ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ನಾಸಿರುದ್ದೀನ್ ಶಾ ಹಾಸ್ಯ ಪಾತ್ರಗಳಿಗೂ ಹೆಸರಾದವರು. ಆದರೆ ಈಗ ಅವರು ತಾವು ಸಾಕಷ್ಟು ಹಾಸ್ಯ ಪಾತ್ರಗಳಲ್ಲಿ ನಟಿಸದಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ನನ್ನೊಳಗಿರುವ ಹಾಸ್ಯ ಪ್ರಜ್ಞೆ ತುಂಬಾ ವಿಭಿನ್ನವಾದದ್ದು. ಹಾಸ್ಯ ನಟನಾಗಿ ನನ್ನ ಸಾಮರ್ಥ್ಯ ಸಂಪೂರ್ಣ ಬಳಕೆಯಾಗಿಲ್ಲ. ನಾನು ಇನ್ನಷ್ಟು ಕಾಮಿಡಿ ರೋಲ್ಗಳಲ್ಲಿ ನಟಿಸಬೇಕಿತ್ತು ಎಂದು ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ನನಗೆ ಏನಾದರೂ ಖೇದ ತರುವ ವಿಷಯವಿದ್ದರೆ ಅದು ಇದೊಂದೇ. ನನ್ನೊಳಗಿರುವ ಹಾಸ್ಯ ನಟನ ಸಂಪೂರ್ಣ ಬಳಕೆ ಆಗಿಲ್ಲ. ಆದರೆ ಇನ್ನೂ ಸಮಯವಿದೆ. ವಿವಿಧ ಸಿನಿಮಾಗಳಲ್ಲಿ ನನಗೆ ಹಾಸ್ಯ ನಟನ ಆಫರ್ ಬರುತ್ತಾ ಇವೆ. ಆದರೆ ಸಿನಿಮಾ ಜಗತ್ತು ಬಯಸುವ ಹಾಸ್ಯ ಪ್ರಜ್ಞೆ ನನ್ನದಲ್ಲ. ನನ್ನ ಹಾಸ್ಯ ಪ್ರಜ್ಞೆ ತುಂಬಾ ಭಿನ್ನವಾಗಿದೆ. ನಾವು ಉತ್ತಮವಾಗಿರುವ ಹಾಸ್ಯ ಪಾತ್ರಗಳನ್ನು ಮಾಡಲು ಸಾಧ್ಯವಿದೆ ಎಂದು ನಾಸಿರುದ್ದೀನ್ ಶಾ ತಿಳಿಸಿದ್ದಾರೆ.
ಹಾಸ್ಯ ಪಾತ್ರ ಇನ್ನಷ್ಟು ಬೇಕಿತ್ತು: ನಾಸಿರುದ್ದೀನ್ ಶಾ
ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ನಾಸಿರುದ್ದೀನ್ ಶಾ ಹಾಸ್ಯ ಪಾತ್ರಗಳಿಗೂ ಹೆಸರಾದವರು...
Vijaya Karnataka 23 Aug 2017, 5:30 am