ಆ್ಯಪ್ನಗರ

'ಪ್ಯಾಡ್‌ಮ್ಯಾನ್' ಮಹಿಳಾ ವಿಶೇಷ ಶೋಗೆ ವಿರೋಧ

ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ 'ಪ್ಯಾಡ್‌ಮ್ಯಾನ್' ಸಿನಿಮಾ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಫೆಬ್ರವರಿ 9ರಂದು ಬಿಡುಗಡೆಯಾದ ಈ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿದೆ. ಚಿತ್ರದ ಕಥೆಯ ಕಾರಣಕ್ಕೆ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿವೆ.

Ei Samay 17 Feb 2018, 12:28 pm
ಅಕ್ಷಯ್ ಕುಮಾರ್ ಅಭಿನಯದ ಬಾಲಿವುಡ್ 'ಪ್ಯಾಡ್‌ಮ್ಯಾನ್' ಸಿನಿಮಾ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ. ಫೆಬ್ರವರಿ 9ರಂದು ಬಿಡುಗಡೆಯಾದ ಈ ಸಿನಿಮಾ ಎಲ್ಲರ ಮೆಚ್ಚುಗೆ ಗಳಿಸಿದೆ. ಚಿತ್ರದ ಕಥೆಯ ಕಾರಣಕ್ಕೆ ಪಿವಿಆರ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಮಹಿಳೆಯರಿಗಾಗಿಯೇ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿವೆ.
Vijaya Karnataka Web padman exclusive show for women
'ಪ್ಯಾಡ್‌ಮ್ಯಾನ್' ಮಹಿಳಾ ವಿಶೇಷ ಶೋಗೆ ವಿರೋಧ


ಬಿಡುಗಡೆಯಾದ ಒಂದು ವಾರದ ಬಳಿಕ, ಪ್ರತಿ ದಿನ ಮ್ಯಾಟಿನಿ ಶೋ ಮಹಿಳೆಯರಿಗೆ ಮೀಸಲು. ಈ ವಿಶೇಷ ಶೋಗೆ ಪುರುಷರಿಗೆ ಅನುಮತಿಯಿಲ್ಲ. ಸಿನಿಮಾದ ಕಥಾವಸ್ತು ಮುಟ್ಟಿನ ಸಮಸ್ಯೆ ಬಗ್ಗೆ ಇರುವುದು ಹಾಗೂ ಪುರುಷರೊಂದಿಗೆ ವೀಕ್ಷಿಸುವುದು ಸ್ವಲ್ಪ ಕಿರಿಕಿರಿ ಎಂಬ ಕಾರಣ ಪಿವಿಆರ್ ಈ ವಿಶೇಷ ವ್ಯವಸ್ಥೆ ಮಾಡಿದೆ. ಆದರೆ ಈ ಬಗ್ಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ.

ನಗರದಲ್ಲೇ ಪರಿಸ್ಥಿತಿ ಈ ರೀತಿ ಇದ್ದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದು ನೀವೇ ಊಹಿಸಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಿದ್ದರೆ ಈ ಸಿನಿಮಾಗೆ ಮಾತ್ರ ಯಾಕೆ ವಿಶೇಷ ಪ್ರದರ್ಶನ, ಪದ್ಮಾವತ್‌ಗೆ ಯಾಕೆ ವ್ಯವಸ್ಥೆ ಮಾಡಲಿಲ್ಲ ಎಂದು ಪ್ರಶ್ನಿಸಿದರೆ, ಪಿವಿಆರ್‌ನ ಅಧಿಕಾರಿ ಶಮೀರ್ ಖಾನ್, 'ಚಿತ್ರದ ವಸ್ತು ಮಹಿಳೆಯರಿಗೆ ಸಂಬಂಧಿಸಿದ್ದು, ಹಾಗಾಗಿ ಈ ವಿಶೇಷ ಪ್ರದರ್ಶನ. ಮುಟ್ಟಿನ ಸಮಸ್ಯೆ ಎಂಬುದು ಸಾಮಾಜಿಕ ಅಥವಾ ದೈಹಿಕ ವಿಚಾರಕ್ಕೆ ಸಂಬಂಧಿಸಿದ್ದಲ್ಲ. ಇದು ಮಹಿಳೆಯರಿಗೆ ಸಂಬಂಧಿಸಿದ್ದು, ಹಾಗಾಗಿ ಈ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ' ಎಂದಿದ್ದಾರೆ.

ಆದರೆ ಈ ವಿಶೇಷ ಪ್ರದರ್ಶನಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗುತ್ತಿದೆ. ನಟಿ ಸೋಹಿನಿ ಸರ್ಕಾರ್ ಈ ವಿಶೇಷ ಪ್ರದರ್ಶನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸೀಟು ರಿಸರ್ವ್ ಮಾಡಲು ಇದೇನು ಬಸ್ಸೇ?' ಎಂದು ಪ್ರಶ್ನಿಸಿದ್ದಾರೆ. ಈ ದೇಶದಲ್ಲಿ ಹೆಣ್ಣು ಹುಟ್ಟುವ ಮುಂಚೆಯೇ ಸಾಯಿಸುವವರಿರುವಾಗ ಇನ್ನು ಯಾವುದೂ ಅನಿರೀಕ್ಷಿತವಲ್ಲ ಬಿಡಿ ಎಂದು ಬೇಸರಿಸಿಕೊಂಡಿದ್ದಾರೆ.

ಈ ಬಗ್ಗೆ ಸಮಾಜವಾದಿ ಸ್ವಾತಿ ಘೋಶ್ ಮಾತನಾಡುತ್ತಾ, ಇದೆಲ್ಲಾ ಲಿಂಗತಾರತಮ್ಯದ ಧೋರಣೆ ಎಂದಿದ್ದಾರೆ. ಮಲ್ಟಿಫ್ಲೆಕ್ಸ್ ಅವರ ವ್ಯಾಪಾರಿ ಧೋರಣೆ ಇದು ಎಂದು ಟೀಕಿಸಿದ್ದಾರೆ ಸೈಕಾಲಜಿಸ್ಟ್ ಐಂದ್ರಿತಾ ರಾಯ್. ಎಲ್ಲಾ ರೀತಿಯ ಗ್ರಾಹಕರನ್ನು ಸೆಳೆಯುವ ತಂತ್ರ ಇದಷ್ಟೇ ಹೊರತು ಅವರಿಗೆ ಯಾವುದೇ ಕಾಳಜಿ ಇಲ್ಲ ಎಂಬುದು ಅವರ ಮಾತು.

ಇದುವರೆಗೆ ಮಹಿಳೆಯ ಮುಟ್ಟಿನ ಬಗ್ಗೆ ಪುರುಷರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದರು. ರೆಡ್ ಸಿಗ್ನಲ್ ಆನ್ ಆಗಿದೆಯೆಂದೋ, ಐದು ದಿನಗಳ ಟೆಸ್ಟ್ ಮ್ಯಾಚ್ ಎಂದು ಮಹಿಳೆಯರ ಮುಟ್ಟಿನ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಬಹುಶಃ ಇದೇ ರೀತಿಯ ಕಾಮೆಂಟ್‌ಗಳು ಚಿತ್ರಮಂದಿರಲ್ಲೂ ಕೇಳಿಸಬಹುದು ಎಂಬ ಅಂಜಿಕೆ ಮಹಿಳೆಯರಿಗೆ ಇರಬಹುದು ಎಂಬ ಅಭಿಪ್ರಾಯವೂ ಇದೆ.

ವರದಿ: ಶ್ರಮಣ ಗೋಸ್ವಾಮಿ

Read this news in Bengali

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌