮಾದಲ್ಲಿ ಸೇರಿರುವ ಮಾಹಿತಿ ಇದೆ. ಒಂದು ವೇಳೆ ಸಿನಿಮಾದಲ್ಲಿ ನನ್ನ ಪಾತ್ರವನ್ನು ನೆಗೆಟೀವ್‌ ಆಗಿ ತೋರಿಸಿದ್ದರೆ ಸುಮ್ಮನಿರುವ ಪ್ರಶ್ನೆಯಿಲ್ಲ. ನ್ಯಾಯಾಲಯಕ್ಕೆ ಮೊರೆ ಹೋಗಿ ನ್ಯಾಯ ಪಡೆಯುತ್ತೇನೆಂದು ಅವರು ಹೈದರಾಬಾದ್‌ನಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ನಿರ್ದೇಶಕ ಕ್ರಿಶ್‌ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌