ಆ್ಯಪ್ನಗರ

ಅಬ್ಬಬ್ಬಾ... ಎದೆ ಝಲ್‌ ಎನ್ನುವಂತೆ ಯೋಗಾಸನ ಮಾಡಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲೂ ಅನುಷ್ಕಾ ಯೋಗಾಸನ ಮಾಡುವುದು ನಿಲ್ಲಿಸಿಲ್ಲ. ಅವರ ಈ ಕಾರ್ಯಕ್ಕೆ ವಿರಾಟ್‌ ಕೊಹ್ಲಿ ಬೆಂಬಲವಾಗಿ ನಿಂತಿದ್ದಾರೆ.

Vijaya Karnataka Web 1 Dec 2020, 5:26 pm
ಖ್ಯಾತ ನಟಿ ಅನುಷ್ಕಾ ಶರ್ಮಾ ಈಗ ತುಂಬು ಗರ್ಭಿಣಿ. ಪತಿ ವಿರಾಟ್‌ ಕೊಹ್ಲಿ ಜೊತೆಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅನುಷ್ಕಾ ಈ ಸಮಯದಲ್ಲೂ ಯೋಗಾಸನ ತಪ್ಪಿಸಿಲ್ಲ. ಅದರಲ್ಲೂ ಅತಿ ಕಷ್ಟದ ಕೆಲವು ಆಸನಗಳನ್ನೂ ಅವರು ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಒದಗಿಸುತ್ತಿದೆ ಈ ಲೇಟೆಸ್ಟ್‌ ಫೋಟೋ.
Vijaya Karnataka Web ಅನುಷ್ಕಾ ಶರ್ಮಾ


ಅಚ್ಚರಿ ನೀಡಿದ ಅನುಷ್ಕಾ ಯೋಗಾಸನ
ಕೆಲವೇ ದಿನಗಳ ಹಿಂದೆ ಶೂಟಿಂಗ್‌ನಲ್ಲಿ ಭಾಗವಹಿಸುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದರು ಅನುಷ್ಕಾ ಶರ್ಮಾ. ಆದರೆ ಈಗ ಅವರು ಹಂಚಿಕೊಂಡಿರುವ ಹೊಸ ಫೋಟೋ ನೋಡಿದರೆ ಎದೆ ಝಲ್‌ ಎನ್ನುವುದು ಖಂಡಿತ. ಸಾಮಾನ್ಯವಾಗಿ ಗರ್ಭಿಣಿಯರು ತುಂಬ ಕಷ್ಟದ ಕೆಲಸಗಳನ್ನು ಮಾಡುವುದಿಲ್ಲ. ಅಂಥದ್ದರಲ್ಲಿ ಅನುಷ್ಕಾ ಕೆಲವು ಕಷ್ಟದ ಆಸನಗಳನ್ನು ಮಾಡಿದ್ದಾರೆ. ಆ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯರ ಸಲಹೆಯಂತೆ ಶೀರ್ಷಾಸನ
'ಇದು ಅತಿ ಕಷ್ಟದ ಆಸನ. ನನ್ನ ಬದುಕಿನಲ್ಲಿ ಯೋಗಾಸನ ಒಂದು ಮುಖ್ಯ ಭಾಗ. ಕೆಲವು ಆಸನಗಳನ್ನು ಹೊರತುಪಡಿಸಿ ಬೇರೆಲ್ಲ ಆಸನಗಳನ್ನು ಮಾಡಬಹುದು ಎಂದು ನನಗೆ ವೈದ್ಯರು ಸಲಹೆ ನೀಡಿದ್ದಾರೆ. ಅದಕ್ಕೆ ಸೂಕ್ತ ಬೆಂಬಲ ಮತ್ತು ಸಹಾಯ ಬೇಕು. ಹಲವು ವರ್ಷಗಳಿಂದ ನಾನು ಶೀರ್ಷಾಸನ ಮಾಡುತ್ತ ಬಂದಿದ್ದೇನೆ. ಈಗ ಗೋಡೆ ಮತ್ತು ಗಂಡನ ಸಪೂರ್ಟ್‌ನಿಂದ ಅದೇ ಆಸನವನ್ನು ಮಾಡಿದ್ದೇನೆ' ಎಂದಿದ್ದಾರೆ ಅನುಷ್ಕಾ.

also read: ಶೂಟಿಂಗ್‌ಗೆ ಮರಳಿದ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ! ಯಾವುದು ಈ ಹೊಸ ಪ್ರಾಜೆಕ್ಟ್‌?

ಅತಿ ಎಚ್ಚರಿಕೆ ಅಗತ್ಯ
ಈ ರೀತಿ ಮಾಡುವಾಗ ಅತಿ ಎಚ್ಚರಿಕೆ ಅಗತ್ಯ ಎಂಬುದನ್ನೂ ಅವರು ಹೇಳಿದ್ದಾರೆ. ಈ ಆಸನಗಳನ್ನು ಮಾಡುವಾಗ ಅವರ ಯೋಗ ಟೀಚರ್‌ ಕೂಡ ವರ್ಚುವಲ್‌ ಆಗಿ ಜೊತೆಗಿದ್ದರು. ಗರ್ಭಿಣಿ ಆಗಿದ್ದಾಗಲೂ ಯೋಗ ಮಾಡಲು ಸಾಧ್ಯವಾಗಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಅನುಷ್ಕಾ ಹೇಳಿದ್ದಾರೆ. ಈ ಫೋಟೋ ಕಂಡು ಅನೇಕರು ಬೆರಗಾಗಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಕೂಡ ಅನುಷ್ಕಾಗೆ ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

also read: ಪತಿ ವಿರಾಟ್ ಕೊಹ್ಲಿಗೆ ಮುತ್ತಿಟ್ಟ ಅನುಷ್ಕಾ ಶರ್ಮಾ ಫೋಟೋ ನೋಡಿ ಕಣ್ಣೀರು ಹಾಕಿದ್ದೇಕೆ ಪ್ರಿಯಾಂಕಾ ಚೋಪ್ರಾ!

View this post on Instagram A post shared by AnushkaSharma1588 (@anushkasharma)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌