ತಾವು ನಟಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಣ ಗಳಿಸದಿದ್ದರೆ ತುಂಬಾ ಆತಂಕವಾಗುತ್ತದೆ ಎನ್ನುತ್ತಾರೆ ಪ್ರಚಿ ದೇಸಾಯಿ. ಇತ್ತೀಚೆಗೆ ತಮ್ಮ 'ಅಜರ್' ಹಿಂದಿ ಸಿನಿಮಾ ಸೋಲಿನಿಂದ ಅವರಿಗೆ ತುಂಬಾ ಬೇಸರವಾಗಿದೆಯಂತೆ. 'ಪ್ರತಿಯೊಂದು ಚಿತ್ರದ ಕುರಿತಾಗಿಯೂ ಕಲಾವಿದರಾದ ನಾವು ತುಂಬಾ ಭಾವುಕರಾಗಿರುತ್ತೇವೆ. ಚಿತ್ರತಂಡದ ಎಲ್ಲರೂ ಅತ್ಯಂತ ಪರಿಶ್ರಮದಿಂದ ಕೆಲಸ ಮಾಡಿರುತ್ತೇವೆ. ವರ್ಷಗಟ್ಟಲೆ ಕೆಲಸ ಮಾಡಿದ ಚಿತ್ರವೊಂದು ಬಾಕ್ಸ್ ಆಫೀಸ್ನಲ್ಲಿ ವಿಫಲವಾದರೆ ಅದನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ಇಂತಹ ಸಂದರ್ಭಗಳಲ್ಲಿ ಕಲಾವಿದರಿಗಿಂತ ತಂತ್ರಜ್ಞರು ಹೆಚ್ಚು ಬೇಸರ ಮಾಡಿಕೊಳ್ಳುತ್ತಾರೆ' ಎನ್ನುವುದು ಅವರ ಅನುಭವದ ನುಡಿ. ಇಮ್ರಾನ್ ಹಶ್ಮಿ ಹೀರೋ ಆಗಿ ನಟಿಸಿದ್ದ 'ಅಜರ್' ಚಿತ್ರದಲ್ಲಿ ಅವರು ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಮೊದಲ ಪತ್ನಿ ನೌರೀನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಾಚಿಗೆ ಸಿನಿಮಾ ಸೋಲಿನ ಆತಂಕ
ತಾವು ನಟಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಣ ಗಳಿಸದಿದ್ದರೆ ತುಂಬಾ ಆತಂಕವಾಗುತ್ತದೆ ಎನ್ನುತ್ತಾರೆ ಪ್ರಚಿ ದೇಸಾಯಿ.
Vijaya Karnataka Web 15 Aug 2016, 4:00 am