ಆ್ಯಪ್ನಗರ

ಬದಲಾದ ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆ: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

'ಪಿಎಮ್ ನರೇಂದ್ರ ಮೋದಿ' ಚಿತ್ರದಲ್ಲಿ ಬಹಭಾಷಾ ನಟ ವಿವೇಕ್ ಒಬಿರಾಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ನಟ ವಿವೇಕ್ ಒಬಿರಾಯ್ ಅವರು ವಿವಿಧ ಗೆಟ್‌ಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Vijaya Karnataka Web 21 Mar 2019, 3:17 pm
ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಸಿನಿಮಾ 'ಪಿಎಮ್ ನರೇಂದ್ರ ಮೋದಿ' ಚಿತ್ರವು ಮುಂದಿನ ತಿಂಗಳು, ಅಂದರೆ ಏಪ್ರಿಲ್ 05, 2019ರಂದು ಬಿಡುಗಡೆಯಾಗಲಿದೆ. ಈ ಮೊದಲು ಈ 'ಪಿಎಮ್ ನರೇಂದ್ರ ಮೋದಿ' ಚಿತ್ರವು ಏಪ್ರಿಲ್ 12ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಈ ಚಿತ್ರದಲ್ಲಿ ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಕಾಲದಿಂದ ಅವರು 2014ರಲ್ಲಿ ಬಹುಮತದ ಮೂಲಕ ಪ್ರಧಾನಿ ಪಟ್ಟವನ್ನು ಪಡೆದುಕೊಂಡ ವರೆಗಿನ ಗಲವು ಘಟನೆಗಳನ್ನು ಚಿತ್ರಕಥೆಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಚಿತ್ರವು ಈಗಾಗಲೇ ಬಹಳಷ್ಟು ನಿರೀಕ್ಷೆ ಮೂಡಿಸಿದೆ.
Vijaya Karnataka Web pmmodi0603


'ಪಿಎಮ್ ನರೇಂದ್ರ ಮೋದಿ' ಚಿತ್ರದಲ್ಲಿ ಬಹಭಾಷಾ ನಟ ವಿವೇಕ್ ಒಬಿರಾಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ನಟ ವಿವೇಕ್ ಒಬಿರಾಯ್ ಅವರು ವಿವಿಧ ಗೆಟ್‌ಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟ್ರೇಲರ್ ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಭಾರಿ ಸಂಚಲನ ಸೃಷ್ಟಿಸಿದ್ದು, ಚಿತ್ರದ ಬಿಡುಗಡೆಯನ್ನು ಕಾಯುವಂತೆ ಮಾಡಿದೆ. ಇತ್ತೀಚಿಗೆ ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಈ 'ಪಿಎಮ್ ನರೇಂದ್ರ ಮೋದಿ' ಚಿತ್ರವು ಕೂಡ ಒಂದು ಎನ್ನಬಹುದು.

'ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಕೂಡ ಇದೇ ರೀತಿ ಸಂಚಲನ ಸೃಷ್ಟಿಸಿತ್ತು. ಬಿಡಗಡೆ ಬಳಿಕ ಸೂಪರ್ ಹಿಟ್ ಆಗಿರುವುದು ಈಗ ಇತಹಾಸ. ಇನ್ನೂ ಕೂಡ ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೂಲಕ ನೈಜಘಟನೆಗಳ ಆಧಾರಿತ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಕಾಣಬಹುದು ಎಂಬುದು ಸಾಬೀತಾದಂತಾಗಿದೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ಮನಮೋಹನ್ ಸಿಂಗ್ ಅವರ ಬಯೋಪಿಕ್ ಸೌಂಡ್ ಮಾಡಲೇ ಇಲ್ಲ ಎಂಬುದು ಮಾತ್ರ ವಿಪರ್ಯಾಸ ಎನ್ನಬಹುದು.

ಒಟ್ಟಿನಲ್ಲಿ, ಮೋದಿ ಅವರ ಜೀವನಾಧಾರಿತ ಸಿನಿಮಾ 'ಪಿಎಮ್ ನರೇಂದ್ರ ಮೋದಿ' , ಮುಂದಿನ ತಿಂಗಳು, ಏಪ್ರಿಲ್ 5, 20198ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈ ಚಿತ್ರವು ಸದ್ಯಕ್ಕ ಸೌಂಡ್ ಮಾಡುತ್ತಿರುವ ರೀತಿ ನೋಡಿದರೆ ಸೂಪರ್ ಹಿಟ್ ಆಗಿ ಸಖತ್ ಗಳಿಕೆ ಮಾಡುವುದು ಖಂಡಿತ ಎನ್ನಬಹುದು. ಆದರೆ, ಸದ್ಯಕ್ಕಂತೂ ಚಿತ್ರವನ್ನು ತೆರೆಯ ಮೇಲೆ ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌