ಆ್ಯಪ್ನಗರ

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಿವುಡ್ ನಟ ಆಸಿಫ್ ಬಸ್ರಾ!

ಬಾಲಿವುಡ್ ನಟ ಆಸಿಫ್ ಬಸ್ರಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಈಗಾಗಲೇ ಇವರ ಸಾವಿನ ಕುರಿತು ತನಿಖೆ ನಡೆಯುತ್ತಿದೆ.

THE TIMES OF INDIA NEWS SERVICE 12 Nov 2020, 4:58 pm
'ಪಾತಾಳ್ ಲೋಕ್' ವೆಬ್ ಸಿರೀಸ್‌, 'ಕೈ ಪೊ ಚೆ' ಸಿನಿಮಾದಲ್ಲಿ ನಟಿಸಿದ್ದ ನಟ ಆಸಿಫ್ ಬಸ್ರಾ ಧರ್ಮಶಾಲಾದ ಖಾಸಗಿ ಕಟ್ಟಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರಿಗೆ 53 ವರ್ಷ ವಯಸ್ಸಾಗಿತ್ತು. ಈಗಾಗಲೇ ಇದರ ತನಿಖೆ ನಡೆಯುತ್ತಿದೆಯಂತೆ.
Vijaya Karnataka Web paatal lok web series actor asif basra passed away
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಿವುಡ್ ನಟ ಆಸಿಫ್ ಬಸ್ರಾ!


ಹಾಟ್‌ಸ್ಟೇಜಸ್‌ನ ಸಿರೀಸ್‌ನಲ್ಲಿ ಆಸಿಫ್ ಕಾಣಿಸಿಕೊಂಡಿದ್ದರು. ಪಾತಾಳ್ ಲೋಕ್‌ ಸಿರೀಸ್‌ನಲ್ಲಿ ಅವರು ಸೀನಿಯರ್ ಎಕ್ಸಿಕ್ಯುಟಿವ್ ಆಫೀಸರ್ ಆಗಿ ಅಭಿನಯಿಸಿದ್ದರು. 'ಜಬ್ ವಿ ಮೆಟ್', 'ಒನ್ಸ್ ಅಪೋನ್ ಅ ಟೈಮ್ ಇನ್ ಮುಂಬೈ', 'ಕ್ರಿಶ್ 3', 'ಏಕ್ ವಿಲನ್' ಮುಂತಾದ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ. ಹಿಂದಿ, ಉರ್ದು, ಇಂಗ್ಲಿಷ್ ಭಾಷೆಯ ಅನೇಕ ನಾಟಕಗಳನ್ನು ವಿದೇಶದಲ್ಲಿ ಕೂಡ ಆಸಿಫ್ ಪ್ರದರ್ಶಿಸಿದ್ದರು.

ಮಹಾರಾಷ್ಟ್ರದ ಅಮರಾವತಿಯಲ್ಲಿ ಆಸಿಫ್ 1967ರಲ್ಲಿ ಜನಿಸಿದ್ದರು. ಮುಂಬೈನಲ್ಲಿ ನಟನಾ ತರಬೇತಿ ಕೂಡ ಪಡೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌