ಅನುಷ್ಕಾ ಶರ್ಮ ಅಭಿನಯದ ಪರಿ ಸಿನಿಮಾದ ತಮಿಳು ರಿಮೇಕ್ನಲ್ಲಿ ನಟಿ ನಯನತಾರಾ ನಟಿಸುತ್ತಿಲ್ಲ ಎಂದು ಅವರ ನಿಕಟವರ್ತಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ನಯನತಾರಾ ಅವರು ಅನುಷ್ಕಾ ಶರ್ಮ ಮಾಡಿದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು.
ಹೊಸ ವರದಿಯ ಪ್ರಕಾರ, ಪರಿ ಸಿನಿಮಾದ ತಮಿಳು ರಿಮೇಕ್ಗೆ ಪ್ರಧಾನ ನಟಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಲಾಗುತ್ತಿದ್ದೆ. ಸದ್ಯಕ್ಕೆ ನಯನತಾರಾ ಅವರು ತೆಲುಗಿನ ಸೈರಾ ನರಸಿಂಹ ರೆಡ್ಡಿ ಮತ್ತು ತಮಿಳಿನ ಕೊಳಮಾವು ಕೋಕಿಲಾ ಸಿನಿಮಾಗಳ ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ.