ಆ್ಯಪ್ನಗರ

ಪ್ರಿಯಾಂಕಾ ಡ್ರೆಸ್‌ ಕಂಡು ಪಡ್ಡೆಗಳು ಕಂಗಾಲು! ಅತಿಯಾದ ಗ್ಲಾಮರ್‌ನಿಂದ ಪೇಚಿಗೆ ಸಿಲುಕಿದ ದೇಸಿ ಗರ್ಲ್‌!

ಭಾರತದಲ್ಲಿದ್ದಾಗ ದೇಸಿ ಉಡುಗೆಯಲ್ಲಿ ಮಿಂಚುವ ಪ್ರಿಯಾಂಕಾ, ಫಾರೀನ್‌ ನೆಲೆದಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಕಂಗೊಳಿಸುತ್ತಾರೆ. ಆದರೆ ಅದು ಕೆಲವೊಮ್ಮೆ ಅತಿರೇಕದ ಗಡಿ ದಾಟುವುದೂ ಉಂಟು!

Vijaya Karnataka Web 27 Jan 2020, 12:23 pm
ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಜನಪ್ರಿಯತೆ ಗಳಿಸಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಆಯಾ ಪ್ರದೇಶಕ್ಕೆ ತಕ್ಕಂತೆ ಅವರ ಭಾಷೆ ಮತ್ತು ವೇಷಭೂಷಣವೂ ಬದಲಾಗುತ್ತಾ ಇರುತ್ತದೆ. ಭಾರತದಲ್ಲಿದ್ದಾಗ ದೇಸಿ ಉಡುಗೆಯಲ್ಲಿ ಮಿಂಚುವ ಪ್ರಿಯಾಂಕಾ, ಫಾರೀನ್‌ ನೆಲೆದಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಕಂಗೊಳಿಸುತ್ತಾರೆ. ಆದರೆ ಅದು ಕೆಲವೊಮ್ಮೆ ಅತಿರೇಕದ ಗಡಿ ದಾಟುವುದೂ ಉಂಟು! ಆಗೆಲ್ಲ ಅವರು ಸಿಕ್ಕಾಪಟ್ಟೆ ಟೀಕೆ ಎದುರಿಸಬೇಕಾದ ಸಂದರ್ಭವೂ ಎದುರಾಗುತ್ತದೆ. ಈಗ ಮತ್ತೆ ಪ್ರಿಯಾಂಕಾ ಅಂಥದ್ದೇ ಯಡವಟ್ಟು ಮಾಡಿಕೊಂಡಿದ್ದಾರೆ.
Vijaya Karnataka Web priyanka chopra trolled for grammy award function dress
ಪ್ರಿಯಾಂಕಾ ಡ್ರೆಸ್‌ ಕಂಡು ಪಡ್ಡೆಗಳು ಕಂಗಾಲು! ಅತಿಯಾದ ಗ್ಲಾಮರ್‌ನಿಂದ ಪೇಚಿಗೆ ಸಿಲುಕಿದ ದೇಸಿ ಗರ್ಲ್‌!


​​ಗ್ರ್ಯಾಮಿ ವೇದಿಕೆಯಲ್ಲಿ ಹಾಟ್‌ ಪ್ರಿಯಾಂಕಾ

ಸದ್ಯ ಇಂಟರ್‌ನೆಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಫೋಟೋಗಳೇ ಕಣ್ಣು ಕುಕ್ಕುತ್ತಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಗ್ರ್ಯಾಮಿ ಅವಾರ್ಡ್‌ ಕಾರ್ಯಕ್ರಮಕ್ಕೆ ಅವರು ಹಾಜರಾಗಿದ್ದರು. ಈ ವೇಳೆ ಕ್ಲಿಕ್ಕಿಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡುತ್ತಿದ್ದಂತೆಯೇ ಅನೇಕರು ದಂಗಾಗಿದ್ದಾರೆ. ಅದಕ್ಕೆ ಕಾರಣ; ಅತಿಯಾದ ಗ್ಲಾಮರ್‌! ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.

​ಲಕ್ಷಾಂತರ ಲೈಕ್ಸ್‌ ಪಡೆದ ಫೋಟೋ

ಫೇಸ್‌ಬುಕ್‌, ಇನ್ಸ್‌ಟಾಗ್ರಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕಾ ಈ ಫೋಟೋಗಳನ್ನು ಪೋಸ್ಟ್‌ ಮಾಡಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್ಸ್‌ ಪಡೆದುಕೊಂಡಿವೆ. ಶ್ವೇತ ವರ್ಣದ ಗೌನ್‌ ಆಕರ್ಷಕವಾಗಿದೆ. ಅನೇಕರು ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆದರೆ ಮಾದಕತೆ ಹೆಚ್ಚಾಯಿತು ಎಂಬ ಕಾರಣಕ್ಕೆ ಹಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂಥ ಬಟ್ಟೆ ಧರಿಸೋಕೆ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂಬ ಕಾಮೆಂಟ್‌ಗಳು ಬಂದಿವೆ.

​ಕಾಮೆಂಟ್‌ಗಳಲ್ಲಿ ಕಟು ಟೇಕೆ

'ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ. ಆದರೆ ನಿಮ್ಮ ಡ್ರೆಸ್‌ ಕೆಟ್ಟದಾಗಿದೆ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಈ ರೀತಿಯ ಬಟ್ಟೆ ಧರಿಸುವುದರಿಂದ ಜಗತ್ತಿನ ಎದುರು ಭಾರತೀಯ ಸಂಸ್ಕೃತಿಗೆ ನೀವು ಕಳಂಕ ತರುತ್ತಿದ್ದೀರಿ' ಎಂಬುದಾಗಿಯೂ ಅನೇಕರು ಕಿವಿ ಹಿಂಡಿದ್ದಾರೆ. ಇಂಥ ಕಾಸ್ಟ್ಯೂಮ್‌ ವಿನ್ಯಾಸಗೊಳಿಸಿದವರ ತಲೆಯಲ್ಲಿ ನಿಜಕ್ಕೂ ಬುದ್ಧಿ ಇದೆಯೋ ಇಲ್ಲವೋ ಎಂದೆಲ್ಲ ಅನೇಕರು ವ್ಯಂಗ್ಯ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಪ್ರಿಯಾಂಕಾ ತಲೆ ಕೆಡಿಸಿಕೊಂಡಿಲ್ಲ.

​ಕೆಲವರಿಂದ ಬಾಡಿ ಶೇಮಿಂಗ್‌!

ಇಂಥ ಫೋಟೋಗಳನ್ನು ಹಾಕಿದಾಗ ಮೆಚ್ಚುಗೆಯ ಜೊತೆಗೆ ನೆಗೆಟಿವ್‌ ಕಾಮೆಂಟ್‌ಗಳು ಬರುವುದು ಸಹಜ. 'ಇದೇನು ಅವಾರ್ಡ್‌ ಕಾರ್ಯಕ್ರಮವೋ ಅಥವಾ ಅಶ್ಲೀಲ ಜಾಲತಾಣವೋ ತಿಳಿಯುತ್ತಿಲ್ಲ. ಇಂದಿನ ದಿನಗಳಲ್ಲಿ ನೀಲಿ ತಾರೆಯರು ಕೂಡ ಅವಾರ್ಡ್‌ ಕಾರ್ಯಕ್ರಮಕ್ಕೆ ಸಭ್ಯವಾದ ಬಟ್ಟೆ ಧರಿಸಿ ಬರುತ್ತಾರೆ. ಅಂಥದ್ದರಲ್ಲಿ ನಿಮಗೇನಾಗಿದೆ?' ಎಂದು ಒಬ್ಬರು ಕಾಲೆಳೆದಿದ್ದಾರೆ. ಇಷ್ಟಕ್ಕೇ ಮುಗಿದಿಲ್ಲ, ಕೆಲವರ ಕಾಮೆಂಟ್‌ಗಳು ಸಭ್ಯತೆಯ ಮಿತಿ ಮೀರಿವೆ. ಫೋಟೋಗೆ ಪ್ರತಿಕ್ರಿಯಿಸಿದ ಹಲವರು ತುಂಬ ಕೆಟ್ಟ ಭಾಷೆ ಬಳಸಿದ್ದಾರೆ. ಬಾಡಿ ಶೇಮಿಂಗ್‌ ಮಾಡಲೂ ಕೆಲವರು ಹಿಂಜರಿದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌