ಆ್ಯಪ್ನಗರ

ದಲಿತನ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ

ಬಾಳ್‌ ಸಾಹೇಬ್‌ ಠಾಕ್ರೆ ಬಯೋಪಿಕ್‌ನಲ್ಲಿ ನಟಿಸಿ ತಾವು ಎಂಥ ಪಾತ್ರದಲ್ಲೂ ನಟಿಸಲು ರೆಡಿ ಎಂದು ಸಾಬೀತುಪಡಿಸಿದ್ದ ಬಾಲಿವುಡ್‌ ನಟ ...

Vijaya Karnataka 29 May 2019, 5:00 am
ಬಾಳ್‌ ಸಾಹೇಬ್‌ ಠಾಕ್ರೆ ಬಯೋಪಿಕ್‌ನಲ್ಲಿ ನಟಿಸಿ ತಾವು ಎಂಥ ಪಾತ್ರದಲ್ಲೂ ನಟಿಸಲು ರೆಡಿ ಎಂದು ಸಾಬೀತುಪಡಿಸಿದ್ದ ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಹೊಸ ಚಿತ್ರವೊಂದರಲ್ಲಿ ದಲಿತ ವ್ಯಕ್ತಿಯ ಪಾತ್ರ ಮಾಡಲಿದ್ದಾರೆ. ಜಾತಿ ವ್ಯವಸ್ಥೆ ಕುರಿತಾದ ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಧೀರ್‌ ಮಿಶ್ರಾ ನಿರ್ದೇಶಿಸುತ್ತಿದ್ದಾರೆ. ಮಂಜು ಜೋಸೆಫ್‌ ಬರೆದಿರುವ ಸೀರಿಯಸ್‌ ಮೆನ್‌ ಎಂಬ ಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣವಾಗಲಿದೆ.
Vijaya Karnataka Web nawazuddin siddiqui-1


ಈ ಕುರಿತು ಮಾತನಾಡಿರುವ ಸುಧೀರ್‌ ಮಿಶ್ರಾ, ಬಹಳ ದಿನಗಳಿಂದ ನಾನು ಸಿದ್ದಿಕಿ ಜತೆ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಅವರಿಗಾಗಿ ಸೂಕ್ತ ಪಾತ್ರವೊಂದನ್ನು ಹುಡುಕುತ್ತಿದ್ದೆ. ಉತ್ತರ ನಟರಿಗೆ ಉತ್ತಮ ಸ್ಕ್ರಿಪ್ಟನ್ನೇ ನೀಡಬೇಕು. ಸೀರಿಯನ್‌ ಮೆನ್‌ ಕಾದಂಬರಿಯಲ್ಲಿ ನನಗೆ ಅವರಿಗಾಗಿ ಒಂದು ಪಾತ್ರ ಸಿಕ್ಕಿತು ಎಂದಿದ್ದಾರೆ. ದಲಿತ ಸಮುದಾಯದ ತಂದೆ ಮತ್ತು ಮಗನ ನಡುವಿನ ಸಂಬಂಧದ ಕುರಿತ ಕಥೆಯಿರುವ ಸೀರಿಯಸ್‌ ಮೆನ್‌ ಕೃತಿ 2010ರಲ್ಲಿ ಬಿಡುಗಡೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌