ಆ್ಯಪ್ನಗರ

ವಾರದಲ್ಲಿ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ಗಳಿಸಿದ್ದೆಷ್ಟು?

ಪಿಎಂ ಮೋದಿ ಬಯೋಪಿಕ್‌ನಲ್ಲಿ 'ನರೇಂದ್ರ ಮೋದಿ' ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಈ ಚಿತ್ರವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚುನಾವಣೆ ವೇಳೆಯಲ್ಲಿ ಬಿಡುಗಡೆ ಘೋಷಿಸಿದ್ದ ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿ, ಚುನಾವಣೆ ಬಳಿಕ ರಿಲೀಸ್ ಆಗಿದೆ.

Vijaya Karnataka Web 1 Jun 2019, 9:22 am
ಮತ್ತೊಮ್ಮೆ, ಎರಡನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇಡೀ ದೇಶ ಮೋದಿ ಮತ್ತು ಮೋದಿ ಕ್ಯಾಬಿನೆಟ್ ಕುರಿತು ಮಾತನಾಡುತ್ತಿದೆ. ಜೊತೆಗೆ, ಚುನಾವಣೆ ಫಲಿತಾಂಶದ ಬಳಿಕ ಬಿಡುಗಡೆಯಾಗಿರುವ ಮೋದಿ ಬಯೋಪಿಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೈಲೆಂಟ್ ಆಗಿ ಸದ್ದು ಮಾಡುತ್ತಿದೆ. ಮೇ 24 ರಂದು ತೆರೆಕಂಡಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ ಯಶಸ್ವಿ ಒಂದು ವಾರ ಪೂರೈಸಿದೆ.
Vijaya Karnataka Web modi0106


ಮೋದಿ ಬಯೋಪಿಕ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಎನ್ನಬಹುದು. ಭಾರತದ ಪ್ರಧಾನಿ ಮೋದಿ ಬಗ್ಗೆ ತಮಗೆ ತಿಳಿಯದಿರುವ ಸಂಗತಿಯನ್ನು ತಿಳಿದುಕೊಳ್ಳುವ ಕುತೂಹಲದಿಂದ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರದ ಕಡೆ ಬರುತ್ತಿದ್ದಾರೆ. ಮೊದಲ ದಿನ 2.88 ಕೋಟಿ ರೂ. ಗಳಿಸಿದ್ದ ಮೋದಿ ಸಿನಿಮಾ, ಮೊದಲ ಮೂರು ದಿನದಲ್ಲಿ 11 ಕೋಟಿ ಕಲೆಕ್ಷನ್ ಮಾಡಿತ್ತು. ಸಾಕಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಪಿಎಮ್ ನರೇಂದ್ರ ಮೋದಿ' ಚಿತ್ರವು ಇದೀಗ ಏಳನೇ ದಿನಕ್ಕೆ 19.21 ಕೋಟಿ ಗಳಿಸಿದೆ ಎನ್ನಲಾಗಿದೆ.

ಅಚ್ಚರಿಯ ಸಂಗತಿ ಎಂದರೆ 'ಮೋದಿ ಬಯೋಪಿಕ್' ಸಿನಿಮಾ ಬಜೆಟ್ ಕೇವಲ 8 ಕೋಟಿ ಎನ್ನಲಾಗಿದೆ. ಅದರೆ ಈಗಾಗಲೇ ಅದು ಗಳಿಸಿದ್ದು 19.21 ಕೋಟಿಗಳು. ಬಜೆಟ್ ಮತ್ತು ಗಳಿಕೆ ಹೋಲಿಸಿಕೊಂಡರೆ ಚಿತ್ರವು ಯಶಸ್ವಿಯಾಗಿದೆ ಎಂದೇ ಹೇಳಬೇಕು. ಈಗಾಗಲೇ ಪ್ರೇಕ್ಷಕರು ಹಾಗೂ ವಿಮರ್ಶಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಚಿತ್ರವು ಉತ್ತಮ ಮೊತ್ತವನ್ನು ಗಳಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಪಿಎಂ ಮೋದಿ ಬಯೋಪಿಕ್‌ನಲ್ಲಿ 'ನರೇಂದ್ರ ಮೋದಿ' ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದಾರೆ. ಈ ಚಿತ್ರವನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚುನಾವಣೆ ವೇಳೆಯಲ್ಲಿ ಬಿಡುಗಡೆ ಘೋಷಿಸಿದ್ದ ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿ, ಚುನಾವಣೆ ಬಳಿಕ ರಿಲೀಸ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌