ಆ್ಯಪ್ನಗರ

ಖಾದರ್‌ ಖಾನ್‌ ಪಾತ್ರದಲ್ಲಿ ಪರೇಶ್‌ ರಾವಲ್‌

ಗೋವಿಂದ ಮತ್ತು ಕರಿಷ್ಮಾ ಕಪೂರ್‌ ನಟಿಸಿದ್ದ ಕೂಲಿ ನಂ.1 ಸಿನಿಮಾದ ಸೀಕ್ವೆಲ್‌ನಲ್ಲಿ ವರುಣ್‌ ಧವನ್‌ ಮತ್ತು ಸಾರಾ ಆಲಿ ಖಾನ್‌ ನಟಿಸುವುದು ಖಚಿತವಾಗಿದೆ. ಈ ಸಿನಿಮಾ ಪ್ರಿಕ್ವೆಲ್‌ ಸಿನಿಮಾಗಿಂತ ಸಂಪೂರ್ಣ ಭಿನ್ನವಾಗಿರಲಿದೆ.

Vijaya Karnataka 14 May 2019, 7:30 am
ಕೂಲಿ ನಂ.1 ಸಿನಿಮಾದ ರಿಮೇಕ್‌ನಲ್ಲಿ ಹಿರಿಯ ನಟ ಪರೇಶ್‌ ರಾವಲ್‌ ಅವರು ದಿವಂಗತ ಹಾಸ್ಯನಟ ಖಾದರ್‌ ಖಾನ್‌ ಪಾತ್ರದಲ್ಲಿ ನಟಿಸಲಿದ್ದಾರೆ. ಅವರು ಈ ಮೊದಲು ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ನಟಿಸಿ ಗಮನ ಸೆಳೆದಿದ್ದಾರೆ. ಆದ್ದರಿಂದ ಕೂಲಿ ನಂ.1 ಸಿನಿಮಾದಲ್ಲಿ ಖಾದರ್‌ ಖಾನ್‌ ಮಾಡಿದ್ದ ಹಾಸ್ಯ ಪಾತ್ರವನ್ನು ಪರೇಶ್‌ ರಾವಲ್‌ ಅವರೇ ಉತ್ತಮವಾಗಿ ಮಾಡಬಲ್ಲರು ಎಂದು ಚಿತ್ರತಂಡ ನಿರ್ಧರಿಸಿರುವ ಕಾರಣ ಕೂಲಿ ನಂ.1 ರಿಮೇಕ್‌ನಲ್ಲಿ ಪರೇಶ್‌ ಅವರು ಜನರನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ಜನರನ್ನು ರಂಜಿಸುವ ಎಲ್ಲಾ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Vijaya Karnataka Web paresh-rawal


ಗೋವಿಂದ ಮತ್ತು ಕರಿಷ್ಮಾ ಕಪೂರ್‌ ನಟಿಸಿದ್ದ ಕೂಲಿ ನಂ.1 ಸಿನಿಮಾದ ಸೀಕ್ವೆಲ್‌ನಲ್ಲಿ ವರುಣ್‌ ಧವನ್‌ ಮತ್ತು ಸಾರಾ ಆಲಿ ಖಾನ್‌ ನಟಿಸುವುದು ಖಚಿತವಾಗಿದೆ. ಈ ಸಿನಿಮಾ ಪ್ರಿಕ್ವೆಲ್‌ ಸಿನಿಮಾಗಿಂತ ಸಂಪೂರ್ಣ ಭಿನ್ನವಾಗಿರಲಿದೆ.

ಇದು ಪ್ರಿಕ್ವೆಲ್‌ ಸಿನಿಮಾದ ಸಂಪೂರ್ಣ ರಿಮೇಕ್‌ ಅಲ್ಲ ಬದಲಾಗಿ ಮರು ನಿರ್ಮಾಣ ಎಂದು ವರುಣ್‌ ಧವನ್‌ ತಿಳಿಸಿದ್ದಾರೆ. ಇದರಲ್ಲಿ ಪರೇಶ್‌ ರಾವಲ್‌ ಅವರು ಸಾರಾ ಆಲಿ ಖಾನ್‌ರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌