ಆ್ಯಪ್ನಗರ

ಆಸ್ಕರ್‌ ಪಡೆದು ಭಾರತಕ್ಕೆ ಹೆಮ್ಮೆ ತಂದ ಪ್ರತಿಭಾವಂತನಿಗೂ ಅವಮಾನ ಮಾಡಿತ್ತು ಬಾಲಿವುಡ್‌!

ಬಾಲಿವುಡ್‌ನವರು ತಮಗೆ ಮಾಡಿರುವ ಅವಮಾನದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸೌಂಡ್‌ ಡಿಸೈನರ್‌ ರೆಸೂಲ್‌ ಪೂಕುಟ್ಟಿ. ಈ ವಿಚಾರ ಈಗ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡದಾಗಿ ಚರ್ಚೆ ಆಗುತ್ತಿದೆ.

Vijaya Karnataka Web 27 Jul 2020, 12:33 pm
ಪ್ರೇಕ್ಷಕರು ಹೊರಗಿಂದ ನೋಡುವಷ್ಟು ಸುಂದರವಾಗಿಲ್ಲ ಬಾಲಿವುಡ್‌. ಅದರೊಳಗೆ ಅನೇಕ ಪಿಡುಗುಗಳಿವೆ. ಕೀಳು ಮಟ್ಟದ ರಾಜಕೀಯ ಇದೆ. ಹಾಗಂತ ಇವೆಲ್ಲ ಅಂತೆ-ಕಂತೆಗಳಲ್ಲ. ಹಿಂದಿ ಚಿತ್ರರಂಗದಿಂದ ನೋವು, ಅವಮಾನ ಅನುಭವಿಸಿದ ಅನೇಕರು ಸ್ವತಃ ಈ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಖ್ಯಾತ ಸೌಂಡ್‌ ಡಿಸೈನರ್‌ ರೆಸೂಲ್‌ ಪೂಕುಟ್ಟಿ ಅವರು ಈ ವಿಚಾರವನ್ನು ಬಾಯಿಬಿಟ್ಟಿದ್ದಾರೆ.
Vijaya Karnataka Web oscar winner resul pookutty says nobody was giving him work in hindi films
ಆಸ್ಕರ್‌ ಪಡೆದು ಭಾರತಕ್ಕೆ ಹೆಮ್ಮೆ ತಂದ ಪ್ರತಿಭಾವಂತನಿಗೂ ಅವಮಾನ ಮಾಡಿತ್ತು ಬಾಲಿವುಡ್‌!


ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರ ವಿರುದ್ಧವೂ ಬಾಲಿವುಡ್‌ನಲ್ಲಿ ಕೆಲವರು ಪಿತೂರಿ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ರೆಹಮಾನ್‌ ಮಾತಿಗೆ ಸಹಮತ ಸೂಚಿಸುವ ಸಲುವಾಗಿ ನಿರ್ದೇಶಕ ಶೇಖರ್‌ ಕಪೂರ್‌ ಟ್ವೀಟ್‌ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ರೆಸೂಲ್‌ ಪೂಕುಟ್ಟಿ ಅವರು ತಮ್ಮ ಮನದ ನೋವನ್ನೂ ತೋಡಿಕೊಂಡಿದ್ದಾರೆ.

'ನನಗೆ ಹಿಂದಿ ಚಿತ್ರರಂಗದಲ್ಲಿ ಯಾರೂ ಕೆಲಸ ಕೊಡುತ್ತಿರಲಿಲ್ಲ. ಅದರಿಂದ ನಾನು ಬಹುತೇಕ ಕುಸಿದುಹೋಗಿದ್ದೆ. ಆಸ್ಕರ್‌ ಗೆದ್ದ ಬಳಿಕ ಪ್ರಾದೇಶಿಕ ಸಿನಿಮಾಗಳೇ ನನ್ನನ್ನು ಕೈ ಹಿಡಿದವು. ನಿಮ್ಮ ಅಗತ್ಯ ನಮಗೆ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಮಾತನಾಡಿದ ಅನೇಕ ನಿರ್ಮಾಣ ಸಂಸ್ಥೆಗಳಿವೆ. ಆದರೂ ಚಿತ್ರರಂಗವನ್ನು ನಾನು ಪ್ರೀತಿಸುತ್ತೇನೆ' ಎಂದು ಟ್ವೀಟ್‌ ಮಾಡಿದ್ದಾರೆ ರೆಸೂಲ್‌ ಪೂಕುಟ್ಟಿ.

also read: 'ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ'! ಎ.ಆರ್‌. ರೆಹಮಾನ್‌ ಅವರನ್ನೂ ಬಿಟ್ಟಿಲ್ಲ ಮೂವಿ ಮಾಫಿಯಾ!

2008ರಲ್ಲಿ ಬಂದ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರಕ್ಕೆ ರೆಸೂಲ್‌ ಪೂಕುಟ್ಟಿ ಸೌಂಡ್ ಡಿಸೈನಿಂಗ್‌ ಮಾಡಿದ್ದರು. ದೇವ್‌ ಪಟೇಲ್‌, ಫ್ರಿಡಾ ಪಿಂಟೋ ಮುಖ್ಯ ಭೂಮಿಕೆ ನಿಭಾಯಿಸಿದ್ದ ಆ ಸಿನಿಮಾಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ನಿರ್ದೇಶನ ಮಾಡಿದ್ದರು. ಆಸ್ಕರ್‌ ಪ್ರಶಸ್ತಿಯ 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ಬರೋಬ್ಬರಿ 8 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು.

also read: ಚಿತ್ರರಂಗದ ಹುಳುಕುಗಳ ಬಗ್ಗೆ ಬಾಯಿಬಿಟ್ಟ 'ಕೆಜಿಎಫ್‌ 2' ನಟಿ ರವೀನಾ ಟಂಡನ್‌! ಹೀಗೆಲ್ಲಾ ನಡೆಯುತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌